
ಹುಬ್ಬಳ್ಳಿ,ಡಿ31: ಶ್ರೀ ವೈಕುಂಠ ಏಕಾದಶಿಯನ್ನು ಇಸ್ಕಾನ್ ಭಕ್ತಿಭಾವ ಮತ್ತು ಆಧ್ಯಾತ್ಮಿಕ ಉತ್ಸಾಹದಿಂದ ವೈಭವವಾಗಿ ಆಚರಿಸಲಾಯಿತು.
ವೈಕುಂಠ ದ್ವಾರವನ್ನು ಬೆಳಿಗ್ಗೆ 8:30 ಗಂಟೆಗೆ ಸ್ವರ್ಣ ಗ್ರೂಪ್ ಆಫ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಚಿ. ವಿ.ಎಸ್.ವಿ. ಪ್ರಸಾದ್ ಅವರು, ಇಸ್ಕಾನ್ ಹುಬ್ಬಳ್ಳಿ-ಧಾರವಾಡದ ಅಧ್ಯಕ್ಷರಾದ ರಾಜೀವ್ ಲೋಚನ ದಾಸರ ಉಪಸ್ಥಿತಿಯಲ್ಲಿ ಹಾಗೂ ಇತರರ ಸಮ್ಮುಖದಲ್ಲಿ ಉದ್ಘಾಟಿಸಿದರು.
ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಗರುಡ ಸೇವಾ ಲಕ್ಷ್ಮೀ ನಾರಾಯಣರ ಲಕ್ಷಾರ್ಚನಾ ಸೇವೆ ನಡೆಯಿತು. ಸಂಜೆ ಶ್ರೀ ವೆಂಕಟೇಶ್ವರ ಹೋಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಸಂಜೆ 6:00 ಗಂಟೆಯಿಂದ 9:00 ಗಂಟೆಯವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ “ಕೃಷ್ಣ ಚರಿತಾಮೃತಂ” ಎಂಬ ನೃತ್ಯ ನಾಟಕವನ್ನು ಪ್ರದರ್ಶಿಸಲಾಯಿತು. ಭಗವಾನ್ ಶ್ರೀಕೃಷ್ಣರ ದಿವ್ಯ ಲೀಲೆಯನ್ನು ನೃತ್ಯ ಮತ್ತು ಸಂಗೀತದ ಮೂಲಕ ಅದ್ಭುತವಾಗಿ ಪ್ರದರ್ಶಿಸಲಾಯಿತು.
ಇದೇ ವೇಳೆ ನಾಟ್ಯಾಂಜಲಿ ಕಲಾಕೇಂದ್ರದವರಿಂದ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಿತು. ಜೊತೆಗೆ ನಡೆದ ಸಂಗೀತ ಜುಗಲ್‍ಬಂದಿ ಕಾರ್ಯಕ್ರಮವು ಆಕರ್ಷಿಸಿ, ಸಂಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಕ್ತಿಮಯ ವಾತಾವರಣವನ್ನು ತುಂಬಿತು.

























