Home ಜಿಲ್ಲೆ ಬೆಂಗಳೂರು ಗುಣಮಟ್ಟದ ಆಹಾರ ನೀಡಿದರೆ ಹೋಟೆಲ್ ಉದ್ಯಮ ಯಶಸ್ವಿ

ಗುಣಮಟ್ಟದ ಆಹಾರ ನೀಡಿದರೆ ಹೋಟೆಲ್ ಉದ್ಯಮ ಯಶಸ್ವಿ

ಬೆಂಗಳೂರು:ಮೇ.೨೫- ಮನುಷ್ಯ ಆಹಾರವಿಲ್ಲದೆ ಬದುಕಲು ಸಾದ್ಯ ಇಲ್ಲದಿರುವುದರಿಂದ ಮನುಷ್ಯನ ಅಗತ್ಯಗನಗುಣವಾಗಿ ಉತ್ತಮ ಗುಣಮಟ್ಟದ ಆಹಾರ ನೀಡಿದಾಗ ಹೋಟೆಲ್ ಉದ್ಯಮ ಯಶಸ್ವಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ವಿಶ್ವ ಪ್ರಸನ್ನ ತೀರ್ಥರು ಹೇಳಿದರು.

ನಗರದ ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆಯ ವಿದ್ಯಾಪೀಠ ಪಕ್ಕದಲ್ಲಿ ಆರಂಭವಾಗಿರುವ ಗಜೇಂದ್ರ ವಿಲಾಸ್ ಬ್ರಾಹ್ಮಣ ಉಪಹಾರ ಹೋಟೆಲ್ ಅನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು ನಗರದಲ್ಲಿ ಉದ್ಯೋಗ ಒತ್ತಡದಲ್ಲಿ ಸಿಲುಕಿರುವ ಜನರು ಹೋಟೆಲ್ ಅನ್ನು ಹೆಚ್ಚು ಅವಲಂಬಿಸಿರುವುದರಿಂದ ಉತ್ತಮ ಗುಣಮಟ್ಟ ಸಾತ್ವಿಕ ಆಹಾರ ಸಕಾಲಿಕ ಸೇವೆ ನೀಡಿದಾಗ ಮಾತ್ರ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.

ಹೋಟೆಲ್ ಮಾಲೀಕರು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಹೋಟೆಲ್ ಉದ್ಯಮದಲ್ಲಿ ಯಶಸ್ಸನ್ನು ಕಾಣಲಿ ಉತ್ತಮ ಎತ್ತರಕ್ಕೆ ಬೆಳೆದು ನೂರಾರು ಜನಕ್ಕೆ ಉದ್ಯೋಗ ನೀಡುವಂತಹ ಆಗಲಿ ಎಂದು ಹಾರೈಸಿದರು.

ಹೋಟೆಲಿನ,ಬಾಲಾಜಿ ತಿಮ್ಲಾಪುರ ಮಾತನಾಡಿ ಗ್ರಾಹಕರ ಅಭಿರುಚಿಯ ತಕ್ಕಂತೆ ಉತ್ತಮ ಸೇವೆ ನೀಡುವ ಮೂಲಕ ಹೋಟೆಲ್ ಉತ್ತಮ ಎತ್ತರಕ್ಕೆ ಬೆಳೆಸುತ್ತೇವೆ ಎಂದರು.

ಪ್ರತಿನಿತ್ಯ ಬಾಳೆಎಲೆ ಊಟದೊಂದಿಗೆ ಆರಂಭವಾಗಲಿರುವ ಹೋಟೆಲ್ ವಿಶೇಷ ತಿಂಡಿ ತಿನಿಸುಗಳನ್ನು ನೀಡಿ ಸ್ವಸಹಾಯ ಪದ್ಧತಿ ಹಾಗೂ ಕೂತು ತಿನ್ನುವ ವ್ಯವಸ್ಥೆಯನ್ನು ಮಾಡಲಾಗಿದ್ದು ಇದರಲ್ಲಿ ಗುಣಮಟ್ಟದ ಪಾರ್ಟಿ ಹಾಲನ್ನು ಕೂಡ ಮಾಡಲಾಗಿದ್ದು ಗ್ರಾಹಕರಿಗೆ ಯಾವುದೇ ಕೊರತೆ ಬಾರದಂತೆ ಸೇವೆ ಮಾಡುವ ಮೂಲಕ ಆರೋಗ್ಯಕ್ಕೆ ಹಾನಿಕರವಾದ ಪದಾರ್ಥಗಳನ್ನು ಬಳಸುತ್ತಿಲ್ಲ ಎಂದು ತಿಳಿಸಿದರು.

ರಘುನಾಥ್ ಸೋಮಯಜಿ ಗುರುಪ್ರಸಾದ್, ರವಿ ಪಾಂಗಲ್, ಗೀತಾ ಉಪಸ್ಥಿತರಿದ್ದರು.