ಕೆಎಸ್ಸಾರ್ಟಿಸಿ ನಿಗಮದ ಪ್ರಗತಿಗೆ ಚಾಲಕರು-ನಿರ್ವಾಹಕರ ಶ್ರಮ ಅಪಾರ

ಅರಸೀಕೆರೆ, ಫೆ. ೩- ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಮಗಳೂರು ವಿಭಾಗದ ವತಿಯಿಂದ ಇಂಧನ ಉಳಿತಾಯ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಮಾಸ ಕಾರ್ಯಕ್ರಮವನ್ನು ಅರಸೀಕೆರೆ ಘಟಕದ ಆಯೋಜಿಸಲಾಗಿತ್ತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಅವರು, ರಸ್ತೆ ಸುರಕ್ಷತೆಯ ಬಗ್ಗೆ ಚಾಲಕರು ಮತ್ತು ನಿರ್ವಾಹಕರು ಪ್ರಮುಖವಾಗಿ ಮತ್ತು ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕು. ನೀವು ಹೆಚ್ಚಿನ ಜಾಗೃತೆ ವಹಿಸಿದಲ್ಲಿ ಅಪಘಾತಗಳು ಕಡಿಮೆಯಾಗುವುದರ ಮೂಲಕ ನಿಗಮಕ್ಕೆ ದೊಡ್ಡಮಟ್ಟದ ನಷ್ಟವನ್ನು ನೀವಿಬ್ಬರು ತಪ್ಪಿಸಬಹುದಾಗಿದೆ ಎಂದರು.


ತಿಂಗಳಿಗೆ ನಾಲ್ಕರಿಂದ ಐದು ಅಪಘಾತಗಳು ಆಗುತ್ತಾ ಇವೆ. ಇದರಿಂದ ೨೫ ರಿಂದ ೩೦ ಲಕ್ಷದವರೆಗೆ ನಿಗಮ ಪರಿಹಾರ ನೀಡಬೇಕಾದ ಅವಶ್ಯಕತೆ ಇದೆ. ಇನ್ನೂ ಎರಡುವರೆ ಕೋಟಿಯಷ್ಟು ಮೊತ್ತವನ್ನು ಅಪಘಾತಕ್ಕೀಡದ ವ್ಯಕ್ತಿಗಳಿಗೆ ನೀಡಬೇಕಾಗಿದೆ ಎಂದು ಮಾಹಿತಿ ನೀಡಿದರು.


ಇಂಧನ ಉಳಿತಾಯ ಮತ್ತು ರಸ್ತೆ ಸುರಕ್ಷತಾ ಸಪ್ತಹ ವರ್ಷಕ್ಕೆ ಒಂದು ಮಾಸ ಮಾತ್ರ ಹಮ್ಮಿಕೊಳ್ಳಲಾಗಿದೆ ಇದನ್ನು ಮುಂದುವರೆದು ವರ್ಷಕ್ಕೆ ನಾಲ್ಕೈದು ಬಾರಿ ಮಾಡಲು ನಾವು ಹುತ್ಸುಕರಾಗಿದ್ದೇವೆ. ಚಾಲಕರು ಸಮಯಕ್ಕೆ ಸರಿಯಾಗಿ ಘಟಕದಿಂದ ಹೊರಡುವ ಸಮಯವನ್ನು ಪಾಲನೆ ಮಾಡಬೇಕು ಆದ್ದರಿಂದ ತಮಗೂ ಸಹ ಒತ್ತಡ ಕಮ್ಮಿಯಾಗುತ್ತದೆ, ಮತ್ತು ಐದು ನಿಮಿಷವಾದರೂ ಧ್ಯಾನ ಮಾಡಬೇಕು ರಸ್ತೆಯಲ್ಲಿ ಚಲಿಸುವಾಗ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದಾಗ ತಾವು ತಾಳ್ಮೆ ಕಳೆದುಕೊಳ್ಳಬಾರದು ತಮ್ಮ ಸುರಕ್ಷತಾ ಚಾಲನೆ ಮತ್ತು ಉತ್ತಮ ಚಾಲನೆ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಚಾಲಕರಿಗೆ ಕಿವಿಮಾತು ಹೇಳಿದರು.


ಕೆಎಸ್ಸಾರ್ಟಿಸಿ ಡಿಎಂ ಈ. ಪ್ರದೀಪ್‌ಕುಮಾರ್ ಮಾತನಾಡಿ, ಚಾಲಕ ಮತ್ತು ನಿರ್ವಾಹಕರು ನಮ್ಮ ನಿಗಮದ ಹೆಚ್ಚಿನ ಶ್ರಮಜೀವಿಗಳು. ಅದರಲ್ಲೂ ಚಾಲಕರು ಕರ್ತವ್ಯದ ಪೂರ್ಣ ಅವಧಿಯ ಪರಿಪೂರ್ಣ ಸಮಯವನ್ನು ಎಚ್ಚರದಿಂದ ಮತ್ತು ಜಾಗರೂಕತೆಯಿಂದ ನಿರ್ವಹಿಸುತ್ತಾರೆ. ಇದರಿಂದ ನಮ್ಮ ನಿಗಮದ ಬೆಳವಣಿಗೆಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.


ಉತ್ತಮ ಚಾಲಕರಿಂದ ನಮ್ಮ ಸಾರಿಗೆ ಸಾರ್ವಜನಿಕರು ಸರ್ಕಾರಿ ಸಾರಿಗೆ ನಮ್ಮ ಸಾರಿಗೆ ನಮ್ಮ ಸುರಕ್ಷತೆಯ ಸಾರಿಗೆ ಎಂದು ಅಚ್ಚುಮೆಚ್ಚಿನಿಂದ ನಮ್ಮ ಸಾರಿಗೆಯನ್ನು ಹೆಚ್ಚು ನಂಬುತ್ತಾರೆ ಮತ್ತು ಬಳಸುತ್ತಾರೆ ನಾವು ಚಾಲಕರಿಗೆ ಹೇಳುವುದು ಇಷ್ಟೇ ನೀವು ಚಾಲನಾ ಸಮಯದಲ್ಲಿ ಪಂಚಸೂತ್ರಗಳನ್ನು ಪರಿಪಾಲನೆ ಮಾಡಬೇಕು ಅದರಿಂದ ಸುರಕ್ಷತೆ ಜೊತೆಗೆ ಇಂಧನ ಉಳಿತಾಯ ತಾನೇ ತಾನಾಗಿ ಬರುತ್ತದೆ ಎಂದು ಹೇಳಿದರು ಇಂಧನ ಉಳಿತಾಯ ನಮಗೆ ಯಕ್ಷಪ್ರಶ್ನೆಯಾಗಿದೆ ಏಕೆಂದರೆ ಇಂಧನವನ್ನ ಹೊರದೇಶಗಳಿಂದ ಹೆಚ್ಚಿನ ಸುಂಕ ಕೊಟ್ಟು ನಾವು ಆಮದು ಮಾಡಿಕೊಳ್ಳಬೇಕಾಗಿದೆ ಇದು ನಿಮಗೆ ತಿಳಿದಿರಲಿ ಎಲ್ಲ ಚಾಲಕರು ಜಾಗೃತಿಯ ಕರ್ತವ್ಯ ಪಾಲನೆಯ ಸುರಕ್ಷತೆಯ ಇಂಧನ ಉಳಿತಾಯದ ಅರಿವನ್ನ ತಮ್ಮಲ್ಲಿ ತಾವು ಮನನ ಮಾಡಿಕೊಂಡರೆ ಸಾಕು ಅದನ್ನು ಪಾಲನೆ ಮಾಡಿದರೆ ಸಾಕು ನಿಗಮಕ್ಕೆ ವಾರ್ಷಿಕವಾಗಿ ಕೋಟಿಗಟ್ಟಲೆ ಉಳಿತಾಯ ಬರುತ್ತದೆ ಎಂದು ಹೇಳಿದರು.


ಸಹಾಯಕ ಆರಕ್ಷಕ ನಿರೀಕ್ಷಕರಾದ ದನಪಾಲ್ ನಾಯ್ಕ್ ಮಾತನಾಡಿ, ನಮ್ಮನ್ನು ಸಾರ್ವಜನಿಕರು ನಮ್ಮ ಸರ್ಕಾರಿ ಅಧಿಕಾರಿಗಳು ನಮ್ಮ ಸರ್ಕಾರಿ ಸಾರಿಗೆ ನಮಗೋಸ್ಕರ ಸೇವೆ ಮಾಡುವವರು ಎಂದು ಹೆಚ್ಚಿನ ನಂಬಿಕೆಯನ್ನು ನಮ್ಮ ಮೇಲೆ ಇರಿಸಿರುತ್ತಾರೆ. ಅದಕ್ಕೆ ಲೋಪವಾಗದಂತೆ ಜಾಗರೂಕತೆಯಿಂದ ಕರ್ತವ್ಯ ಪಾಲನೆ ಮಾಡುವುದು, ನಮ್ಮೆಲ್ಲರ ಜವಾಬ್ದಾರಿಯಾಗಿದೆ. ತಾವು ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಸಹಾಯವಾಣಿ ೧೦೯೮ ಆಗಿದ್ದು ಅನಾಥ ಮಕ್ಕಳು ಸಿಕ್ಕಿದ್ದಲ್ಲಿ ಅಥವಾ ಮಕ್ಕಳು ತಪ್ಪಿಸಿಕೊಂಡು ಬಂದಿದ್ದು ಕಂಡು ಬಂದಲ್ಲಿ ಈ ಸಹಾಯವಾಣಿಗೆ ಸಂಪರ್ಕಿಸಿ ಎಂದು ಅರಿವು ಮೂಡಿಸಿದರು.