
ವಿಜಯಪುರ, ಮೇ. 12 : ಮನೆಯ ಸುರಕ್ಷತೆ, ಕಾನೂನು ಸುವ್ಯವಸ್ಥೆ ಜಾರಿಯಲ್ಲಿ 24*7 ತೊಡಗಿಸಿಕೊಂಡಿರುವ ಆರಕ್ಷಕರು ಈಗ ಹಿರಿಯ ನಾಗರಿಕರ ಸೇವೆಗೂ ಅಣಿಯಾಗುವ ಮೂಲಕ ಇನ್ನೊಂದು ರೂಪದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸುರಕ್ಷತೆಯ ಜೊತೆಗೆ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಲು ಸಜ್ಜಾಗುತ್ತಿದ್ದಾರೆ.
ಒಂಟಿಯಾಗಿರುವ ಹಿರಿಯ ನಾಗರಿಕರು ಒಂಟಿ ಮಹಿಳೆಯರ ಸುರಕ್ಷತೆ ಕುರಿತಾಗಿ `ಆಸರೆ ಅನ್ನುವ ಕಾರ್ಯಕ್ರಮದ ಅಡಿಯಲ್ಲಿ ಆರಕ್ಷಕರು ಈ ವಿಶೇಷ ಸೇವಾ ಕಾರ್ಯ ಕೈಗೊಳ್ಳಲಿದ್ದಾರೆ. ಏಕಾಂಗಿಯಾಗಿ ವಾಸಿಸುವ ಹಿರಿಯ ನಾಗರೀಕರಿಗೆ ಮತ್ತು ಒಂಟಿ ಮಹಿಳೆಯರಿಗೆ ಸುರಕ್ಷೆ ಮತ್ತು ಅವರಲ್ಲಿ ಒಂಟಿ ಭಾವನೆಯನ್ನು ಹೋಗಲಾಡಿಸಿ, ವಿಶ್ವಾಸ ಮೂಡಿಸುವ ತಲುಪಿಸುವ ಈ ಕಾರ್ಯಕ್ರಮ ವಿಜಯಪುರದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೆÇಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿಯೂ ಸಹ ‘ಆಸರೆ’ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ 28 ಪೆÇಲೀಸ ಠಾಣೆಗಳ ವ್ಯಾಪ್ತಿಯ 329 ಬೀಟ್‍ಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಮನೆ-ಮನೆಗೆ ಪೆÇಲೀಸ ಕಾರ್ಯಕ್ರವು ಜಾರಿಯಲ್ಲಿದ್ದು, ಅದರ ಒಂದು ಭಾಗವಾಗಿ ‘ಆಸರೆ’ ಕಾರ್ಯಕ್ರಮವನ್ನು ಅಳವಡಿಸಿಕೊಂಡು ಎಲ್ಲ 329 ಬೀಟ್ ಸಿಬ್ಬಂದಿ ಜನರು ತಮ್ಮ ತಮ್ಮ ಬೀಟ್ ವ್ಯಾಪ್ತಿಯಲ್ಲಿ ಏಕಾಂಗಿಯಾಗಿ ವಾಸಿಸುವ ಹಿರಿಯ ನಾಗರಿಕರ, ಒಂಟಿ ಮಹಿಳೆಯರನ್ನು ಗುರುತಿಸಿ, ಖುದ್ದಾಗಿ ಭೇಟಿಯಾಗಿ ಅವರು ಎದುರಿಸುತ್ತಿರುವ ತೊಂದರೆ ಹಾಗೂ ಸಮಸ್ಯೆಗಳ ಬಗ್ಗೆ ಆಲಿಸಿ ಇದರ ಜೊತೆಗೆ ಪ್ರಸ್ತುತ ಸರ್ಕಾರದಿಂದ ಹಿರಿಯ ನಾಗರಿಕರು, ಒಂಟಿ ಮಹಿಳೆಯರಿಗೆ ಜಾರಿಗೊಳಿಸಲಾದ ಈ ಕೆಳಗಿನ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅವರಿಗೆ ಯೋಜನೆಯ ಸದುಪಯೋಗವನ್ನು ತಲುಪಿಸಿ, ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ವಿಜಯಪುರ ಜಿಲ್ಲೆಯಲ್ಲಿ ‘ಆಸರೆ’ ಕಾರ್ಯಕ್ರಮ ಭಾಗವಾಗಿ 28 ಪೆÇಲೀಸ ಠಾಣೆಗಳ ವ್ಯಾಪ್ತಿಯಲ್ಲಿ ಬರುವ 329 ಬೀಟ್‍ಗಳ ಸಿಬ್ಬಂದಿ ಜನರು ಆಯಾ ಗ್ರಾಮಗಳಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ ಮತ್ತು ಒಂಟಿ ಮಹಿಳೆಯರನ್ನು ಗುರುತಿಸಿ, ಅವರ ಸಮಸ್ಯೆಗಳ ಬಗ್ಗೆ ಖದ್ದಾಗಿ ಆಲಿಸಿ, ಪ್ರಸ್ತುತ ಜಾರಿಯಲ್ಲಿರುವ ಮೇಲಿನ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಇಲಾಖೆಯ ವತಿಯಿಂದ ಕ್ರಮ ವಹಿಸಿ, ಈ ಕೆಳಗಿನಂತೆ ಹಿರಿಯ ನಾಗರಿಕರಿಗೆ ಹಾಗೂ ಒಂಟಿ ಮಹಿಳೆಯರಿಗೆ ವಿವಿಧ ಯೋಜನೆಗಳನ್ನು ತಲುಪಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಸುದೀರ್ಘ ವಿವರಣೆ ನೀಡಿದರು.


























