
ಬೆಂಗಳೂರು,ಡಿ.೧೩-ಮನೆಯಲ್ಲಿ ಒಂಟಿಯಾಗಿದ್ದ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿರುವ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಯಂಡಹಳ್ಳಿಯಲ್ಲಿ ನಡೆದಿದೆ.
ಕಳೆದ ಅಕ್ಟೋಬರ್ ೨೩ ರಂದು ರಾತ್ರಿ ೮-೩೦ ಅಪ್ರಾಪ್ತ ೧೭ ವರ್ಷದ ಬಾಲಕಿ ಅನಿತಾ ಮನೆಯ ಪಕ್ಕದ ಬೀದಿಯ ಅಜ್ಜಿಯ ಮನೆಗೆ ತಂದೆ ಹೋಗಿ ಬರುವಷ್ಟರಲ್ಲಿ ನಾಪತ್ತೆಯಾಗಿದ್ದಾಳೆ.
ತಂದೆ ಮಗಳಿಗಾಗಿ ಹಲವೆಡೆ ಹುಡುಕಾಟ ನಡೆಸಿ ಪತ್ತೆಯಾಗದಿದ್ದರಿಂದ ಆತಂಕಗೊಂಡು ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿಯು ತಂದೆ ಜೊತೆ ಪ್ಯಾನ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿಕೊಂಡು ಬಂದ ಬಳಿಕ ನಾಪತ್ತೆಯಾಗಿರುವ ಸಂಬಂಧ ನೀಡಿರುವ ದೂರು ದಾಖಲಿಸಿರುವ ಚಂದ್ರಲೇಔಟ್ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಬಾಲಕಿಯ ಬಗ್ಗೆ ಮಾಹಿತಿ ದೊರೆತಲ್ಲಿ ಚಂದ್ರಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ೯೪೮೦೮೦೧೭೨೨ ಇಲ್ಲವೇ ಠಾಣೆ, ೨೨೯೪೨೫೧೨ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.

























