ಅನ್ನ ಪರಬ್ರಹ್ಮ ಸ್ವರೂಪ


ರಬಕವಿ-ಬನಹಟ್ಟಿ,ಜ.೨೦: ಅನ್ನದ ಕಣಕಣದಲ್ಲೂ ಶಕ್ತಿಯ ಅಂಕುರವಿದೆ. ಶರಣ ಪರಂಪರೆಯಲ್ಲಿ ಕಾಯಕ ದಾಸೋಹಕ್ಕೆ ಆದ್ಯತೆಯಿದೆ. ಇಂದು ದಾಸೋಹ ಪರಂಪರೆ ಮಾಯವಾಗಿದ್ದರೂ ಸೇವಾಮನೋಭಾವನೆ ಹೊಂದಿರುವ ದಾಸೋಹ ಇಂದಿಗೂ ಪಾವಿತ್ರತೆ ಕಾಯ್ದುಕೊಂಡಿದೆಯೆAಬುದಕ್ಕೆ ನಾಡಿನ ಪ್ರಸಿದ್ಧ ಮಠಗಳು, ದೇಗುಲಗಳಲ್ಲಿ ನಡೆಯುವ ದಾಸೋಹವೇ ಸಾಕ್ಷಿಯಾಗಿದೆ ಎಂದು ಹಿರಿಯ ನ್ಯಾಯವಾದಿ ಅರವಿಂದ ವ್ಯಾಸ ಹೇಳಿದರು.


ರಬಕವಿಯ ಶ್ರೀದಾನಮ್ಮದೇವಿ ದೇವಸ್ಥಾನದಲ್ಲಿ ಶ್ರೀಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ಆಯೋಜಿಸಿದ್ದ ೩೫ನೇ ಅನ್ನದಾಸೋಹ ಸೇವೆಗೆ ಚಾಲನೆ ನೀಡಿ ಸಕಲ ಜೀವರಾಶಿಗೂ ಅನ್ನ ಪರಬ್ಹö್ಮವಾಗಿದ್ದು, ಕಾಯಕಕ್ಕೆ ಅಣಿಯಾಗಲು ಶಕ್ತಿಮೂಲವಾಗಿದ್ದು, ಪ್ರಸಾದ ರೂಪದಲ್ಲಿ ಪ್ರತಿ ಭಕ್ತರಿಗೂ ದಾಸೋಹ ನಡೆಸುವ ಉದ್ಯಮಿ ಸೋಮಶೇಖರ ಕೊಟ್ರಶೆಟ್ಟಿ ತಮ್ಮ ನಿಸ್ವಾರ್ಥತೆಯಿಂದ ಇತರರಿಗೂ ಮಾದರಿಯಾಗಿದ್ದಾರೆಂದರು. ಈ ಸಂದರ್ಭದಲ್ಲಿ ಧನಲಕ್ಷಿö್ಮÃ ಸಹಕಾರಿ ಸಂಘದ ನೂತನ ಅಧ್ಯಕ್ಷ ಪ್ರಭು ಉಮದಿ, ಅರವಿಂದ ವ್ಯಾಸರನ್ನು ಸನ್ಮಾನಿಸಲಾಯಿತು. ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಶಿವಜಾತ ಉಮದಿ, ಶಿವಾನಂದ ದಾಶ್ಯಾಳ, ರೇವಣ್ಣ ಉಮದಿ, ಮಗಾದೇವಯ್ಯಾ ನಂದಯ್ಯಗೋಳ, ಬಸವರಾಜ ತೊರ್ಲಿ, ವಿಜಯಕುಮಾರ ಹಲಕುರ್ಕಿ, ಎಂ.ಎಸ್.ಗಡೆನ್ನವರ, ಭಾರತ ಗ್ಯಾಸ್ ಸಿಬ್ಬಂದಿ ಸೇರಿದಂತೆ ಸಹಸ್ರಾರು ಭಕ್ತರು ಪ್ರಸಾದ ಸ್ವೀಕರಿಸಿದರು.