Home ಜಿಲ್ಲೆ ಗುರು-ಶಿಷ್ಯ ಸಂಬAಧ ಪರಮ ಪವಿತ್ರ

ಗುರು-ಶಿಷ್ಯ ಸಂಬAಧ ಪರಮ ಪವಿತ್ರ

ಸಂಜೆವಾಣಿ ವಾರ್ತೆ
ಬೀದರ್: ಗುರು-ಶಿಷ್ಯ ಸಂಬAಧ ಪರಮಾತ್ಮನೊಂದಿಗೆ ಬೆರೆಯುವ ಪರಮ ಪವಿತ್ರ ಸಂಬAಧ ಎಂದು ಜಿಲ್ಲಾ ಆಯುಷ್ಯ ಆಸ್ಪತ್ರೆಯ ತಜ್ಞ ವೈದ್ಯೆ ಡಾ. ವಚನಶ್ರೀ ಪುರಾಣಿಕ ಮಠ ಹೇಳಿದರು.
ಮರಣವೇ ಮಹಾನವಮಿ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಇಲ್ಲಿಯ ಬಸವಗಿರಿಯಲ್ಲಿ ನಡೆದ ಗುರು-ಶಿಷ್ಯ ಸಂಬAಧ ಕುರಿತ ಗೋಷ್ಠಿಯಲ್ಲಿ ಅವರು ಅನುಭಾವ ಮಂಡಿಸಿದರು.
ಗುರು-ಶಿಷ್ಯ ಸಂಬAಧವು ಭೌತಿಕ ಲಾಭ-ಹಾನಿ, ಲೌಕಿಕ ಸುಖ-ದುಃಖಗಳನ್ನು ಮೀರಿದ ಸಂಬAಧ. ಬಂಧನಕಾರಿಯಾಗದೆ, ಮುಕ್ತಿ ಪಥಕ್ಕೆ ಹೆದ್ದಾರಿಯಾಗಿದೆ ಎಂದು ತಿಳಿಸಿದರು.
ಭೌತಿಕ ಹಾಗೂ ಲೌಕಿಕ ಸಂಬAಧಗಳು ಶಾಶ್ವತವಲ್ಲ. ಸಂತಸಕ್ಕಿAತ ಹೆಚ್ಚು ನೋವು ನೀಡುವ ಸಂಬAಧಗಳಾಗಿವೆ ಎಂದು ಹೇಳಿದರು.
ಸದ್ಗುರುವಿಗೆ ಶರಣಾಗಿ, ತನು-ಮನ-ಧನಗಳನ್ನು ಸಮರ್ಪಿಸಿ, ಶ್ರದ್ಧೆಯಿಂದ ಸೇವಿಸಿದರೆ ಗುರು ಮುಟ್ಟಿ ಗುರುವಾಗುವ ಅವಕಾಶ ಬಸವ ತತ್ವದಲ್ಲಿದೆ ಎಂದು ತಿಳಿಸಿದರು.
೧೨ನೇ ಶತಮಾನದಲ್ಲಿ ಗುರು- ಶಿಷ್ಯ ಸಂಬAಧಕ್ಕೆ ಹೊಸ ಭಾಷ್ಯೆ ಬರೆದವರು ಬಸವಣ್ಣ. ಅಂಥ ಸಾವಿರಾರು ರೂಪಕಗಳನ್ನು ನಿರ್ಮಿಸಿದರು. ಅಂದಿನ ಗುರು-ಶಿಷ್ಯ ಪರಂಪರೆಗೆ ಇಂದಿನ ಸೇರ್ಪಡೆ ಅಥವಾ ಉದಾಹರಣೆ ಅಕ್ಕ ಅನ್ನಪೂರ್ಣತಾಯಿ ಹಾಗೂ ಪ್ರಭುದೇವ ಸ್ವಾಮೀಜಿ ಎಂದು ಬಣ್ಣಿಸಿದರು.
ಸಾನಿಧ್ಯ ವಹಿಸಿದ್ದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಗುರು-ಶಿಷ್ಯ ಸಂಬAಧ ಬೀಜ-ವೃಕ್ಷದಂತೆ. ಶಿಷ್ಯನಿಗೆ ಗುರುವಿನಲ್ಲಿ ಅನುಮಾನ ಇರಬಾರದು. ಗುರುವಿಗೆ ಸಮರ್ಪಿತನಾಗಿರಬೇಕು ಎಂದು ತಿಳಿಸಿದರು.
ತೆಲುಗುನಾಡಿನಿಂದ ಕಲ್ಯಾಣಕ್ಕೆ ಬಂದ ತಂಗಟೂರು ಮಾರಯ್ಯ ೧೨ ವರ್ಷ ಗುರು ಬಸವಣ್ಣನವರ ಸೇವೆಯಿಂದಲೇ ಶಿವಯೋಗದ ಉತ್ತುಂಗಕ್ಕೇರಿದ್ದರು. ಒಂದು ಹೆಚ್ಚಿನ ಶರಣಾರ್ಥಿಯ ಭಾರ ಇಳಿಸಲು ತೊಡೆಯ ಚರ್ಮದಿಂದ ಗುರುವಿಗೆ ಪಾದರಕ್ಷೆ ಅರ್ಪಿಸಿದ ಹರಳಯ್ಯ, ವಚನಗಳನ್ನು ಉಳಿಸಲು ಪ್ರಾಣಾರ್ಪಣೆಗೆ ಸಿದ್ಧರಾಗಿದ್ದ ಸಾವಿರ-ಸಾವಿರ ಶಿಷ್ಯ ಬಳಗ, ಜಂಗಮರನ್ನು ರೂಪಿಸಿದ ಶ್ರೇಯ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸ್ತ್ರೀ ರೋಗ ತಜ್ಞೆ ಡಾ. ಭುವನೇಶ್ವರಿ ಪ್ರಶಾಂತ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆ ಪುರಾತನವಾದದ್ದು. ದ್ರೋಣಾಚಾರ್ಯ-ಏಕಲವ್ಯ, ಪರಶುರಾಮ-ಕರ್ಣರಿಂದ ಹಿಡಿದು ಪರಮಹಂಸ-ವಿವೇಕಾನAದರ ವರೆಗೆ ಅನೇಕ ಉದಾಹರಣೆಗಳು ಇವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾವತಿ ಗೋರನಾಳೆ ಅವರು ವಚನ ಓದಿ, ವಿಶ್ಲೇಷಿಸಿದರು.
ನೀಲಮ್ಮನ ಬಳಗದ ರೂಪಾ ಹಂಡೆ ಸಾಮೂಹಿಕ ವಚನ ಪಠಣ ಮಾಡಿಸಿ ಗೋಷ್ಠಿಗೆ ಚಾಲನೆ ನೀಡಿದರು.
ಬಸವ ದೀಪ್ತಿ ಗೋರನಾಳೆ ವಚನ ಗಾಯನ ಮಾಡಿದರು. ನಿತ್ಯಾ ಸಂಗಮೇಶ ವಚನ ನೃತ್ಯ ಪ್ರದರ್ಶಿಸಿದರು. ಶಿವನಗರ ದಕ್ಷಿಣದ ನೀಲಮ್ಮನ ಬಳಗದವರು ಪಾಹಿಮಾಂ ಶರಣು ಬಸವ ಭಕ್ತಿ ಗೀತೆಯ ಮೇಲೆ ಪ್ರದರ್ಶಿಸಿದ ಸಾಮೂಹಿಕ ವಚನ ನೃತ್ಯ ಆಕರ್ಷಕವಾಗಿತ್ತು.
ನೀಲಮ್ಮನ ಬಳಗದ ಜಯಶ್ರೀ ಪಿ. ಮಠಪತಿ, ಶ್ರೀದೇವಿ ಗಾದಗೆ, ನಿವೃತ್ತ ಶಿಕ್ಷಕಿ ಸಂಗಮ್ಮ ಪಾರಾ, ಪ್ರಭಾವತಿ ಖಂಡಾಳೆ, ಶೋಭಾ ಎಸ್. ಬಿರಾದಾರ ಮತ್ತಿತರರು ಇದ್ದರು.
ಸಂಧ್ಯಾರಾಣಿ ಮುತ್ತಂಗೆ ನಿರೂಪಿಸಿದರು. ಬಸವ ಜ್ಯೋತಿ ಎಂ.ಜಿ. ಸ್ವಾಗತಿಸಿದರು. ಅನಿತಾ ರಾಜಕುಮಾರ ಪಾಟೀಲ ಭಕ್ತಿ ದಾಸೋಹಗೈದರು.