
ಭಾಲ್ಕಿ:ಏ.8:ಚನ್ನಬಸವ ಪಟ್ಟದ್ದೇವರ, ಬಸವಲಿಂಗ ಪಟ್ಟದ್ದೇವರ ಮಾನವೀಯ, ಶೈಕ್ಷಣಿಕ, ಸಮಾಜೋಧಾರ್ಮಿಕ ಕಾರ್ಯಗಳು ವರ್ಣನಾತೀತ ಆಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಹೇಳಿದರು.
ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ, ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಆಗಮಿಸಿದ ಬಸವ ಜ್ಯೋತಿ ಯಾತ್ರೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಬಸವ ತತ್ವಗಳಲ್ಲಿ ಪರಿಹಾರವಿದೆ. ಬಸವತತ್ವ ಜಗದ ಬೆಳಕು. ಬಸವಣ್ಣನವರು, ಚನ್ನಬಸವ ಪಟ್ಟದ್ದೇವರು ಹಾಕಿಕೊಟ್ಟ ಬಸವಮಾರ್ಗದಲ್ಲಿ ಚಾಚೂ ತಪ್ಪದೇ ನಡೆಯುತ್ತಿದ್ದಾರೆ. ಅವರು ನಮ್ಮ ಭಾಗದ ಜ್ಞಾನದ ಬೆಳಕಾಗಿದ್ದಾರೆ ಎಂದು ತಿಳಿಸಿದರು.
ಹಿರೇಮಠದ ಶಿವಬಸವ ಸ್ವಾಮೀಜಿ ಮಾತನಾಡಿ,
ಬಸವಲಿಂಗ ಪಟ್ಟದೇವರು ತಮ್ಮ ಜೀವನದ ಅಮೂಲ್ಯ 75 ವರ್ಷಗಳ ಸಾರ್ಥಕ ಬದುಕು ಬಸವ ತತ್ವಕ್ಕಾಗಿ ಮೀಸಲಿಟ್ಟು ಸಮಾಜದಲ್ಲಿರುವ ಅಂಧಕಾರವನ್ನು ಹೊಡೆದೋಡಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಗುಂಡಪ್ಪ ಸಂಗಮಕರ್, ಬಸವರಾಜ ಪರಸಣ್ಣೆ, ನಾಗಶೆಟ್ಟಿ ಚೋಳಾ, ಕಾಶಪ್ಪ ಮೂಲ್ಗೆ, ನಾಗಯ್ಯ ಸ್ವಾಮಿ, ಮಹೇಶ ಸ್ವಾಮಿ ಮಠಪತಿ, ಅಶೋಕ ಸ್ವಾಮಿ, ಸುರೇಶ ಬಿರಾದರ, ಸುರೇಶ ಸಿ. ಬಿರಾದರ, ಸುರೇಶ ಪ್ರಭಾ, ಮಾಣಿಕ ಬಂಬುಳಗಿ, ಶಿವಶಂಕರ ಪ್ರಭಾ, ಸಂತೋಷ ಪತಂಗೆ, ಸಂತೋಷ ಜೋಜನೆ, ಪತ್ರಕರ್ತ ಬಸವರಾಜ ಎಸ್.ಪ್ರಭಾ, ಹುಲೇಪ್ಪ ಕುಪ್ಪೆ, ಉತ್ತಮ ನಾಗೂರೆ, ವೈಜಿನಾಥ ಪ್ರಭಾ, ವೈಜಿನಾಥ ಬಸಪ್ಪ ಪ್ರಭಾ, ರಾಜು ಕುಂಬಾರ, ಶರಣಪ್ಪ ಹೂಗಾರ, ಕಾಶಿನಾಥ ಧರ್ಮಣ್ಣ ಸೇರಿದಂತೆ ಇತರರು ಇದ್ದರು.




















