ದೇಶದ ಆರ್ಥಿಕತೆ ಶೇ. ೭.೨ ಏರಿಕೆ ನಿರೀಕ್ಷೆ

ಆರ್ಥಿಕ ಸಮೀಕ್ಷೆ ಮಂಡನೆ

ನವದೆಹಲಿ,ಜ. ೨೯- ೨೦೨೬-೨೭ರಲ್ಲಿ ದೇಶದ ಆರ್ಥಿಕತೆ ಶೇಕಡಾ ೬.೮ ರಿಂದ -೭.೨ ರಷ್ಟು ಏರಿಕೆ ನಿರೀಕ್ಷೆ ಇದೆ ಆರ್ಥಿಕ ಸಮೀಕ್ಷೆ ಅಂದಾಜು ಮಾಡಿದೆ

ಆರ್ಥಿಕ ಸ್ಥಿತಿಯ ಕುರಿತಾದ ವರದಿಯನ್ನು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಮತ್ತು ಅವರ ತಂಡ ಸಿದ್ದ ಪಡಿಸಿದೆ ಫಬ್ರವರಿ ೧ ರಂದು ಬಜೆಟ್ ಮಂಡನೆಗೂ ಮುನ್ನ ಈ ವರದಿ ಹೊರಬಿದ್ದಿದೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೨೫-೨೦೨೬ರ ಭಾರತದ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು ಅದರಲ್ಲಿ ಈ ವಿಷಯ ತಿಳಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ೨೦೨೫-೨೦೨೬ರ ಭಾರತದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.

ವಾರ್ಷಿಕ ಆರ್ಥಿಕ ಸಮೀಕ್ಷೆಯ ಪ್ರಕಾರ, ದೇಶೀಯ ಆರ್ಥಿಕತೆಯು ಸ್ಥಿರವಾದ ನೆಲೆಯಲ್ಲಿ ಉಳಿದಿದೆ ಆದರೆ ವ್ಯಾಪಾರ ಪಾಲುದಾರರಲ್ಲಿ ನಿಧಾನಗತಿಯ ಬೆಳವಣಿಗೆ ಮತ್ತು ವ್ಯಾಪಾರಕ್ಕೆ ಸುಂಕ-ಪ್ರೇರಿತ ಅಡಚಣೆಗಳು ರಫ್ತು ಮತ್ತು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ

ಕಳೆದ ವರ್ಷದ ಸಮೀಕ್ಷೆಯ ಶೇ. ೬.೩-೬.೮ರ ಮುನ್ಸೂಚನೆ ಮೀರಿ, ಈ ಹಣಕಾಸು ವರ್ಷದ ಬೆಳವಣಿಗೆ ದರವನ್ನು ಸರ್ಕಾರ ಶೇ. ೭.೪ಕ್ಕೆ ದಾಖಲಿಸಿದೆ ಎಂದಿದ್ದಾರೆ.

ವೇಗದ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರದ ಹೊರತಾಗಿಯೂ, ೨೦೨೫ ರಲ್ಲಿ ದಾಖಲೆಯ ಹೊರಹರಿವಿನ ನಂತರ ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿದ್ದಾರೆ. ಮೌಲ್ಯಮಾಪನಗಳು, ಕಡಿಮೆಯಾದ ಗಳಿಕೆಗಳು ಮತ್ತು ಭೌಗೋಳಿಕ ರಾಜಕೀಯ ಕಳವಳಕ್ಕೆ ಕಾರಣವಾಗಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲವು ಭಾರತೀಯ ಸರಕುಗಳ ಮೇಲೆ ಶೇ.೫೦ ರಷ್ಟು ಸುಂಕ ವಿಧಿಸಿದ ನಡುವೆ ಉತ್ತಮ ಆರ್ಥಿಕ ಬೆಳವಣಿಗೆ ದಾಖಲಿಸುವ ಉದ್ದೇಶ ಹೊಂದಿದೆ

ಭಾರತ ಮತ್ತು ಯುರೋಪಿಯನ್ ಒಕ್ಕೂಟವು ದ್ವಿಮುಖ ವ್ಯಾಪಾರವನ್ನು ಹೆಚ್ಚಿಸುವ ಮತ್ತು ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಹೆಚ್ಚಿನ ಸರಕುಗಳ ಮೇಲಿನ ಸುಂಕವನ್ನು ಕಡಿತಗೊಳಿಸುವ ಒಪ್ಪಂದಕ್ಕೆ ಬಂದಿರುವುದು ಕೂಡ ಪೂತವಾಗಿದೆ.