ಜೇವರ್ಗಿ:ಸೆ.25: ವಿದ್ಯಾರ್ಥಿಗಳ ಗುರಿ ನಿಶ್ಚಳವಾಗಿರಬೇಕು ಜೀವನದ ಗುರಿ ಮುಟ್ಟಲು ಹಲವು ದಾರಿಗಳಿವೆ, ಏನೇ ಅಡೆತಡೆ ಬಂದರೂ ಯಶಸ್ಸಿನ ದಡ ಸೇರುತ್ತೆನೆ ಎಂಬ ದೃಢ ನಿರ್ಧಾರ ಇಂದಿನ ಮಕ್ಕಳಲ್ಲಿ ಬೇಕಾಗಿದೆ ಎಂದು ಜಗದ್ಗುರು ತೋಂಟದಾರ್ಯ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಎಮ್. ಸಿ. ಸಿಂದಗಿ ಹೇಳಿದರು.
ಅವರು ಜೇವರ್ಗಿ ನಗರದ ಷಣ್ಮುಖ ಶಿವಯೋಗಿ ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್ ಎಸ್ ಎಸ್ ಸಂಸ್ಥಾಪನ ದಿನಾಚರಣೆ ಮತ್ತು ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬರಲ್ಲೂ ಒಂದು ವ್ಯಕ್ತಿತ್ವ ಇರುತ್ತದೆ. ಇದನ್ನು ಗುರುತಿಸುವಂತ ಕೆಲಸವಾಗಬೇಕು. ಇನ್ನೊಬ್ಬರನ್ನು ಅನುಕರಣೆ ಮಾಡುವ ಬದಲು ತಮ್ಮದೇ ಆದ ಭಿನ್ನ ವ್ಯಕ್ತಿತ್ವದಿಂದ ನಮ್ಮನ್ನು ನಾವು ರೂಡಿಸಿಕೊಳ್ಳಬೇಕು. ನಮ್ಮ ಮೇಲೆ ನಮಗೆ ವಿಶ್ವಾಸ ಇರಬೇಕು
ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಅವಕಾಶಗಳು ಬರುತ್ತವೆ ನಾವು ತಯಾರಾಗಿರಬೇಕು, ಶಿಸ್ತು ಬದ್ಧರಾಗಿರಬೇಕು, ಉತ್ತಮ ವ್ಯಕ್ತಿಯಲ್ಲಿ ಎಲ್ಲವೂ ಅಡಗಿರುತ್ತದೆ. ನೀವು ಬೆಳೆದರೆ ನಿಮ್ಮ ಹತ್ತಿರ ಜನ ಬರುತ್ತಾರೆ ಎಂದು ಹೇಳಿದರು.
ಗೌರವಾನ್ವಿತ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ ಆಗಮಿಸಿದ್ದರು. ಅತಿಥಿಗಳಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಅರುಣ್ ಕುಮಾರ್ ಗುಡೂರ್, ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರಾದ ಶ್ರೀ ಗುರುಶಾಂತಯ್ಯ, ಅಮರನಾಥ್ ಕುಳಗೇರಿ, ಶ್ರೀ ರಾಯಪ್ಪ ಭಾರಿಗಿಡದ್, ಮಡಿವಾಳಪ್ಪ ಮಡಿವಾಳಕರ್, ಶಂಶುದಿನ ಗುಂಡಗುರ್ತಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಳೀಯ ಉಪಾಧ್ಯಕ್ಷರಾದ ಶ್ರೀ ಶಿವನಗೌಡ ಪಾಟೀಲ್ ಹಂಗರಗಿ ಅಲಂಕರಿಸಿದ್ದರು. ಈ ಸಂದರ್ಭದಲ್ಲಿ ಎಸ್.ಎಸ್.ಆರ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ವಿಶ್ವಾಸ ಶಿಂಧೆ, ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು.





















