ಎಲ್ಲಕ್ಕಿಂತ ದೇಶ ದೊಡ್ಡದು: ಶಿವನಗೌಡ ಪಾಟೀಲ ಹಂಗರಗಿ

ಕಲಬುರ್ಗಿ: ಅ.15:ಎಲ್ಲಕ್ಕಿಂತ ದೇಶ ದೊಡ್ಡದು, ಸ್ವಾತಂತ್ರ್ಯ ಹೋರಾಟಗಾರರ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು ಎಂದು ಶ್ರೀ ಶಿವನಗೌಡ ಪಾಟೀಲ ಹಂಗರಗಿ ಹೇಳಿದರು. ನಗರದ ಷಣ್ಮುಖ ಶಿವಯೋಗಿ ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಭಾಗವಹಿಸಿ ಮಾತನಾಡಿದ ಅವರು ಈ ಸ್ವಾತಂತ್ರ್ಯ ಹಿಂದೆ ಅದೆಷ್ಟೋ ಸ್ವಾತಂತ್ರ್ಯ ವೀರರ ತ್ಯಾಗ ಮತ್ತು ಬಲಿದಾನವಿದೆ ಎಂಬುದನ್ನು ಸ್ಮರಿಸುವ ದಿನವೇ ಈ ಸ್ವಾತಂತ್ರ್ಯ ದಿನಾಚರಣೆ. ಏಕೆಂದರೆ, ‘ಯಾವ ದೇಶ ಆ ದೇಶದ ಚರಿತ್ರೆಯನ್ನುನಮ್ಮ ಪೂರ್ವಿಕರು ದೇಶಕ್ಕಾಗಿ ರಕ್ತ ತೈಲವನ್ನೆರೆದು ಸ್ವಾತಂತ್ರ್ಯದ
ಜ್ಯೋತಿಯನ್ನು ಹೊತ್ತಿಸದೇ ಹೋಗಿದ್ದರೆ ನಮ್ಮ ದೇಶದ ಇಂದಿನ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟವಾಗುತ್ತಿತ್ತು.ಇದನ್ನು ಮೊದಲೇ ಅರಿತಿದ್ದ ದೇಶದ ಕೆಚ್ಚೆದೆಯ ಹೋರಾಟಗಾರರು ಈ ನೆಲದಲ್ಲಿ ತಮ್ಮ ಶಕ್ತಿ ಸಾಮಥ್ರ್ಯವನ್ನು ಮೀರಿ ಇಂದಿನಂತೆ ಯಾವುದೇ ಜಾತಿ-ಮತ, ಪಂಗಡಗಳ ಭೇದವೆಣಿಸದೇ, ಅಧಿಕಾರದ ಲಾಲಸೆಗೆ ದುಷ್ಟರೊಂದಿಗೆ ಕೈಜೋಡಿಸದೇ ‘ಎಲ್ಲಕ್ಕಿಂತ ದೇಶ ದೊಡ್ಡದು’ ಎಂಬ ಐಕ್ಯತೆಯ ಮಂತ್ರದೊಂದಿಗೆ ಒಕ್ಕೊರಲಿನಿಂದ ಹೋರಾಡುವಾಗ ಅವರು ಬ್ರಿಟಿಷರಿಂದ ಅನುಭವಿಸಿದ ಚಿತ್ರಹಿಂಸೆ ಅಷ್ಟಿಷ್ಟಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ವಿಶ್ವಾಸ್ ಶಿಂದೆ, ಡಾ. ಸತೀಶ್ ಕುಮಾರ್ ಪಾಟೀಲ್, ಡಾ.ಆನಂದ ರೆಡ್ಡಿ ಪಟ್ಟಪಳ್ಳಿ, ಪೆÇ್ರಫೆಸರ್ ಶಿವಸಾಯಿ ಮಮದಾಪುರ, ಜಿತೇಂದ್ರ ಪಂಚಾಳ್, ಭಾಗಣ್ಣ ಸರಡಗಿ, ಅನಿಲ್ ರಾಠೋಡ್, ಸುಶಾಂತ್ ಪಾಟೀಲ್ ಹಂಗರಗಿ, ನಜೀರ್ ಅಹಮದ್, ವಿಶ್ವನಾಥ್ ರೆಡ್ಡಿ, ಅನಿಲ್ ಕುಮಾರ್ ಸಕ್ರಿ, ಮಲ್ಲಾ ರೆಡ್ಡಿ, ಸಾಹೇಬ್ ಗೌಡ, ಸಿದ್ದಣ್ಣ ಹತಗುಂದಿ, ಉಪನ್ಯಾಸಕಿಯರಾದ ವೈಶಾಲಿ, ಗೀತಾ, ಕಾವೇರಿ ಸಿಬ್ಬಂದಿಗಳಾದ ಶಿವಗಂಗಮ್ಮ, ಅನಂತ್ ಕುಮಾರ್ ಸೇರಿ ಮುಂತಾದವರು ಹಾಜರಿದ್ದರು.