
ಲಕ್ಷೆ÷್ಮÃಶ್ವರ,ಫೆ.೧೨: ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಹೊರವಲಯದಲ್ಲಿ ನಿನ್ನೆ ಏಕಾಏಕಿ ಸುಮಾರು ಹತ್ತಾರು ಎಕರೆ ಪ್ರದೇಶದಲ್ಲಿ ಬೆಂಕಿ ಆವರಿಸಿಕೊಂಡು ಆತಂಕ ಸೃಷ್ಟಿಸಿತ್ತು.
ಆದರೆ ಈ ಜಮೀನಿನಲ್ಲಿ ಯಾವುದೇ ಬೆಳೆಗಳು ಇರದ್ದರಿಂದ ಹಾನಿ ಸಂಭವಿಸಿಲ್ಲ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದವರು ರೈತರು ಮತ್ತು ಸಾರ್ವಜನಿಕರು ಬೇಸಿಗೆ ಕಾಲವಾಗಿರುವುದರಿಂದ ಹೆಚ್ಚು ಜಾಗೃತಿ ಇರುವಂತೆ ಮನವಿ ಮಾಡಿದ್ದಾರೆ.



























