Home ಜಿಲ್ಲೆ ಕಲಬುರಗಿ ದೇವದಾಸಿ ಪದ್ಧತಿ ಸಮಾಜಕ್ಕೆ ಮಾರಕವಾದ ರೋಗವಿದ್ದಂತೆ

ದೇವದಾಸಿ ಪದ್ಧತಿ ಸಮಾಜಕ್ಕೆ ಮಾರಕವಾದ ರೋಗವಿದ್ದಂತೆ

ಕಲಬುರಗಿ,ಮೇ.06: ದೇವದಾಸಿ ಪದ್ಧತಿಯು ಸಮಾಜಕ್ಕೆ ಮಾರಕವಾದ ರೋಗವಿದ್ದಂತೆ. ಹೆಣ್ಣೊಬ್ಬಳಿಗೆ ಮುತ್ತುಕಟ್ಟಿ ದೇವದಾಸಿಯನ್ನಾಗಿ ಮಾಡುವುದು ಕಾನೂನು ಪ್ರಕಾರ ಅಪರಾಧ. ಇಂತಹ ಕೃತ್ಯ ಎಸಗುವವರಿಗೆ ಹಾಗೂ ಭಾಗಿಯಾದವರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 5 ರಿಂದ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ ಎಂದು ನಿಂಬಾಳ್ ಪಿ.ಎಸ್.ಐ ಇಂದಮ್ಮ ಪಾಟೀಲ್ ಹೇಳಿದರು.
ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಶ್ರೀ ಯಲ್ಲಮ್ಮಾದೇವಿ ದೇವಸ್ಥಾನದ ಆವರಣದಲ್ಲಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಭಕ್ತಾದಿಗಳಿಗೆ ದೇವದಾಸಿ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ಜತ್ರಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಅವರು 1982ರ ದೇವದಾಸಿ ಸಮರ್ಪಣಾ ನಿμÉೀಧ ಕಾಯ್ದೆಯ ಅಡಿಯಲ್ಲಿ ಭಿಕ್ಷೆ ಬೇಡುವುದನ್ನು ಹಾಗೂ ಬೆತ್ತಲೆ ಸೇವೆ ಮಾಡುವುದು ಅಪರಾದ ಎಂದು ತಿಳಿಸಿದರು.
ನಂತರ ಮಾತನಾಡಿದ ದೇವದಾಸಿ ಪುನರ್ವಸತಿ ಯೋಜನಾ ಅನುμÁ್ಠನಾಧಿಕಾರಿ ಬಸವರಾಜ ಆರ್. ನಿಂಬರ್ಗಿಕರ್ ಅವರು ಮಾತನಾಡಿ ಭಕ್ತರಿಗೆ ಅನುಕೂಲವಾಗುವಂತೆ ಮಾಹಿತಿ ಕೇಂದ್ರಗಳನ್ನು ತೆರೆದು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
1982ರ ದೇವದಾಸಿ ಸಮರ್ಪಣಾ ನಿμÉೀಧ ಕಾಯ್ದೆಯ ಅಡಿಯಲ್ಲಿ ಭಿಕ್ಷೆ ಬೇಡುವುದನ್ನು ಹಾಗೂ ಬೆತ್ತಲೆ ಸೇವೆ ಮಾಡುವುದನ್ನು ತಡೆಯಲು ಧ್ವನಿವರ್ಧಕಗಳ ಮೂಲಕ ವ್ಯಾಪಕ ಪ್ರಚಾರ ನಡೆಸಲಾಯಿತು. ಜಾತ್ರೆಯ ಪ್ರಮುಖ ಬೀದಿಗಳಲ್ಲಿ ಕರಪತ್ರಗಳನ್ನು ಹಂಚಿ, ಪೆÇೀಸ್ಟರ್‍ಗಳನ್ನು ಅಂಟಿಸುವ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಾತ್ರಾ ಸಮಿತಿ ಸದಸ್ಯರಾದ ಮಹೇಶ ಪ್ಯಾಟಿ, ಎ.ಎಸ್.ಐ ರಾಜಶೇಖರ ಮುದಗಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಶಾರದಾ ಅವಟಿ, ಮಲ್ಲಿಕಾರ್ಜುನ ದೊಡ್ಡಮನಿ, ನಾಮದೇವ ಗುಡೂರ, ಮಾಯ್.ಡಿ ಬಡಿಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.