
ಕರಜಗಿ:ಜೂ.5:ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಫರತಾಬಾದ ಗ್ರಾಮದಲ್ಲಿ ಬಲಿಗಾಗಿ ಬಾಯಿ ತೆರೆದ ದ್ವಾರ ಬಾಗಿಲು ಸುಮಾರು ನೂರು ವರ್ಷಗಳ ಪುರಾತನದ ದ್ವಾರ ಬಾಗಿಲು ಇದೀಗ ಸಂಪೂರ್ಣವಾಗಿ ಶಿಥಿಲಾವಸ್ತೆಗೆ ತಲುಪಿದೆ. ಈ ದ್ವಾರ ಬಾಗಿಲು ಪಕ್ಕದಲ್ಲಿಯೇ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಿದ್ದು ಅಪಾಯಕ್ಕೆ ಅವ್ಹಾನ ನೀಡುತ್ತಿದೆ ಜೊತೆಗೆ ಜೀವ ಬಲಿಗಾಗಿ ಕಾದು ಕುಳಿತಿದೆ ಹಲವು ಬಾರಿ ಗ್ರಾಮ ಪಂಚಾಯತಿಯ ಅಧ್ಯಕ್ಷರ ಮತ್ತು ಸದಸ್ಯರ ಕಣ್ಣೇದುರಿಗೆ ಈ ದೃಶ್ಯ ಕಂಡು ಬಂದರು ಹಾಗೂ ಗಮನಕ್ಕಿದ್ದರು ಇಲ್ಲಿಯವರಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಫರತಾಬಾದ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುತಿದ್ದಾರೆ.
ಗ್ರಾಮದ ಪುರಾತನ ದ್ವಾರ ಬಾಗಿಲವು ಸಂಪೂರ್ಣವಾಗಿ ಬೀಳುವ ಹಂತದಲ್ಲಿದ್ದು ಕೂಡಲೇ ಗ್ರಾಮ ಪಂಚಾಯತಿಯ ಅಧಿಖಾರಿಗಳು ಅದನ್ನು ಪುನಃ ನವಿಕರಣ ಮಾಡಬೇಕು
ಮಂಜುನಾಥ ನೈಕೋಡಿ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷ