Home ಜಿಲ್ಲೆ ಕಲಬುರಗಿ ಮಕ್ಕಳ ಭವಿಷ್ಯ ಪೋಷಕರ ಕೈಯಲ್ಲಿದೆ

ಮಕ್ಕಳ ಭವಿಷ್ಯ ಪೋಷಕರ ಕೈಯಲ್ಲಿದೆ

ಕಲಬುರಗಿ :ಫೆ.18: ವಿದ್ಯಾರ್ಥಿಗಳ ಬದುಕಿಗೆ ಶಿಕ್ಷಣ ಮತ್ತು ನೈತಿಕ ಪ್ರಜ್ಞೆ ಅತಿ ಅವಶ್ಯಕ. ಮಕ್ಕಳ ಶೈಕ್ಷಣಿಕ ಬದುಕಿನ ಕಾಳಜಿ ಶಿಕ್ಷಕರಿಗಿದ್ದರೆ, ತಪ್ಪುಗಳನ್ನು ತಿದ್ದಿ ಜೀವನ ಮೌಲ್ಯ ಕಲಿಸಿ ಭವಿಷ್ಯ ರೂಪಿಸುವುದು ಪೋಷಕರ ಕೈಯಲ್ಲಿದೆ ಎಂದು ಜೇವರ್ಗಿ ಕಾಲೋನಿಯ ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಪ್ರಕಾಶ ಬಡಿಗೇರ ಹೇಳಿದರು.
ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ (ರಿ) ಭೀಮರಾಯಗೌಡ ಮಲ್ಕಪ್ಪಗೌಡ ಶಾಲಾ ಅವರಣದಲ್ಲಿ ಆಯೋಜಿಸಿದ 18 ನೇ ಶಾಲಾ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಕೊಡುಗೆಯಿದೆ. ಪೋಷಕರು ಮಕ್ಕಳಿಗೆ ಸಂಸ್ಕøತಿ ಮತ್ತು ಸಂಸ್ಕಾರವನ್ನು ಮನೆಯಿಂದಲೇ ಕಲಿಸಿ ಮೌಲ್ಯಾಧಾರಿತ ಜೀವನ ರೂಪಿಸಿಕೊಳ್ಳಲು ನೆರವು ಮತ್ತು ಸಲಹೆ ನೀಡಬೇಕು. ಜೊತೆಗೆ, ಬುದ್ಧ, ಬಸವ, ಡಾ. ಬಿ. ಆರ್. ಅಂಬೇಡ್ಕರ್, ಜ್ಯೋತಿಬಾ ಪುಲೆ, ಸಾವಿತ್ರಿ ಬಾಯಿ ಪುಲೆ, ಪೆರಿಯಾರ, ಫಾತಿಮಾ ಶೇಖ್ ಮುಂತಾದ ದಾರ್ಶನಿಕರ ಜೀವನ, ತತ್ವ ಮತ್ತು ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವದೊಂದಿಗೆ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ಶಕಾಪೂರದ ಎಸ್‍ಎ ತಪೋವನ ಮಠದ ಶ್ರೀ. ಷ. ಬ್ರ. ಶಿವಾಚಾರ್ಯ ರತ್ನ ಡಾ. ಶಿದ್ದರಾಮ ಶಿವಚಾರ್ಯ ಸಾನಿಧ್ಯವಹಿಸಿ ಆಶೀವರ್ಚನ ನೀಡಿದರು. ಯಡ್ರಾಮಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರುಕುಂ ಪಟೇಲ್ ಪೆÇೀ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಇಜೇರಿ ಮಾಜಿ ಮಂಡಲ ಪಂ. ಪ್ರಧಾನರಾದ ಲಾಲಯ್ಯ ಎಮ್ ಗುತ್ತೇದಾರ, ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬಮ್ಮನಳ್ಳಿ, ಜೇವರ್ಗಿ ಪಿ.ಎಸ್.ಐ ಗಜಾನನ ಬಿರಾದಾರ, ಖ್ಯಾತ ಉದ್ದಿಮೆದಾರ ದೇವಿಂದ್ರ ಎಸ್. ಯಂಕಂಚಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಲಿ ಪಟೇಲ್ ಮಾಲಿ ಬಿರಾದಾರ, ನ್ಯಾಯವಾದಿ ಅಮೀರ ಹಮಜಾ ಬಿ. ಲಖಣಾಪೂರ, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಿಬೂಬ ಸೌದಾಗರ, ಡಾ. ಬಿ.ಆರ್. ಅಂಬೇಡ್ಕರ್ ಅನುದಾನಿತ ಪ್ರೌಢ ಶಾಲೆ ಸಹ ಶಿಕ್ಷಕ ಅಮರೇಶ್ ಲಿಂಗಸೂರ, ಸಿ.ಆರ್.ಪಿ. ಶರಣು ಹಿರೇಮಠ ಹಾಗೂ ಅತಿಥಿಗಳಾಗಿ ವೈದ್ಯ ಡಾ. ಚನ್ನಬಸಪ್ಪ ಎಸ್ ಸನ್ನಜ, ಹಿರಿಯರಾದ ದಾವುದ ಸಾಐ ಕೆ. ಸೌದಾಗರ, ಮಲ್ಲಪ್ಪ ಕಿಲೇದಮನಿ, ಬಿ.ಜೆ.ಪಿ ತಾಲ್ಲೂಕ ಅಧ್ಯಕ್ಷ ದೇವಿಂದ್ರ ಎಮ್. ಮುತ್ತಕೋಡ, ಗ್ರಾಂ, ಪಂ. ಸದಸ್ಯ ರವೀಂದ್ರ ಶುರ್ಥಿ, ಚಿತ್ರ ಕಲಾವಿದ ವೆಂಕಟೇಶ ಎನ್. ಗುತ್ತೇದಾರ, ಕರ್ನಾಟಕ ಕುರುಬರ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಕೆ. ಜದರಾಣಿ, ಸರಕಾರಿ ಪ್ರಾಥಮಿಕ ಶಾಲಾ ನೌಕರರ ಸಂಘದ ಉಪಾಧ್ಯಕ್ಷ ಕಾಸಯ್ಯ ಗುತ್ತೇದಾರ, ರಮೇಶ ಮಹೇಂದ್ರಕರ್, ಕರ್ನಾಟಕ ಸರಕಾರ ತಾಲ್ಲೂಕ ಪಂಚ ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಸದಸ್ಯರಾದ ಇಸ್ಮಾಯಿಲ್ ಎ. ಕುಕನೂರ, ಸೈದಪ್ಪ ಹೊಸಮನಿ ಹಾಗೂ ಗ್ರಾಮದ ಹಿರಿಯರಾದ ಮತ್ತುಂಜ ಗಜಾಕೊಶ ಹಾಗೂ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಾಹೇಬಗೌಡ ಜಿ. ಯಂಕಂಚಿ ಸೇರಿದಂತೆ ಸಂಸ್ಥೆಯ ಕಾರ್ಯದರ್ಶಿ, ಪದಾಧಿಕಾರಿಗಳು, ಮುಖ್ಯ ಗುರುಗಳು ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಪ್ರಜ್ಞಾವಂತ ತಾಯಿಯೊಬ್ಬಳು ಮಗನಿಗೆ ಶಿಕ್ಷಣ ಕೊಡಿಸಲು ಅಮೇರಿಕಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಸೇರಿಸಿದಳು. ಆದರೆ, ಸಂಸ್ಥೆಯವರು ಬಾಲಕನ ಕೈಗೊಂದು ಪತ್ರ ಕೊಟ್ಟು ಮನೆಗೆ ಕಳುಹಿಸುತ್ತಾರೆ. ಪತ್ರ ಆಲಿಸಿ ಕಣ್ಣೀರು ಸುರಿಸಿದ ತಾಯಿಗೆ ಮಗ ಪ್ರಶ್ನಿಸಿದ. ನಿನ್ನಂತಹ ಜಾಣನಿಗೆ ಕಲಿಸಲು ಯೋಗ್ಯವಾದ ಶಿಕ್ಷಕರು ಆ ಸಂಸ್ಥೆಯಲಿಲ್ಲವೆಂದು ಬರೆದಿದ್ದಾರೆ ಎಂದಳು. ತಾಯಿ ಸಾವಿನ ನಂತರ ಪತ್ರದ ಸಾರಾಂಶ ಹೀಗಿತ್ತು. ‘ಬುದ್ದಿಮಾಂದ್ಯನಾಗಿರುವ ನಿಮ್ಮ ಮಗನಿಗೆ ನಮ್ಮ ಪ್ರತಿಷ್ಠಿತ ಸಂಸ್ಥೆಯಲ್ಲಿ ಶಿಕ್ಷಣ ನೀಡಲು ಸಾಧ್ಯವಿಲ್ಲವೆಂದು’ ಬರೆಯಲಾಗಿತ್ತು. ಈ ಸತ್ಯಾಂಶವನ್ನು ಅರಿತು ದುಖಿಃತನಾದ ಬಾಲಕನೇ ಸಾವಿರಾರು ಅವಿಷ್ಕಾರ ಮಾಡಿ ವಿಜ್ಞಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಜಗತ್ಪ್ರಸಿದ್ಧ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್. ಆದರಿಂದ ತಂದೆ ತಾಯಿಗಳು ಮಕ್ಕಳ ಪ್ರತಿಭೆ, ಸಾಮಥ್ರ್ಯ, ಬುದ್ದಿವಂತಿಕೆ ಮತ್ತು ಕ್ರಿಯಾಶೀಲತೆಯನ್ನು ಗ್ರಹಿಸುವುದರೊಂದಿಗೆ ಸಕಾಲದಲ್ಲಿ ಸೂಕ್ತ ನಿಲುವುಗಳನ್ನು ತಗೆದುಕೊಳ್ಳಬೇಕು.

  • ಡಾ. ಪ್ರಕಾಶ ಬಡಿಗೇರ, ಉಪನ್ಯಾಸಕರು