ಕರಜಗಿ:ಅ.26:ಪ್ರತಿಯೊಬ್ಬರ ಜೀವನದಲ್ಲಿ ಸಂಸ್ಕಾರ,ಸಂಸ್ಕೃತಿ ಗುರುಗಳ ಆಶೀರ್ವಾದ ಮಾರ್ಗದರ್ಶನ ಬಹಳ ಮುಖ್ಯವಾಗಿದೆ.ಗುರುವಿನಲ್ಲಿ ಅದ್ಭುತವಾದ ಶಕ್ತಿ ಇದೆ.ನಮ್ಮಲ್ಲಿರುವ ಅಜ್ಞಾನ ಹೋಗಲಾಡಿಸಿ,ಸುಜ್ಞಾನ ನೀಡುವ ಶಕ್ತಿ ಗುರುಗಳಲ್ಲಿ ಮಾತ್ರ ಇದೆ ಎಂದು ಶಾಸಕ ಎಂ ವೈ ಪಾಟೀಲ ಹೇಳಿದರು
ಅವರು ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳಿಂದ ನಡೆದ ವಿಶ್ವಶಾಂತಿಗಾಗಿ ನಾಗಲಿಂಗ ಸ್ವಾಮಿಗಳ ಪುರಾಣ ಪ್ರವಚನದ ಮುಕ್ತಾಯ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿ ನಮ್ಮ ಗುರು ಹಿರಿಯರು ಹಾಕಿಕೊಟ್ಟ ಸಂಸ್ಕೃತಿ ಸಂಸ್ಕಾರಗಳು ನಮ್ಮನ್ನು ಜಾಗ್ರತಗೊಳಿಸುತ್ತವೆ. ಪೂಜ್ಯರು ಗುರುಗಳು ತಮ್ಮ ಸುಖವನ್ನು ತ್ಯಾಗ ಮಾಡಿ ನಮಗೆ ಮಾರ್ಗದರ್ಶನ ಮಾಡಿ ನಮ್ಮನ್ನು ಜಾಗ್ರತಗೊಳಿಸಿ ಜೀವನದಲ್ಲಿ ನಾವು ದಾರಿ ತಪ್ಪಿದಾಗ ಸನ್ಮಾರ್ಗಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ಮಲ್ಲಿಕಾರ್ಜುನ ದೇವಸ್ಥಾನದವರು ಸ್ಥಳಾವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ಕಲ್ಯಾಣ ಮಂಟಪ ನಿರ್ಮಿಸಿ ಕೊಡಲಾಗುವುದು ದೇವಸ್ಥಾನದ ಕಳಸಾರೋಹಣಕ್ಕೆ ಅನುದಾನ ನೀಡಲಾಗುವುದು ಎಂದು ಹೇಳಿದರು
ಷ ಬ್ರ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಷ ಬ್ರ ಡಾ ಶಂಭುಲಿಂಗ ಶಿವಾಚಾರ್ಯರು ಪಡಸಾವಳಗಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು
ಈ ಸಂದರ್ಭದಲ್ಲಿ ವೇದಮೂರ್ತಿ ಹಾಲಯ್ಯ ಹಿರೇಮಠ ಗದಗಯ್ಯಾ ಸ್ವಾಮೀಜಿ ಹಿರೇಮಠ ಜಿ ಪಂ ಮಾಜಿ ಸದಸ್ಯ ಪ್ರಕಾಶ ಜಮಾದಾರ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ರಮೇಶ ಪೂಜಾರಿ ಸಿದ್ದನಗೌಡ ಪಾಟೀಲ ಭೋಸಗಾ ಯಲ್ಲಮ್ಮ ದೇವಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಹಾದೇವಪ್ಪ ಕರೂಟಿ ಗುರುಸ್ವಾಮಿ ಮಠ ಮಹಾದೇವಗೌಡ ಶಿರನಾಳ ಗುರುಬಾಳ ಜಕಾಪೂರ ರಾಚಪ್ಪ ಕೊಪ್ಪಾ ಜಟ್ಟೆಪ್ಪ ಭುಯ್ಯಾರ ಸಿದ್ದಪ್ಪ ಹತ್ತರಕಿ ವಿಶ್ವನಾಥ ಅಜಗೊಂಡ ಶಿವಶರಣಪ್ಪ ರೋಡಗಿ ಕಲ್ಲಪ್ಪ ಹತ್ತೆ ಅಣ್ಣಾರಾವ ಮುಜಗೊಂಡ ಮಲ್ಲಿಕಾರ್ಜುನ ಇಂಗಳೇಶ್ವರ ಶಿವಲಿಂಗಪ್ಪ ಅರಳಾ ಚೋಳಪ್ಪ ಆಲೂರ ವಿಶ್ವನಾಥ ಕರೂಟಿ ಕಲ್ಲಪ್ಪ ಅಲ್ಲಾಪೂರ
ಕಾಳಪ್ಪ ಸುತಾರ,ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಶರಣಪ್ಪ ನಾವದಗಿ ಗ್ರಾ ಪಂ ಸದಸ್ಯ ಬಸವರಾಜ ವಾಯಿ, ಅಪ್ಪಾಸಾಬ ಹೊಸೂರಕರ,
ವಿವೇಕಾನಂದ ಕೋಗಟನೂರ, ಮಲಕಣ್ಣ ಹೊಸೂರಕರ,ಸಿದ್ದಪ್ಪ ಹುಂಡೇಕಾರ, ಮಲ್ಲಪ್ಪ ಗೋಪಗೊಂಡ, ಅಶೋಕ ನಾವದಗಿ,ಮಲ್ಲಿಕಾರ್ಜುನ
ಭತಗುಣಕಿ, ರಮೇಶ ಕಾಸರ,ಸುರೇಶ ಮುಜಗೊಂಡ, ಸಂತೋಷ ಮುಜಗೊಂಡ, ಶಾಂತಪ್ಪ ವಾಯಿ, ಶರಣಬಸಪ್ಪ ಉಪ್ಪಿನ, ನಾಗಭೂಷಣ ಆಲೂರ, ವೇಣುಮಾಧವ ಅವಧಾನಿ,ಭೀಮಾಶಂಕರ ಪೂಜಾರಿ, ಸಂತೋಷ ಅಲ್ಲಾಪೂರ, ಶ್ರೀಕಾಂತ ನಿವರಗಿ, ಪಿಂಟು ಠಕ್ಕಾ,ಸೇರಿದಂತೆ ಇತರರಿದ್ದರು

























