Home ಜಿಲ್ಲೆ ಅದ್ದೂರಿಯಾಗಿ ಜರುಗಿದ ಹಲಗೆ ಹಬ್ಬ ಮೆರವಣಿಗೆ

ಅದ್ದೂರಿಯಾಗಿ ಜರುಗಿದ ಹಲಗೆ ಹಬ್ಬ ಮೆರವಣಿಗೆ

ಜಮಖಂಡಿ:ಮಾ.5: ಹೊಳಿ ಹಬ್ಬದ ನಿಮಿತ್ತವಾಗಿ ಹೊಕ್ಕಳಬಾವಿಯಲ್ಲಿ ಹಿಂದು ಜಾಗರಣೆ ವೇದಿಕೆ ವತಿಯಿಂದ ಆಯೋಜಿಸಲಾದ ಹಲಗೆ ಹಬ್ಬ ಮೆರವಣಿಗೆ ನಗರದಲ್ಲಿ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮಕ್ಕೆ ಮುತ್ತಿನಕಂತಿ ಮಠದ ಶ್ರೀ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಕೊಣ್ಣೂರ ಹೊರಗಿನ ಮಠದ ಡಾ. ವಿಶ್ವಪ್ರಭು ಶ್ರೀಗಳು, ಓಲೇ ಮಠದ ಶ್ರೀ ಆನಂದ ದೇವರು, ರುದ್ರಾವದೂತ ಮಠದ ಶ್ರೀ ಕೃಷ್ಣಾನಂದ ಅವದೂತರು, ಆಲಗೂರ ಧರಿದೇವರ ಮಠದ ಲಕ್ಷ್ಮಣ ಮುತ್ಯಾ, ಹೊಸ ಬಬಲಾದಿ ಮಠದ ಶಿವರುದ್ರ ಶ್ರೀಗಳು, ಜಕನೂರಿನ ಮದಗೊಂಡ ಶ್ರೀಗಳು, ಲಿಂಗನೂರಿನ ಶಿವಪುತ್ರ ಅವದೂತರು,ಸದಾಶಿವ ನಗರದ ಬಬಲಾದಿ ಮಠದ ಶ್ರೀ ಸದಾಶಿವ ಮುತ್ಯಾ,ಹುಲ್ಯಾಳ ಬಬಲಾದಿ ಮಠದ ಕೃಷ್ಣಯ್ಯ ಶ್ರೀಗಳು ಸೇರಿದಂತೆ ಹಲವು ಪೂಜ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಪರಶುರಾಮ ಪೂಜಾರಿ, ಶಾಸಕ ಜಗದೀಶ್ ಗುಡಗುಂಟಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ ಸೇರಿದಂತೆ ಅನೇಕರು ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಹೊಕ್ಕಳಬಾವಿಯಿಂದ ಪ್ರಾರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಪೂಜ್ಯರು ಹಲಗೆ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದರು. ಮಹಾರಾಷ್ಟ್ರದ ಹಲಗೆ ಮೇಳ, ಗೊಂಬೆ ಕುಣಿತ, ನಾವಲಗಿಯ ಕರಡಿ ಮಜಲು, ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಮೇಳಗಳು ಉತ್ಸವಕ್ಕೆ ಮೆರುಗು ತಂದವು. ಮೆರವಣಿಗೆಯುದ್ದಕ್ಕೂ ಕೆಸರಿ ಧ್ವಜಗಳು ರಾರಾಜಿಸುತ್ತಿದ್ದವು. ಹನುಮಾನ್ ಮಂದಿರದ ಹತ್ತಿರ ಮೆರವಣಿಗೆ ತಲುಪಿ ಕಾಮನ್ ದಹನ ಮಾಡುವ ಮೂಲಕ ಹೊಳಿಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಿರಣ ಪಿಸಾಳ, ವಿರುಪಾಕ್ಷಯ್ಯ ಗುಡಗುಂಟಿ, ಅಜೇಯ ಕಡಪಟ್ಟಿ, ಗಣೇಶ ಶಿರಗಣ್ಣವರ, ಪ್ರದೀಪ ಮಹಾಲಿಂಗಪೂರಮಠ, ಪ್ರದೀಪ ಮೆಟಗುಡ್ಡ, ನಿಖಿಲ್ ಮಹಾಬಳಷೆಟ್ಟಿ, ಯಮನೂರ ಮೂಲಂಗಿ, ಪ್ರಭು ಜನವಾಡ,ಮಂಜು ಬೊಯಿ,ಸುನಿಲ ಬೊಯಿ,ಶ್ರೀಧರ್ ಕಂಬಿ ಸೇರಿದಂತೆ ಅನೇಕರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.