ಕಲಬುರಗಿ: ಜಿಲ್ಲೆಯ ಸುಕ್ಷೇತ್ರ ಶ್ರೀನಿವಾಸ ಸರಡಗಿಯ ಶ್ರೀ ಸರಡಗಿ ಮಹಾಲಕ್ಷ್ಮೀ ಶಕ್ತಿಪೀಠದಲ್ಲಿ ಅಕ್ಟೋಬರ್ 21ರಂದು 14ನೇ ದಸರಾ ದರ್ಬಾರ್ ಕಾರ್ಯಕ್ರಮವು ಭಕ್ತಿ, ಸಂಭ್ರಮ ಹಾಗೂ ಸಾಂಸ್ಕøತಿಕ ವೈಭವದೊಂದಿಗೆ ಜರುಗಿತು.
ಶಕ್ತಿಪೀಠಾಧಿಪತಿಗಳಾದ ಸದ್ಧರ್ಮ ಶಿರೋಮಣಿ ಪರಮಪೂಜ್ಯ ಶ್ರೀ ಡಾ. ಅಪ್ಪಾರಾವ ದೇವಿ ಮುತ್ತಾ ಮಹಾರಾಜರ ಅಪ್ಪಣೆಯ ಮೇರೆಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮೈಸೂರು ಮಾದರಿಯ ಜಂಬೂ ಸವಾರಿ ಭವ್ಯ ಮೆರವಣಿಗೆ, ತುಲಾಭಾರ ಹಾಗೂ ಧರ್ಮಸಭೆ ಪ್ರಮುಖ ಆಕರ್ಷಣೆಗಳಾಗಿದ್ದವು.
ಕಾರ್ಯಕ್ರಮವನ್ನು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನೀಲಕಂಠರಾವ ಮೂಲಗೆ,
ಬಾಬು ಹೊನ್ನಾ ನಾಯಕ್. ರಾಜು ಲೇಂಗಟಿ, ಅರುಣಕುಮಾರ ಪಾಟೀಲ, ರವಿ ಬಿರಾದಾರ, ಸಂಗಮೇಶ ನಾಗನಳ್ಳಿ, ರವಿ ಪಾಟೀಲ ಸರಡಗಿ,ಪವನ್ ಕುಮಾರ್ ವಳಕೇರಿ ವಿನೋದ ಪಾಟೀಲ ಹಾಗೂ ಆನಂದ ಪಾಟೀಲ.ಅಂಬರೀಶ್ ಪಾಟೀಲ್.ಶಕ್ತಿಪೀಠದ ಕಾರ್ಯದರ್ಶಿ ವಿಶ್ವನಾಥ್ ಪಾಟೀಲ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರನ್ನು ಗುರುತಿಸಿ, ಸುಕ್ಷೇತ್ರ ಶ್ರೀನಿವಾಸ ಸರಡಗಿ ಶ್ರೀಶಕ್ತಿ ಪೀಠದ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಧಕರ ಸೇವೆ ಹಾಗೂ ಸಾಧನೆಗಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಕಾರ್ಯಗಳಿಗೆ ಪೆÇ್ರೀತ್ಸಾಹ ನೀಡಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಸರಡಗಿ ಅನ್ನಪೂರ್ಣೇಶ್ವರಿ ಬಸವಕಲ್ಯಾಣ ಸಂಸ್ಥಾನದ ಮಕ್ಕಳಿಂದ ಹಾಗೂ ಶ್ರೀ ಸರಡಗಿ ಶಕ್ತಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕಲಬುರಗಿ ವತಿಯಿಂದ ರೂಪಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಧಾರ್ಮಿಕ ಶ್ರದ್ಧೆ, ಸಾಂಸ್ಕೃತಿಕ ಪರಂಪರೆ ಹಾಗೂ ಸಾಧಕರಿಗೆ ಗೌರವ ಸಲ್ಲಿಸುವ ಆಶಯದೊಂದಿಗೆ ನಡೆದ 14ನೇ ದಸರಾ ದರ್ಬಾರ್ ಕಾರ್ಯಕ್ರಮವು ಶ್ರೀ ಸರಡಗಿ ಮಹಾಲಕ್ಷ್ಮೀ ಶಕ್ತಿಪೀಠದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿಯಿತು.



















