
ಚಿಂಚೋಳಿ :ಫೆ.27:ಪಟ್ಟಣದ ಪಂಚಲಿಂಗೇಶ್ವರ ಬುಗ್ಗಿ ಹತ್ತಿರ ವಿರುವ ರಥ ಮೈದಾನದಲ್ಲಿ
ಪರಮ ಪೂಜ್ಯ ಲಿಂಗೈಕ್ಯ ಸದ್ಗುರು ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳವರ 75ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಪರಮ ಪೂಜ್ಯ ಶ್ರೀ ಹಾರಕೂಡ ಡಾ. ಚನ್ನವೀರ ಶಿವಾಚಾರ್ಯರ ದಿವ್ಯ ನೇತೃತ್ವದಲ್ಲಿ ರಥೋತ್ಸವ ಮತ್ತು ಶಿವಾನುಭವ ಚಿಂತನ ಕಾರ್ಯಕ್ರಮವು ಜರುಗಿತು ಕಾರ್ಯಕ್ರಮವನ್ನು ಹುಬ್ಬಳ್ಳಿಯ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು ಕಾರ್ಯಕ್ರಮ ಉದ್ದೇಶಿಸಿ ಬೀದರ್ ಲೋಕಸಭಾ ಸದಸ್ಯರಾದ ಸಾಗರ್ ಖಂಡ್ರೆ, ಅವರು ಮಾತನಾಡಿ ಪರಮ ಪೂಜ್ಯ ಲಿಂಗೈಕ್ಯ ಸದ್ಗುರು ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳವರ 75ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜೊತೆಗೆ ಈ ಜಾತ್ರೆಯಲ್ಲಿ ಹಿರಿಯರು ತಾಯಂದಿರು ಜನಸಾಗರ ಹರಿ ಬಂದಿದೆ ಆದರೆ ಬಹಳಷ್ಟು ಯುವಕರು ಕೊರತೆ ಎದ್ದು ಕಾಣುತ್ತಿದ್ದು ಇನ್ನ ಹೆಚ್ಚಿನಲ್ಲಿ ಈ ಜಾತ್ರೆಯಲ್ಲಿ ಯುವಕರು ಜಾತ್ರೆಗೆ ಬರಬೇಕಿತ್ತು ಏಕೆಂದರೆ ಈ ಹಿಂದಿನ ಯುವಕರು ಬಹಳಷ್ಟು ದುಷ್ಟ ಚಟಗಳಿಗೆ ಒಳಗಾಗುತ್ತಿದ್ದಾರೆ ಶರೀಫ್ ನಶೆ ಮತ್ತು ಬೆಟ್ಟಿಂಗ್ ಐಪಿಎಲ್ ಮತ್ತು ಅನೇಕ ದುಶ್ಚಟಕ್ಕೆ ಒಳಗಾಗಿ ಯುವಕರು ದಾರಿ ತಪ್ಪಿ ಯುವಕರು ತಮ್ಮ ಜೀವನವನ್ನೇ ಹಾಳು ಮಾಡುತ್ತಿದ್ದಾರೆ ಮತ್ತು ಅನೇಕ ಯುವಕರು ಊರು ಬಿಟ್ಟು ಹೋಗಿ ಮತ್ತು ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಿದ್ದಾರೆ ಅದಕ್ಕಾಗಿ ನಾವು ಏನಾದರೂ ಸುಧಾರಣೆ ಮಾಡಬೇಕಾದರೆ ಇಂಥ ಧಾರ್ಮಿಕ ಸ್ಥಳದಿಂದಲೇ ಸಾಧ್ಯ ಇಂಥ ಗುರುಗಳೆಂದರೆ ಸಾಧ್ಯ ಮುಂಬರುವ ದಿನಗಳಲ್ಲಿ ಪರಮ ಪೂಜ್ಯ ಶ್ರೀ ಹಾರಕೂಡ ಡಾ. ಚನ್ನವೀರ ಶಿವಾಚಾರ್ಯರ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಯುವಕರು ದುಶ್ಚಟಗಳನ್ನು ಬಿಟ್ಟು ಒಳ್ಳೆಯ ದಾರಿಯಲ್ಲಿ ನಡೆಯಬೇಕು
ಮತ್ತು ಎಲ್ಲ ಯುವಕರು ತಂದೆ ತಾಯಿಯ ಗೌರವ ಕೊಡಬೇಕು ಒಳ್ಳೆ ಸಂಸ್ಕøತಿ ಯುವಕರು ಕಲಿಯಬೇಕು ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಚಿಂಚೋಳಿ ಶಾಸಕರಾದ ಡಾ. ಅವಿನಾಶ್ ಜಾಧವ್, ಅವರು ಮಾತನಾಡಿ ಬಸವಕಲ್ಯಾಣ ತಾಲೂಕಿನ ಹಾರಕೂಡ ನಲ್ಲಿ ಯಾ ರೀತಿ ಜಾತ್ರೆಯಾಗುತ್ತೋ ಅದೇ ಜಾತ್ರೆ ಚಿಂಚೋಳಿಯಲ್ಲಿ ಕೂಡ ಅದ್ದೂರಿಯಾಗಿ ಜರುಗುತ್ತಿದ್ದು ನಾವೆಲ್ಲರೂ ಪುಣ್ಯವಂತರೆಂದು ಭಾವಿಸುತ್ತೇವೆ ಹಾರಕೂಡ ಶ್ರೀಗಳು ಮಠದಲ್ಲಿ ಯಾವುದೇ ಒಂದು ಜಾತಿಯತೆ ಇಲ್ಲ ನಾವೆಲ್ಲರೂ ಒಂದೇ ಅಂತೆ ಎಲ್ಲಾ ಸಮಾಜ ಒಗ್ಗೂಡಿಸಿ ಈ ಜಾತ್ರೆಯು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು ಕಾರ್ಯಕ್ರಮದಲ್ಲಿಹಾರಕೂಡ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು, ಹಿರನಾಗಂವ ಪರಮಪೂಜ್ಯ ಶ್ರೀ ಜಯಶಾತಲಿಂಗ ಮಹಾ ಸ್ವಾಮೀಜಿಗಳು, ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಷ್ ರಾಠೋಡ್, ಕಾಡ ಅಧ್ಯಕ್ಷರಾದ ಹೊನ್ನು ನಾಯಕ, ಸಾಹಿತಿ ಡಾ.ಎಸ್.ಎಂ.ಹಿರೇಮಠ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗೌತಮ ಪಾಟೀಲ್, ಮುಖಂಡರಾದ ಅಜೀತ್ ಪಾಟೀಲ್, ಶಿವಯೋಗಿ ರುಸ್ತಂಪೂರ್, ಅಶೋಕ ಮೊಗದoಪುರ, ಕೆ ಎಂ ಬಾರಿ, ಸುಭಾಷ ಸೀಳಿನ, ಗೋಪಾಲರಾವ್ ಕಟ್ಟಿಮನಿ, ಸಂತೋಷ ಗಡಂತಿ, ಶರಣುಪಾಟೀಲ ಮೋತಕಪಳ್ಳಿ, ರಾಜು ಪವಾರ, ಪ್ರೇಮಸಿಂಗ್ ಜಾಧವ, ನೀಲಕಂಠ ಸೀಳಿನ, ವಿನೋದ ಸೀಳಿನ, ಸತೀಶ್ ರೆಡ್ಡಿ, ರಾಜಶೇಖರ ಮಜ್ಜಗಿ, ಮಲ್ಲಿಕಾರ್ಜುನ್ ಪಾಲಾಮೂರ, ಭೀಮಶೇಟ್ಟಿ ಮುರುಡಾ, ಮಲ್ಲಿಕಾರ್ಜುನ ಅಲ್ಲಾಪೂರ, ಸಂಗಮೇಶ ಮೂಲಿಮನಿ, ಅಪ್ಪಣ್ಣ ಹಾರಕೂಡ, ಸಂತೋಷ ಕಡಗದ, ವೀರೇಶ ಯಂಪಳ್ಳಿ, ನಾಗರಾಜ ಸೀಳಿನ್, ಅಮರ ಲೋಡ್ನೂರ್, ನಾಗರಾಜ ಮಲಕೂಡ, ಮತ್ತು ಅನೇಕ ಸಾವಿರಾರು ಜನಸಂಖ್ಯೆಯಲ್ಲಿ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು






















