Home ಜಿಲ್ಲೆ ಐತಿಹಾಸಿಕ ಮೂಲ ನಂದೀಶ್ವರ ( ಬಸವೇಶ್ವರ ) ಜಾತ್ರೆ ಪಲ್ಲಕ್ಕಿ ಮಹೋತ್ಸವದೊಂದಿಗೆ ಆರಂಭ

ಐತಿಹಾಸಿಕ ಮೂಲ ನಂದೀಶ್ವರ ( ಬಸವೇಶ್ವರ ) ಜಾತ್ರೆ ಪಲ್ಲಕ್ಕಿ ಮಹೋತ್ಸವದೊಂದಿಗೆ ಆರಂಭ

ಬಸವನ ಬಾಗೇವಾಡಿ :ಆಗಸ್ಟ್ 31 ರಿಂದ ಸೆಪ್ಟೆಂಬರ್ 4ರ ವರೆಗೆ ಐದು ದಿನಗಳ ಕಾಲ ನಡೆಯಲಿರುವ ಪಟ್ಟಣದ ಆರಾಧ್ಯ ದೈವ ಮೂಲ ನಂದೀಶ್ವರ ( ಬಸವೇಶ್ವರ ) ಐತಿಹಾಸಿಕ ಜಾತ್ರಾ ಮಹೋತ್ಸವ ಸೋಮವಾರ ಸಾಂಪ್ರದಾಯಿಕ ಮೂಲ ನಂದೀಶ್ವರ ( ಬಸವೇಶ್ವರ ) ಪಲ್ಲಕ್ಕಿ ಉತ್ಸವಕ್ಕೆ ಅಪಾರ ಜನಸ್ತೋಮದ ಬಸವ ಜಯ ಘೋಷದೊಂದಿಗೆ ಚಾಲನೆ ದೊರಕಿ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ಜರುಗಿತು ಪಟ್ಟಣದ ಐತಿಹಾಸಿಕ ಮೂಲ ನಂದೀಶ್ವರ ( ಬಸವೇಶ್ವರ ) ದೇವಸ್ಥಾನದಲ್ಲಿ ಮೂಲ ನಂದೀಶ್ವರ ದೇವರಿಗೆ ಬೆಳಿಗ್ಗೆ ರುದ್ರಾಭಿಷೇಕ ನೆರವೇರಿಸಿದ ನಂತರ ಮೂಲ ನಂದೀಶ್ವರ ದೇವರಿಗೆ ಜಾತ್ರಾಂಗವಾಗಿ ಬೆಳ್ಳಿ ಅಲಂಕಾರ ವಿಶೇಷ ಪೂಜೆಯನ್ನು ಅರ್ಚಕರಾದ ಗೌರಿಶಂಕರ ಚರಂತಿಮಠ ವಿಶ್ವನಾಥ ಕಾಳೆಸ್ತೇಶ್ವರ ಮಠ ನೆರವೇರಿಸಿದರು ಬೆಳಗಿನ ಜಾವ 3:00ಯಿಂದಲೇ ವಿವಿಧಡೆಗಳಿಂದ ಆಗಮಿಸಿದ್ದ ರಾಜ್ಯದ ವಿವಿಧ ಜಿಲ್ಲೆಯ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ಅಭಿಷೇಕ ಮಾಡಿಸಿ ಭಕ್ತಿ ಭಾವ ಸಮರ್ಪಿಸಿದರು ಅಪಾರ ಪ್ರಮಾಣದ ಭಕ್ತರು ದೇವಸ್ಥಾನದ ಸುತ್ತಲೂ ದೀಡು ನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸಿದರು ಕೆಲವರು ದೇವರಿಗೆ ಎಲೆ ಪೂಜೆ ಮಾಡಿಸಿದರು ಸಂಪ್ರದಾಯದಂತೆ ದೇವಸ್ಥಾನದಿಂದ ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಪಟ್ಟಣದ ಹಿರಿಯರು ಮುಖಂಡರು ಬಸವ ಭಕ್ತರು ವಿರಕ್ತ ಮಠಕ್ಕೆ ತೆರಳಿ ಶ್ರೀ ಮಠದ ಸಿದ್ದಲಿಂಗ ಸ್ವಾಮೀಜಿ ಶಿವಾನಂದ ಈ ಕರ್ಮತ್ಯ ಅವರನ್ನು ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ವಿವಿಧ ವಾದ್ಯ ಮೇಳದೊಂದಿಗೆ ಬರಮಾಡಿಕೊಂಡರು ನಂತರ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಶಾಸಕ ಶಿವಾನಂದ್ ಪಾಟೀಲ್ ಅವರು ಹಿರಿಯರ ಸಮ್ಮುಖದಲ್ಲಿ ದೇವಸ್ಥಾನದಲ್ಲಿದ್ದ ಬೆಳ್ಳಿ ನಂದಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಕಟ್ಟೆ ವರೆಗೆ ತೆಗೆದುಕೊಂಡು ಬಂದು ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಬೆಳ್ಳಿ ಉತ್ಸವ ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಭಕ್ತರ ಜೈ ಘೋಷದೊಂದಿಗೆ ಅಲಂಕೃತ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಅದ್ದೂರಿ ಚಾಲನೆ ದೊರಕಿತು ಶಾಸಕ ಶಿವಾನಂದ್ ಪಾಟೀಲ್ ಅವರು ದೇವಸ್ಥಾನದ ಆವರಣ ದಾಟುವವರಿಗೆ ಪಲ್ಲಕ್ಕಿ ಹೊತ್ತ ಸಾಗಿದರು ನಂತರ ಪಲ್ಲಕ್ಕಿಯು ಸಂಪ್ರದಾಯದಂತೆ ಸಿದ್ದಪ್ಪ ಮೋದಿಯವರ ಮನೆಗೆ ತೆರಳಿ ಐತಿಹಾಸಿಕ ಹೋರಿಮಟ್ಟಿ ಗುಡ್ಡದ ದೇವಸ್ಥಾನದ ಕಳಸಕ್ಕೆ ಪೂಜಿ ಸಲ್ಲಿಸಿದ ನಂತರ ಪಲ್ಲಕ್ಕಿ ಉತ್ಸವ ಮೆರವಣಿಗೆ ಅಗಸಿ ಬಸವೇಶ್ವರ ವೃತ್ತ ಇಂಗಳೇಶ್ವರ ರಸ್ತೆ ಮಾರ್ಗವಾಗಿ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ಅಪಾರ ಭಕ್ತರೊಂದಿಗೆ ತೆರಳಿತು ಹೋರಿ ಮುಟ್ಟಿ ಗುಡ್ಡಕ್ಕೆ ಪಲ್ಲಕ್ಕಿ ಉತ್ಸವ ತೆರಳಿದ ನಂತರ ಗುಡ್ಡದಲ್ಲಿ ಶಿವಾನಂದ ಈರಕಾರ ಮುತ್ಯಾ ಅವರು ಈ ವರ್ಷದ ಹೇಳಿಕೆಗಳನ್ನು ಜರುಗಿದವು ನಂತರ ಬಸವನಹಳ್ಳಿ ಗ್ರಾಮಕ್ಕೆ ತೆರಳಿದ ಗ್ರಾಮಸ್ಥರು ಪಲ್ಲಕ್ಕಿ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿಯು ಬುತ್ತಿ ಬಸವಣ್ಣ ದೇವಸ್ಥಾನಕ್ಕೆ ಬರುತ್ತಿದ್ದಂತೆ ಭಕ್ತರು ಪಲ್ಲಕ್ಕಿ ಹೊತ್ತು ಭಕ್ತಿ ಭಾವ ಮೆರೆದರು ಕೆಲ ಭಕ್ತರು ಪಲ್ಲಕ್ಕಿ ಮುಂದೆ ಉರುಳು ಸೇವೆ ಸಲ್ಲಿಸುವ ಮೂಲಕ ತೀರಿಸಿದರು ಇದೇ ಸಂದರ್ಭದಲ್ಲಿ ಕೊಟ್ರ ಶೆಟ್ಟಿ ಮನೆತನದವರು ಮನೆಯಿಂದ ತಂದಿದ್ದ ಕಿಚಡಿ ಬಾನ ಚಟ್ನಿ ಚಪಾತಿ ಕುಂಬಳಕಾಯಿ ಪಲ್ಯ ಸೇರಿದಂತೆ ಬಗೆ ಬಗೆಯ ಖಾದ್ಯಗಳನ್ನು ಭಕ್ತರಿಗೆ ದಾಸೋಹದ ಸೇವೆಗೈದರು ನಂತರ ಪಲ್ಲಕ್ಕಿಯು ವಾಡೆದ ಅವರ ತೋಟಕ್ಕೆ ಆಗಮಿಸಿದ ನಂತರ ಭಕ್ತರು ಪೂಜೆ ಸಲ್ಲಿಸಿದರು ಸಂಜೆ ಪಲ್ಲಕ್ಕಿಯು ಪಟ್ಟಣದ ಕಂಬಿಕಟ್ಟೆಗೆ ಆಗಮಿಸುತ್ತಿದ್ದಂತೆ ಅಪಾರ ಸಂಖ್ಯೆ ಭಕ್ತಿ ಸಮೂಹ ಬಸವ ಜಯ ಘೋಷದೊಂದಿಗೆ ಭವ್ಯವಾಗಿ ಸ್ವಾಗತಿಸಿಕೊಂಡರು ಇದೇ ಸಂದರ್ಭದಲ್ಲಿ ದೇವಸ್ಥಾನದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಆಕರ್ಷಕ ಸಿಡಿಮದ್ದು ಜನಮನ ಸೂರ್ ಗೊಂಡಿತು ಬಸವನಬಾಗವಾಡಿ ಅಭಿವೃದ್ಧಿ ಮಂಡಳಿಯಿಂದ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು ಕಲಾತಂಡಗಳ ಮೆರಗು ಉತ್ಸವದಲ್ಲಿ ಭಟ್ಕಳದ ಚಂಡಿ ಮೇಳ ಕೊಟ್ಟೂರಿನ ನಂದಿಕೋಲು ಮಹಾರಾಷ್ಟ್ರ ಸಾಂಗ್ಲಿಯ ಡೊಳ್ಳಿನ ಕುಣಿತ ಅರ್ಜುನಗಿಯ ಗೊಂಬೆ ಕುಣಿತ ಚಬ ನೂರು ಶನಾಯಿ ವಾದನ ಮಸಬಿನಾಳದ ಬೆಂಜೋ ಕೊನ್ನೂರಿನ ರಾಯಣ್ಣ ಮಹಿಳಾ ಡೊಳ್ಳಿನ ಕುಣಿತ ಬಸವನಬಾಗೇವಾಡಿಯ ಬ್ಯಾಂಡ ಸೇರಿದಂತೆ ವಿವಿಧ ಕಲಾತಂಡಗಳು ವಾದ್ಯ ಮೇಳಗಳು ಗಜರಾಜ ಉತ್ಸವಕ್ಕೆ ಮೆರಗು ತಂದವು ಪಲ್ಲಕ್ಕಿ ಉತ್ಸವದಲ್ಲಿ ಸಿದ್ದಲಿಂಗ ಸ್ವಾಮೀಜಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಅಯುಕ್ತರಾದ ಗುರುನಾಥ ದಡ್ಡಿ ತಾಲೂಕ ದಂಡಾಧಿಕಾರಿ ಶ್ರೀ ವೈ ಎಸ್ ಸೋಮನಕಟ್ಟಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಹಾರಿವಾಳ ಬಸವೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ಶ್ರೀಕಾಂತ್ ಕೊಟ್ರಶೆಟ್ಟಿ ವಿ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರ್ ಗೌಡ ಪಾಟೀಲ ಜಗದೀಶ್ ಕೊಟ್ರಶೆಟ್ಟಿ ರವಿ ಪಟ್ಟಣಶೆಟ್ಟಿ ಭರತ್ ಅಗರ್ವಾಲ್ ಶೇಖರ ಗೊಳಸಂಗಿ ರವಿ ರಾಠೋಡ್ ಚಂದ್ರಶೇಖರ್ ಗೌಡ ಪಾಟೀಲ ಡಾ ಬಸವರಾಜ ಕೋಟಿ ಸುರೇಶ ಗೌಡ ಪಾಟೀಲ ಸಂಕನಗೌಡ ಪಾಟೀಲ ರಮೇಶ್ ಯಳಮೇಲಿ ಶೇಖರ ನಾಯ್ಕೋಡಿ ಬಾಲಚಂದ್ರ ಮುಂಜಾನೆ ಉಮೇಶ ಹಾರಿವಾಳ ಬಸವರಾಜು ಗೊಳಸಂಗಿ ಗೋಪಾಲ ಅಗರ್ವಾಲ್ ಎಂ ಜಿ ಆದಿಗೊಂಡ ಬಸವರಾಜ ಹಾರಿವಾಳ ಶ್ರೀಮತಿ ಮಾದೇವಿ ಬಿರಾದಾರ ಜಗದೇವಿ ಗುಂಡಳ್ಳಿ ಪಂಚಾಕ್ಷರಿ ಕಾಳಹಸ್ತೇಶ್ವರ ಮಠ ಸಂಗನಗೌಡ ಚಿಕ್ಕೊಂಡ ಶಿವಲಿಂಗಯ್ಯ ತಗ್ಗಿನ ಮಠ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ವಿವಿಧ ಸಂಘ ಸಂಸ್ಥೆ ಮುಖಂಡರು ಜಾತ್ರಾ ಕಮಿಟಿ ಪದಾಧಿಕಾರಿಗಳು ಸೇವಾ ಸಮಿತಿ ನಿರ್ದೇಶಕರು ಊರಿನ ಹಿರಿಯರು ಯುವಕರು ತಾಯಂದಿರು ಅಪಾರ ಪ್ರಮಾಣದ ಜನಸ್ತೋಮ ಭಾಗವಹಿಸಿತ್ತು ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ ವಿವೇಕ ಬ್ರಿಗೇಡ್ ಹಾಗೂ ಗೆಳೆಯರ ಬಳಗ ಸೇರಿದಂತೆ ವಿವಿಧ ಮುಖಂಡರು ಭಕ್ತರಿಗೆ ಪ್ರಸಾದ ಸೇವೆ ಸಲ್ಲಿಸಿದರು ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ಸಿಪಿಐ ಗುರು ಶಾಂತ ದಾಶಾಳ ಅವರು ದೇವಸ್ಥಾನದ ದ್ವಾರಬಾಗಿಲು ಮುಂಭಾಗ ಟ್ರಾಫಿಕ್ ಸಮಸ್ಯೆ ಆಗದಂತೆ ಸೂಕ್ತ ಕ್ರಮ ತೆಗೆದುಕೊಂಡಿದ್ದರು ವಾಹನಗಳಿಗೆ ಬೇರೆ ಮಾರ್ಗ ಮುಖಾಂತರ ಹೋಗಲು ಸೂಚಿಸಿದ್ದರಿಂದ ದೇವಸ್ಥಾನ ಮುಂಭಾಗದಲ್ಲಿ ಯಾವುದೇ ತರದ ಟ್ರಾಫಿಕ್ ಸಮಸ್ಯೆ ಆಗಲಿಲ್ಲ