ಕಾಳಗಿ:ಅ.29:ತಾಲೂಕಿನ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಮಂಗಳವಾರ ಆಯೋಜಿಸಲಾದ “ಛಪ್ಪನ ಭೋಗ”(ಅನ್ನಕೂಟ) ಮಹೋತ್ಸವ ಭಕ್ತರಿಂದ ತುಂಬಿ ತುಳುಕಿತು.
ದೇವರಿಗೆ 56 ವಿಧದ ನೈವೇದ್ಯಗಳನ್ನು ಅರ್ಪಿಸುವ ಈ ವಿಶೇಷ ಆಚರಣೆ ಭಕ್ತಿಭಾವ ಮತ್ತು ವೈಭವದಿಂದ ನೆರವೇರಿತು.
ಬೆಳಗಿನ ಪೂಜೆಯ ಬಳಿಕ ದೇವರ ಅಲಂಕಾರ, ಮಂಗಳಾರತಿ ಹಾಗೂ ಭೋಗಾರ್ಪಣೆ ನಡೆಯಿತು. ಸಾಂಪ್ರದಾಯಿಕ ಸಂಗೀತ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ದಿನಪೂರ್ತಿ ನಡೆಯುತ್ತಾ ಭಕ್ತರನ್ನು ಆಕರ್ಷಿಸಿದವು.
ಸ್ಥಳೀಯ ಗ್ರಾಮಸ್ಥರು, ಭಕ್ತರು ಹಾಗೂ ಸೇವಾ ಸಂಸ್ಥೆಗಳು ಸೇರಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಯುವಕ ಮಂಡಳಿ ಹಾಗೂ ಸದಭಕ್ತರು ಸಹಕರಿಸಿದರು.
ದೇವಸ್ಥಾನ ಸಂಚಾಲಕ ಕೃಷ್ಣಾದಾಸ ಮಹಾರಾಜ, ಪ್ರಧಾನ ಅರ್ಚಕ ಕೇಶವದಾಸ ಮಹಾರಾಜ, ಬಾಲಕದಾಸ(ನಾಗಾಸಾಧು), ರಾಮಾನುಜಾ ಮಹಾರಾಜ, ಸಾಗರ ಮಹಾರಾಜ, ವಿಷ್ಣುಮಹಾರಾಜ,
ಗುರುರಾಜ ಬಾವಗಿ, ಸಂತೋಷ ವರ್ಮಾ, ವಿಷ್ಣುದಾಸ ಕಾಪಡಿಯ, ಶ್ರೀಕಾಂತ ಬಲದವ, ರಾಜೇಶ ಮಾಲು, ದಾಮೋಧರ ಗಿಲಡಾ, ರಾಘವೇಂದ್ರ ಗುಂಡಾಮೋರ,
ಮಲ್ಲೀಕಾರ್ಜುನರೆಡ್ಡಿ ಚೇತನ ಮೋಟಾರ್ರ್ಸ ಕಾಳಗಿ,
ರೈತ ಸಂಘ ಹಾಗೂ ರೈತ ಸೇನೆ ಕಾಳಗಿ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ,
ದಿಲಿಪಕುಮಾರ ಬಾನುವಡಿಯ, ಹಸ್ಮುಕ ಗೋರ್ಫಾಡ, ದತ್ತು ಮುಚ್ಚಟ್ಟಿ, ಸಿದ್ದು ಸುಗೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
























