Home ಜಿಲ್ಲೆ ಬೆಂಗಳೂರು ಅದ್ದೂರಿ ಈಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಅದ್ದೂರಿ ಈಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಆನೇಕಲ್. ಮೇ. ೨೬- ತಾಲ್ಲೂಕಿನ ನೆರಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪಸಂದ್ರ ಗ್ರಾಮದಲ್ಲಿ ನೆರಿಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ತಿಪ್ಪಸಂದ್ರ ಮುನಿರಾಜು ರವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ ಇತಿಹಾಸ ಪ್ರಸಿದ್ದ ಈಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ.


ಇತಿಹಾಸ ಪ್ರಸಿದ್ದ ಈಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಧರ್ಮರಾಯಸ್ವಾಮಿ ಮತ್ತು ದ್ರೌಪತಮ್ಮ ನವರ ಕರಗ ಮಹೋತ್ಸವ. ಅಗ್ನಿಕುಂಡ. ವೀರಭದ್ರ ಸ್ವಾಮಿಯ ವೀರಗಾಸೆ ಕಾರ್ಯಕ್ರಮ. ರಸಮಂಜರಿ ಕಾರ್ಯಕ್ರಮ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮದಲ್ಲಿ ತಿಪ್ಪಸಂದ್ರ ಗ್ರಾಮಸ್ಥರು ಭಾಗವಹಿಸಿದ್ದರು.