Home ಜಿಲ್ಲೆ ಶಿಸ್ತು ಕಲಿಸುವ ಮೊದಲ ಕಲಿಕಾ ಕೇಂದ್ರ ಅಂಗನವಾಡಿ

ಶಿಸ್ತು ಕಲಿಸುವ ಮೊದಲ ಕಲಿಕಾ ಕೇಂದ್ರ ಅಂಗನವಾಡಿ

ಗುರುಮಠಕಲ್,ಫೆ ೧೦: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಗುರುಮಠಕಲ್, ಅಜೀಮ್ ಪ್ರೇಮ್‌ಜಿ ಫೌಂಡೇಶನ್, ಜಿಲ್ಲಾ ಸಂಸ್ಥೆ ಸಹಯೋಗದಲ್ಲಿ ಕಟ್ಟಲಗೇರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳ ಆಧಾರಿತ ಅಂಗನವಾಡಿ ಬಾಲಮೇಳ೨೦೨೬ ಅನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಶು ಅಭಿವೃದ್ಧಿ ತಾಲೂಕು ಅಧಿಕಾರಿ ಶರಣಬಸಪ್ಪ ಬೆಲಗುಂಪಿ ಅವರು ಮಾತನಾಡುತ್ತ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗಾಗಿ ನಡೆಯುವ ಸಮಗ್ರ ಕಲಿಕಾ ಪ್ರಕ್ರಿಯೆಯನ್ನು ಪೋಷಕರು ಹಾಗೂ ಸಮುದಾಯದ ಮುಂದೆ ಪ್ರದರ್ಶಿಸುವುದು, ಹಾಗೂ ಮಕ್ಕಳ ಆರಂಭಿಕ ಶಿಕ್ಷಣದಲ್ಲಿ ಅಂಗನವಾಡಿಯ ಪಾತ್ರವನ್ನು ಜನರಿಗೆ ಸ್ಪಷ್ಟಪಡಿಸುತ್ತ, ನಿಮ್ಮ ಮಕ್ಕಳು ಅಂಗವಾಡಿ ಶಾಲೆಗೆ ಬರುತ್ತಾರೆ ಅಲ್ಲಿ ಮಕ್ಕಳಿಗೆ ಉತ್ತಮವಾದ ಪೌಷ್ಟಿಕ ಆಹಾರದ ಜೋತೆಗೆ ಮುಂದಿನ ದಿನಗಳಲ್ಲಿ ಆ ಮಗುವು ಶಾಲಾ ಪೂರ್ವಕ ಸಿದ್ಧತೆಗಳನ್ನು ಕಲಿಯುವದರ ಜೋತೆಗೆ, ಹಾಡಲು, ನೃತ್ಯ ಮಾಡಲು, ಮಾತನಾಡಲು, ಹಾಗೂ ಶಿಕ್ಷಣಕ್ಕೆ ಮೊದಲು ಶಿಸ್ತನ್ನು ಕಲಿಯಲು ಅಂಗನವಾಡಿ ಕೇಂದ್ರಗಳು ಕೆಲಸಮಾಡುತ್ತಿವೆ, ನಿಮ್ಮ ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ಬರುವಾಗ ನನ್ನ ಮಗು ಎನು ಕಲಿಯುತ್ತಿದೆ ಅನ್ನುವುದನ್ನು ಪಾಲಕ ಪೋಷಕರು ಮಕ್ಕಳಹಿಂದೆ ತಾವು ಕೂಡ ಬಂದು ನೋಡಿದಾಗ ನಿಮ್ಮ ಮಕ್ಕಳ ಭವಿಷ್ಯ ಮುಂದಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿ ಉಜ್ವಲವಾಗಿ ಬೆಳೆಯಲು ತಾವು ಸಹಾಕಾರ ನೀಡಿದಂತಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಪ್ರಸ್ತಾವಿಕವಾಗಿ ಅಜೀಮ್ ಪ್ರೇಮ್‌ಜಿ ಫೌಂಡೇಶನ್ , ಸಂಪನ್ಮೂಲ ವ್ಯಕ್ತಿ ಚಂದ್ರಕಾAತ ರೆಡ್ಡಿ, ಅವರು ಮಾತನಾಡಿ, ಅಂಗನವಾಡಿ ಮಕ್ಕಳ ಜೀವನದ ಮೊದಲ ಕಲಿಕಾ ಕೇಂದ್ರ ಎಂದು ತಿಳಿಸಿದರು. ಮಗುವಿನ ಮೊದಲ ಸಾವಿರ ದಿನಗಳು ಪಾಲಕ ಪೋಷಕರ ಜೋತೆ ಹಾಗೂ ಮಕ್ಕಳ ದೈಹಿಕ, ಬೌದ್ಧಿಕ, ಭಾಷಾ, ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆ ಅಂಗನವಾಡಿಯಲ್ಲೇ ಅಡಿಪಾಯ ಹೊಂದಿದೆ ಎಂದು ಅವರು ಹೇಳಿದರು.
ಬಾಲಮೇಳದ ಪ್ರಮುಖ ಆಕರ್ಷಣೆಯಾಗಿ ಅಂಗನವಾಡಿ ಕೇಂದ್ರಗಳಲ್ಲಿ ದಿನನಿತ್ಯ ನಡೆಯುವ ಕಲಿಕಾ ಚಟುವಟಿಕೆಗಳನ್ನು ಮಕ್ಕಳಿಂದಲೇ ಪ್ರದರ್ಶಿಸಲಾಯಿತು. ಪ್ರತಿಯೊಂದು ಚಟುವಟಿಕೆಯ ಉದ್ದೇಶ ಮತ್ತು ಕಲಿಕಾ ಮಹತ್ವವನ್ನು ಪೋಷಕರಿಗೆ ಚಂದ್ರಕಾAತರೆಡ್ಡಿ ಅವರು ಪಾಲಕ ಪೋಷಕರಿಗೆ ವಿವರಿಸಿ ಹೇಳಿದರು.
ಬಾಲಮೇಳ ಕಾರ್ಯಕ್ರಮವನ್ನು ಶಾಲಾ ಮುಖ್ಯ ಗುರು ನರಸಪ್ಪ ಜೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ರೇಣುಕಾ ಪಡಿಗೆ, ಪುರಸಭೆ ಸದಸ್ಯರು ಆಶನ್ನ ಬುದ್ದ, ಫಯಾಜ್, ಪವಿತ್ರಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು, ಮಕ್ಕಳು, ಪಾಲಕ ಪೋಷಕರು ಭಾಗವಹಿಸಿ ಯಶಶ್ವಿಯಾಗಿ ಜರುಗಿತು.