ವಿದ್ಯಾವಂತ ಸಮಾಜ ನಿರ್ಮಾಣದ ಗುರಿ, ದೇಶ ಅಭಿವೃದ್ದಿಗೆ ಶಿಕ್ಷಣ ಮುಖ್ಯ

ಬೆಂಗಳೂರು.ಜೂ೨೧:ಜಯನಗರದ ಶ್ರೀ ಚಂದ್ರಗುಪ್ತ ಮೌರ್ಯ(ಶಾಲಿನಿ ಆಟದ)ಮೈದಾನದಲ್ಲಿ ರಕ್ಷಾ ಫೌಂಡೇಷನ್ (ರಿ)ವತಿಯಿಂದ ೧೩ನೇ ವರ್ಷದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿಯರಿಗೆ ಉಚಿತವಾಗಿ ೨ಲಕ್ಷ ನೋಟ್ ಪುಸ್ತಕಗಳ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಅನಾಥ ಆಶ್ರಮದ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮ.

ಶಾಸಕರು, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರು ಬಿ.ವೈ. ವಿಜಯೇಂದ್ರರವರು, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ರವರು, ರಕ್ಷಾ ಫೌಂಡೇಷನ್ ಸಂಸ್ಥಾಪಕರು, ಶಾಸಕರಾದ ಸಿ.ಕೆ.ರಾಮಮೂರ್ತಿರವರು, ಶಾಸಕರಾದ ಉದಯ್ ಗರುಡಾಚಾರ್ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ನಾಗರತ್ನ ರಾಮಮೂರ್ತಿರವರು, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ನಟ ವಸಿಷ್ಟ ಸಿಂಹರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ನೋಟ್ ಪುಸ್ತಕ, ಲ್ಯಾಪ್ ಟಾಪ್ ಗಳನ್ನು ವಿತರಿಸಿದರು.ಬಿ.ವೈ.ವಿಜಯೇಂದ್ರರವರು ಮಾತನಾಡಿ ರಕ್ಷಾ ಫೌಂಡೇಷನ್ ಸ್ಥಾಪಕರಾದ ಶಾಸಕರಾದ ರಾಮಮೂರ್ತಿರವರ ನೇತೃತ್ವದಲ್ಲಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಹ ಸಹಕಾರ ನೀಡುತ್ತಿದ್ದಾರೆ, ೧೧ನೇ ವಿಶ್ವ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ ಇಂದು.
ಭಾರತದ ಯೋಗ ವಿಶ್ವಮಟ್ಟದಲ್ಲಿ ಪ್ರಧಾನಿ ನರೇಂದ್ರಮೋದಿರವರ ಹೆಚ್ಚು ಪ್ರಚಲಿತಕ್ಕೆ ಬಂತು.ಮಕ್ಕಳು ದೇವರ ಸಮಾನ, ಅವರ ಮನಸ್ಸಿನಲ್ಲಿ ಯಾವ ಕೆಟ್ಟ ಚಿಂತನೆ ಇರುವುದಿಲ್ಲ, ಜಾತಿ ಮತ ಪಂಥ ಭೇದವಿರುವುದಿಲ್ಲ.ಸಾಧನೆ ಇಲ್ಲದೇ ಹೋದರೆ ಸಾವಿಗೆ ಅರ್ಥವಿಲ್ಲ, ಹುಟ್ಟಿದ ಮೇಲೆ ಸಾಧನೆ ಮಾಡಿ ನಿಲ್ಲಬೇಕು ಎಂದು ಹೇಳಿದರು.ಆರ್.ಅಶೋಕ್ ರವರು ಮಾತನಾಡಿ ಪ್ರತಿ ವರ್ಷ ಅಪರೂಪದ ಕಾರ್ಯಕ್ರಮವನ್ನು ರಕ್ಷಾ ಫೌಂಡೇಷನ್ ಮಾಡುತ್ತಿದೆ, ಶಿಕ್ಷಣಕ್ಕೆ ಸಹಕಾರ ನೀಡುತ್ತಿದ್ದಾರೆ.

ಶಾಸಕರಾದ ಸಿ.ಕೆ.ರಾಮಮೂರ್ತಿರವರು ಮಾತನಾಡಿ .ಶ್ರೀಮಂತ ಕುಟುಂಬದ ಮಕ್ಕಳಿಗೆ ಎಲ್ಲವು ಸಿಗುತ್ತದೆ ಅದರೆ ಬಡ ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣದಿಂದ ವಂಚಿತರಾಗುತ್ತಾರೆ.

ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂದು ರಕ್ಷಾ ಫೌಂಡೇಷನ್ ಉಚಿತ ನೋಟ್ ಪುಸ್ತಕ ಮತ್ತು ಉನ್ನತ ವ್ಯಾಸಂಗದ ಅನುಕೂಲಕ್ಕೆ ಲ್ಯಾಪ್ ಟಾಪ್ , ವಿದ್ಯಾರ್ಥಿ ವೇತನ ನೀಡುತ್ತಾ ವಿದ್ಯಾವಂತ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶ ನಮ್ಮದು ಎಂದು ಹೇಳಿದರು.ಬಿಟ್ಸ್ ಗುರು ತಂಡ ಸಂಗೀತ ಕಾರ್ಯಕ್ರಮ ಮತ್ತು ಪುಟ್ಟರಾಜುರವರ ಜಾದು ಪ್ರದರ್ಶನ ಏರ್ಪಡಿಸಲಾಗಿತ್ತು.ಜಯದೇವ ಆಸ್ಪತ್ರೆಗೆ ೨ಲಕ್ಷ ರೂಪಾಯಿ ದೇಣಿಗೆಯನ್ನು ಜಯದೇವ ಆಸ್ಪತ್ರೆ ನಿರ್ದೇಶಕರಾದ ರವೀಂದ್ರನಾಥ್ ರವರಿಗೆ ನೀಡಲಾಯಿತು.ಮಾಜಿ ಪಾಲಿಕೆ ಸದಸ್ಯಕೆ.ಉಮೇಶ್ ಶೆಟ್ಟಿ, ಸೋಮಶೇಖರ್, ಗೋವಿಂದನಾಯ್ಡು,ದೀಪಿಕಾ ಮಂಜುನಾಥ್ ರೆಡ್ಡಿ, ಚನ್ನಗಿರಿಯಪ್ಪ, ಚಂದ್ರಶೇಖರ ರಾಜು, ಬಿಜೆಪಿ ಮುಖಂಡ ತಮ್ಮೇಶ್ ಗೌಡ, ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ನರೇಶ್ ರವರು ಭಾಗವಹಿಸಿದ್ದರು.