ತಾಳಿಕೋಟೆ, ಪಟ್ಟಣದಲ್ಲಿ ನವರಾತ್ರೋತ್ಸವ ಅಂಗವಾಗಿ ವಿವಿಧಡೆ ಘಟಸ್ಥಾಪನೆಗೊಂಡು ಪೂಜಾ ಪುನಃಸ್ಕಾರಗಳು ಜರುಗಿದಂತೆ ರಜಪೂತ ಸಮಾಜ ಬಾಂದವರ ವತಿಯಿಂದ ಶ್ರೀ ದುರ್ಗಾ ಮಾತೆಯ ಪ್ರತಿಷ್ಠಾಪನೆ ಹಾಗೂ ಸುಮಾರು ೧೦ ದಿನಗಳ ವರೆಗೆ ಅಲಂಕಾರ, ವಿವಿಧ ಕಾರ್ಯಕ್ರಮಗಳೊಂದಿಗೆ ಮಹಾ ಪೂಜಾ ಕಾರ್ಯಕ್ರಮ ಜರುಗಿತಲ್ಲದೇ ನೋಡುಗರ ಭಕ್ತರ ಮನಸ್ಸು ಸೇಳೆದು ಭಕ್ತಿ ಮಾರ್ಗದತ್ತಕೊಂಡೊಯ್ದಿದ್ದೇನು ಕಡಿಮೇನಿಲ್ಲಾ.
ಶುಕ್ರವಾರರಂದು ೧೦ನೇ ದಿನದಂದು ರಜಪೂತ ಗಲ್ಲಿಯಲ್ಲಿರುವ ಶ್ರೀ ಅಂಬಾಭವಾನಿ ಮಂದಿರದಲ್ಲಿಯ ಶ್ರೀ ದೇವಿಯ ಮಹಾಮೂರ್ತಿಗೆ ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮವನ್ನು ಭೀಮಾಶಂಕರ ಜೋಶಿ ಅವರು ನಡೆಸಿಕೊಟ್ಟರಲ್ಲದೇ ಇತ್ತ ದುರ್ಗಾಮಾತೆಯ ಪ್ರತಿಷ್ಠಾಪನಾ ಮಹಾ ಮೂರ್ತಿಯ ಮುಂದೆಯೂ ವಿವಿಧ ಪೂಜೆ ಪುನಃಸ್ಕಾರಗಳನ್ನು ನೆರವೇರಿಸಿ ಮಂತ್ರ ಪಠಣಗಳೊಂದಿಗೆ ಶ್ರೀ ದೇವಿಯ ಭವ್ಯ ಮೆರವಣಿಗೆಗೆ ಸಾಯಂಕಾಲ ಚಾಲನೆ ನೀಡಿದರು.
ರಜಪೂತ ಗಲ್ಲಿಯ ಶ್ರೀ ಅಂಬಾಭವಾನಿ ದೇವಸ್ಥಾನದ ಹತ್ತಿರದ ದುರ್ಗಾಮಾತೆಯ ಪ್ರತಿಷ್ಠಾಪನಾ ಸ್ಥಳದಿಂದ ದುರ್ಗಾಮಾತೆಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಪ್ರಾರಂಭಗೊAಡು ವಿವಿಧ ವಾದ್ಯ ವೈಭವಗಳೊಂದಿಗೆ ಹಾಗೂ ಝೇಂಕಾರದ ನಾದದೊಂದಿಗೆ ಮುನ್ನಡೆದ ಈ ಮೆರವಣಿಗೆಯಲ್ಲಿ ಭಕ್ತಿಭಾವದತ್ತ ಕೊಂಡೊಯುವAತಹ ಹಾಡುಗಳಿಗೆ ಯುವಕರ ಜೈಕಾರದೊಂದಿಗೆ ನಡೆದ ಕುಣಿತ ನೋಡುಗರಿಗೆ ಹುರಿದುಂಬಿಸುವAತೆ ಕಾಣುತ್ತಿತ್ತು.
ಶ್ರೀ ಖಾಸ್ಗತೇಶ್ವರ ಮಠದ ಮುಂಭಾಗದ ರಸ್ತೆಗುಂಟಾ ವಿವಿಧ ವಾದ್ಯ ವೈಭವಗಳೊಂದಿಗೆ ಸಾಗಿದ ಈ ಮೇರವಣಿಗೆಯು ಕತ್ರಿ ಭಜಾರ ಮಾರ್ಗ, ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ, ಶಿವಾಜಿ ಮಹಾರಾಜ ವೃತ್ತ, ಮಹಾರಾಣಾಪ್ರತಾಪ ವೃತ್ತದವರೆಗೆ ಜರುಗಿ ಸಭೆಯಾಗಿ ಮಾರ್ಪಟ್ಟಿತು.
೯ ದಿನಗಳ ವರೆಗೆ ಶ್ರೀ ದೇವಿಯ ಮಹಾ ಪುರಾಣವನ್ನು ವೇ.ವಸಂತ ಜೋಶಿ ಅವರು ನಡೆಸಿಕೊಟ್ಟರು.
ಈ ಉತ್ಸವದಲ್ಲಿ ಪಾಲ್ಗೊಂಡ ಎಲ್ಲ ಭಕ್ತ ಸಮೂಹಕ್ಕೂ ರಜಪೂತ ಸಮಾಜದ ವತಿಯಿಂದ ಅನಂತ ಕೃತಜ್ಞತೆ ಸಲ್ಲಿಸಲಾಯಿತು.
ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಕಾರ್ಯದರ್ಶಿ ವಿಠ್ಠಲಸಿಂಗ್ ಹಜೇರಿ, ವಿಜಯಸಿಂಗ್ ಹಜೇರಿ, ಪ್ರಕಾಶ ಹಜೇರಿ, ಸುರೇಶ ಹಜೇರಿ, ಮಾನಸಿಂಗ್ ಕೊಕಟನೂರ, ಗೋವಿಂದ ಗೌಡಗೇರಿ, ಗೋವಿಂದಸಿAಗ್ ಮೂಲಿಮನಿ, ಜೈಸಿಂಗ್ ಮೂಲಿಮನಿ, ಪಿಂಟು ಹಜೇರಿ, ಅಮೀತ ಮನಗೂಳಿ, ಕೇಸರಸಿಂಗ್ ಹಜೇರಿ, ರಮೇಶ ಗೌಡಗೇರಿ, ಸಿರಸಕುಮಾರ ಹಜೇರಿ, ಕಿಸನಸಿಂಗ್ ಹಜೇರಿ, ಪ್ರಲ್ಹಾದ ಹಜೇರಿ, ಸುನೀಲ ವಿಜಾಪೂರ, ಶಿವಂ ಗೌಡಗೇರಿ, ಸುಮೀತ ವಿಜಾಪೂರ, ರಾಜು ಮೂಲಿಮನಿ, ಕಿರಣಸಿಂಗ್ ಗೌಡಗೇರಿ, ಅಲೌಕಸಿಂಗ್ ಗೌಡಗೇರಿ, ಒಳಗೊಂಡು ಮೊದಲಾದವರು ನೇತೃತ್ವ ವಹಿಸಿದ್ದರು.

























