Home ಜಿಲ್ಲೆ ಕಲಬುರಗಿ ಪ್ರಸ್ತುತ ಸಮಾಜಕ್ಕೆ ಶ್ರೀ ಸೇವಾಲಾಲ ಮಹಾರಾಜರ ತತ್ವಾಚರಣೆ ಅಗತ್ಯ ; ಅರುಣಕುಮಾರ ಪಾಟೀಲ

ಪ್ರಸ್ತುತ ಸಮಾಜಕ್ಕೆ ಶ್ರೀ ಸೇವಾಲಾಲ ಮಹಾರಾಜರ ತತ್ವಾಚರಣೆ ಅಗತ್ಯ ; ಅರುಣಕುಮಾರ ಪಾಟೀಲ

ಅಫಜಲಪುರ:ಫೆ.16: ಸಮಾಜಕ್ಕೆ ಆದರ್ಶ ತತ್ವಗಳು ಸಾರಿದ ಸಂತ ಶ್ರೀ ಸೇವಾಲಾಲ ಮಹಾರಾಜರು ಸಮಾಜಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ ಅವರ ತತ್ವಾಚರಣೆಯಿಂದ ಸುಂದರ ಸಮಾಜ ಕಟ್ಟಲು ಸಹಕಾರಿಯಾಗಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ ಹೇಳಿದರು.

ಪಟ್ಟಣದ ತಹಸೀಲ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾದ ಸಂತ ಶ್ರೀ ಸೇವಾಲಾಲ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಪರಸ್ಪರ ಸೌಹಾರ್ದತೆಯಿಂದ ಬದುಕು ಮಾಡಲು ಹೇಳಿಕೊಟ್ಟ ಮಹಾನ್ ಸಮಾಜ ಸುಧಾರಕ ಸೇವಾ ಲಾಲ್ ಆಗಿದ್ದಾರೆ. ಬಂಜಾರ ಸಮುದಾಯದ ಮುಖಂಡರು ಸಂಘಟಿತರಾಗಿ, ಶಿಕ್ಷಣವಂತರಾಗಬೇಕು ಎಂದು ಪಾಟೀಲ ತಿಳಿಸಿದರು.

ತಹಸೀಲ್ದಾರ ಸಂಜೀವಕುಮಾರ ದಾಸರ ಮಾತನಾಡಿ, ಸಂತ ಶ್ರೀ ಸೇವಾಲಾಲ್ ಮಹಾರಾಜರು ನಮಗೆಲ್ಲ ಆದರ್ಶವಾಗಿದ್ದಾರೆ. ಸೂರ್ಯ ಚಂದ್ರ ಇರುವವೆರೆಗೂ ಮಹಾರಾಜರ ತತ್ವಗಳು ನಮಗೆ ಆದರ್ಶವಾಗಲಿವೆ. ಎಲ್ಲರೂ ಅವರ ಆದರ್ಶಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮವು ಶ್ರೀ ನವ ಶಕ್ತಿ ಪುಣ್ಯಾಶ್ರಮ ಶಕ್ತಿಪೀಠ ಚೌಡಾಪೂರದ ಪೂಜ್ಯ ಶ್ರೀ ಮುರಾಹರಿ ಮಹಾರಾಜರು, ಲಾಡ ಚಿಂಚೋಳಿ ಶ್ರೀ ಸುನೀಲ ಮಹಾರಾಜರು ಹಾಗೂ ಶ್ರೀ ಶಂಕರ ಪೂಜಾರಿ ಸಾನಿಧ್ಯದಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಮುಖಂಡರಾದ ರಮೇಶ ಪೂಜಾರಿ, ಶಿವಾನಂದ ಗಾಡಿ ಸಾಹುಕಾರ, ಬಂಜಾರಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅಪ್ಪು ಬಿ.ರಾಠೋಡ, ನಾಥರಾಮ
ಎಲ್.ರಾಠೋಡ, ರಾಕೇಶ ಟಿ.ರಾಠೋಡ, ಶಂಕರ ದಾಮುಲು ರಾಠೋಡ, ಸುಭಾಷ ಸಿ. ರಾಠೋಡ, ತಾರು ಎಚ್.ಜಾಧವ, ಶ್ರೀಧರ ಡಿ. ರಾಠೋಡ, ವಿನೋದ ಎಂ.ರಾಠೋಡ, ಪ್ರೀತಮ್ ರಾಠೋಡ, ಮೇಘು ಆರ್.ಚವ್ಹಾಣ, ವಿನೋದ ಚವ್ಹಾಣ, ವಿಜಯಕುಮಾರ ಎಂ.ರಾಠೋಡ, ಸುನೀಲ ರಾಠೋಡ, ರಾಜಕುಮಾರ ಪವಾರ, ಉಪನ್ಯಾಸಕ ಸುರೇಶ ಎಸ್.ರಾಠೋಡ, ರಾಜಕುಮಾರ ಚವ್ಹಾಣ, ಕವಿತಾ ರಾಠೋಡ, ಕಸಾಪ ಅಧ್ಯಕ್ಷ ಪ್ರಭಾವತಿ ಮೇತ್ರೆ, ರಾಘವೇಂದ್ರ ರಾಠೋಡ, ಪುನ್ನು ಡಿ. ಪವಾರ, ಕೇಶು ಆರ್.ಜಾಧವ್, ಶಿಕ್ಷಕರಾದ ಲಕ್ಷ್ಮಣ ಎಲ್.ಪವಾರ, ಪ್ರಮೋದ ಎಂ.ಜಾಧವ, ಕೃಷ್ಣಾ ಜಗನು ರಾಠೋಡ, ಸಮಾಜ ಕಲ್ಯಾಣ ಇಲಾಖೆ ಅಶೋಕ ನಾಯಕ ಸೇರಿದಂತೆ ಬಂಜಾರಾ ಸಮುದಾಯದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಭಜನ ಮಂಡಳಿ ಸದಸ್ಯರು, ಹಿರಿಯರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.