ಬಸವ ಜಯಂತಿಯನ್ನು ಸರಕಾರ ಬಸವನ ಬಾಗೇವಾಡಿಯಲ್ಲಿ ಆಚರಿಸಲಿ

ಬಸವನಬಾಗೇವಾಡಿ: ಸೆ.2:ಬಸವ ಸಂಸ್ಕøತಿ ಅಭಿಯಾನದ ಹಿನ್ನೆಲೆ ಪಟ್ಟಣದ ಬಸವೇಶ್ವರ ದೇವಾಲಯದ ಸಿಬಿಎಸ್‍ಸಿ ಶಾಲಾ ಆವರಣದ ಫ ಗು ಹಳಕಟ್ಟಿ ವೇದಿಕೆಯಲ್ಲಿ ಸೋಮವಾರ ವಿವಿಧ ಮಠಾಧೀಶರು ಶಾಲಾ ವಿದ್ಯಾರ್ಥಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಬಸವ ಸಂಸ್ಕೃತಿಯ ಸಂವಾದ ಕಾರ್ಯಕ್ರಮ ನಡೆಯಿತು ಭಾಲ್ಕಿ ಬಸವಲಿಂಗಪಟ್ಟದೇವರು ಮಾತನಾಡಿ ಕರ್ನಾಟಕ ಸರ್ಕಾರ ಬಸವಣ್ಣವರನ್ನು ನಾಡಿನ ಸಂಸ್ಕೃತಿಕ ನಾಯಕ ಎಂದು ಘೋಷಿಸಿದಂತೆ ಸರಕಾರ ಪ್ರತಿ ವರ್ಷ ಬಸವ ಜಯಂತಿಯಂದು ರಾಜ್ಯದ ಬಸವ ಜಯಂತಿ ಉತ್ಸವವನ್ನು ಬಸವನ ಬಾಗೇವಾಡಿಯಲ್ಲಿ ಆಚರಿಸಬೇಕು ಅಂದಾಗ ಬಸವನ ಬಾಗೇವಾಡಿಗೆ ಒಂದು ಐತಿಹಾಸಿಕ ಮೆರಗು ನೀಡಿದಂತಾಗುತ್ತದೆ ಎಂದು ಮಾತನಾಡಿದರು ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಅನುಭವ ಮಂಟಪ ಮೂಲಕ ಸಂವಾದ ಆರಂಭಿಸಿದರು ಆದರೆ ಇಂದು ಸಂವಾದ ಕಡಿಮೆಯಾಗಿ ವಾದ ವಿವಾದಗಳು ನಡೆಯುತ್ತಿವೆ ಸಂವಾದಗಳು ನಡೆದಾಗ ಮಾತ್ರ ವಿಷಯದ ಬಗ್ಗೆ ಆಳವಾದ ಜ್ಞಾನ ಮಕ್ಕಳಿಗೆ ಬರುತ್ತದೆ ಎಂದರು ವಿದ್ಯಾರ್ಥಿಗಳಾದ ತಾವು ವಿದ್ಯಾವಂತರಾಗಿದ್ದೇವೆ ಎಂದ ಮಾತ್ರಕ್ಕೆ ಸಾಲದು ತಾವು ವಿವೇಕಸ್ಥರಾಗಿ ಬಾಳಬೇಕು ವಿದ್ಯೆ ನಮ್ಮಲ್ಲಿ ಅಹಂಕಾರ ಸ್ವಾರ್ಥ ತೊಡೆದು ಹಾಕಿ ಸಮಾಜಮುಖಿ ಕೆಲಸಕ್ಕೆ ಪ್ರೇರಣೆ ನೀಡಬೇಕು ಎಂದು ಮಾತನಾಡಿದರು ಗದುಗಿನ ತೋಂಟದ ಸಿದ್ದರಾಮ ಸ್ವಾಮೀಜಿ ದೇವರಕ್ಕಿಂತ ಹಿರಿದಾದದ್ದು ಯಾವುದು ಎಂದರೆ ಅದು ಕಾಯಕ ಕಾಯಕದ ಜೊತೆಗೆ ಪರಿಶ್ರಮ ಸಂಸ್ಕೃತಿಯನ್ನು ಗೌರವಿಸುವುದು ಅದುವೇ ಬಸವ ಸಂಸ್ಕೃತಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ವೇದಿಕೆ ಮೇಲೆ ಆಶೀನರಾದ ಸ್ವಾಮೀಜಿಯವರು ಉತ್ತರಿಸಿದರು ಬಂತನಾಳದ ವೃಷಭ ಲಿಂಗ ಸ್ವಾಮೀಜಿ ಹುಲಸೂರಿನ ಶಿವಾನಂದ ಸ್ವಾಮೀಜಿ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ತಂಗಡಿಗಿಯ ಅನ್ನದಾನ ಭಾರತಿ ಸ್ವಾಮೀಜಿ ಮಸಬಿನಾಳ ವಿರಕ್ತ ಮಠದ ಸಿದ್ಧರಾಮ ಸ್ವಾಮೀಜಿ ಪಂಚಮಸಾಲಿ ಪೀಠದ ಪೂಜ್ಯರಾದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಕೂಡಲಸಂಗಮ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮ ಸ್ವಾಮೀಜಿ ಮಾದರ ಚೆನ್ನಯ್ಯ ಗುರು ಪೀಠದ ಪೂಜ್ಯರಾದ ಮಾಧಾರ ಚೆನ್ನಯ್ಯ ಮಹಾಸ್ವಾಮಿಗಳು ಹುಲಸೂರು ಪೂಜ್ಯರಾದ ಶಿವಾನಂದ ಸ್ವಾಮೀಜಿ ಜ್ಞಾನ ಯೋಗಾಶ್ರಮದ ಬಸವಲಿಂಗ ಮಹಾಸ್ವಾಮಿಜಿ ಇಳಕಲ್ ವಿಜಯ ಮಹಾಂತೇಶ್ವರ ಮಠದ ಗುರು ಮಹಾಂತ ಸ್ವಾಮೀಜಿ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಶಿವಾನಂದ ಜಾಮ್ದಾರ್ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ವಿವಿಧ ಮಠಗಳ ಪೂಜ್ಯರು ಮಾತಾಜಿಯವರು ಸಭೆಯಲ್ಲಿ ಭಾಗವಹಿಸಿದ್ದರು