ಮುನವಳ್ಳಿ,ಆ.೨೪: ಪಟ್ಟಣದ ಮಲಪ್ರಬಾ ನದಿ ದಂಡೆಯಲ್ಲಿ ಇರುವ ಶ್ರೀ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ ಶ್ರೀ ಹರಿ ನಾಮ ಸಂಕೀರ್ತನ ಸಪ್ತಾಹ ಸೋಹಳಾ ಅಗಸ್ಟ್ ೨೩ ರಿಂದ ಪ್ರಾರಂಭಗೊAಡು ಅಗಸ್ಟ್ ೩೦ ರವರೆಗೆ ಜರಗುವುದು.
ಪ್ರತಿ ದಿನ ಪ್ರವಚನ, ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಸಾಮೂಹಿಕ ಪಾರಾಯಣ, ಶ್ರೀ ಪಾಂಡವ ಪ್ರತಾಪ ಗ್ರಂಥ, ಶ್ರೀ ಹರಿಕೀರ್ತನೆ, ವೀಣಾ ಜಾಗರಣೆ ಹಾಗೂ ಕಾಕಡಾರತಿ ಜರಗುವುದು. ಪ್ರತಿ ದಿನ ಭಕ್ತರಿಂದ ಪ್ರಸಾದ ಸೇವೆ ಜರಗುವುದು. ಸಂತಮAಡಳಿ ತಮ್ಮ ತಾಳ ಮೃದಂಗ ಸಹಿತ ಆಗಮಿಸಿ ಶ್ರೀ ಪಾಂಡುರAಗನ ಕೃಪೆಗೆ ಪಾತ್ರರಾಗಲು ದೇವಸ್ಥಾನದ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿರುವರು.































