ಭಾರತದ ಇತಿಹಾಸ ರಚನೆಗೆ ಬಹಮನಿ ಸಾಮ್ರಾಜ್ಯದ ಸ್ಮಾರಕಗಳ ಕೊಡುಗೆ ಅಪಾರ: ಮುಡುಬಿ ಗುಂಡೇರಾವ

ಕಲಬುರಗಿ:ಡಿ.22: ಭಾರತದ ಇತಿಹಾಸ ರಚನೆಗೆ ಬಹುಮನಿ ಸಾಮ್ರಜ್ಯದ ಸ್ಮಾರಕಗಳ ಕೊಡುಗೆ ಅಪಾರವಾಗಿದೆ ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು.
ನಗರದ ಶೇಖರೋಜ ಬಡಾವಣೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಆಯೋಜಿಸಿದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ -44 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಧ್ಯಯುಗದ ಇತಿಹಾಸ ಸಾರುವ ಕಲಬುರಗಿ ನಗರದಲ್ಲಿರುವ ಬಹುಮನಿಯರ ಕೋಟೆ, ಶೇಖರೋಜ ದರ್ಗಾ, ಮಿನಾರಗಳು, ಗುಂಬಜಗಳು, ಸಾತ್ ಗುಂಬಜಗಳು ಭಾರತದ ಇತಿಹಾಸದ ಪುಟ ತೆರೆಯುತ್ತವೆ, ಗುಲಬುರ್ಗಾ ಗುಲ್ -ಹೂ, ಬರ್ಗ- ಎಲೆ ಎಲೆ ಹೂಗಳಿಂದ ಕೂಡಿದ ಊರೇ ಕಲಬುರಗಿ, ಪ್ರಾಚೀನ ಕಾಲದಲ್ಲಿ ಇದಕ್ಕೆ ಕಲಂಬುರಗಿ ಎಂದು ಕರೆಯಲಾಗುತ್ತಿತ್ತು. ಕಲಬುರಗಿ ಕೋಟೆ, ಜಾಮೀ ಮಸೀದಿ, ತೋಫುಗಳು ಸೇರಿದಂತೆ ಹಲವಾರು ಸ್ಮಾರಕಗಳು ಕಲಬುರಗಿ ನೆಲದ ಸಾಧನೆ, ಸಾಮರಸ್ಯತೆಯನ್ನು ಸಾರುತ್ತದೆ ಎಂದರು.
ಮೌರ್ಯರು, ಶಾತವಾಹನರು, ಯಾದವರು, ಬಾದಾಮಿ ಚಾಲೂಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು, ಕಲಚೂರರು, ಬಹಮನಿಯರು ಮತ್ತು ವಿಜಯನಗರ ಸಾಮ್ರಾಜ್ಯದ ದೊರೆಗಳು ಕಲಬುರಗಿಯನ್ನು ಆಳಿಕೆ ಮಾಡುವ ಮೂಲಕ ಈ ನೆಲದಲ್ಲಿ ಕಲೆ, ಸಾಹಿತ್ಯ, ಸಂಗೀತ ಮುಂತಾದ ಕ್ಷೇತ್ರಗಳನ್ನು ಸಮೃದ್ಧಿಗೊಳಿಸಿದ್ದಾರೆ, ರಾಷ್ಟ್ರಕೂಟರು ಮಾನ್ಯಖೇಟವನ್ನು, ಬಹಮನಿಯರು ಕಲಬುರಗಿಯನ್ನು ರಾಜಧಾನಿಯನ್ನಾಗಿ ಆಳ್ವಿಕೆ ಮಾಡಿದ್ದಾರೆ, ಕನ್ನಡ ನಾಡಿನ ಸಂಸ್ಕøತಿಯನ್ನು ಶ್ರೀಮಂತಗೊಳಿಸಿದ್ದಾರೆ. ಹೀರಾಪೂರದಲ್ಲಿ ಬಿಜಾಪೂರ ಆದಿಲ್ ಶಹ ಮನೆತನದ ಚಾಂದಬೀಬಿ ನಿರ್ಮಿಸಿದ ಹೀರಾಬಿಬಿ ಮಸೀದಿಯು ಇಂದಿಗೂ ಇತಿಹಾಸವನ್ನು ಸಾರುತ್ತಿದೆ ಅದಕ್ಕಾಗಿ ಇದಕ್ಕೆ ಹೀರಾಪೂರ ಎಂದು ಕರೆಯಲಾಗುತ್ತಿದೆ. ಹಸನಗಂಗು ರಾಜನು ಬಹಮನಿ ಸಾಮ್ರಾಜ್ಯವನ್ನು ಕಲಬುರಗಿಯಲ್ಲಿಯೇ ಸ್ಥಾಪಿಸಿದನು. ಕನ್ನಡ ನಾಡು, ನುಡಿ ಸಂಸ್ಕøತಿಗೆ ಕಲಬುರಗಿ ಪರಿಸರದವು ಶೈವ, ವೈಷ್ಣವ, ಜೈನ, ಬೌದ್ದ ಧಮೀಯರು ಬಾಳಿ ಬೆಳಗಿದ ಸಾಮರಸ್ಯದ ನೆಲವೀಡಾಗಿದೆ. ಬಳಗದ ಅಧ್ಯಕ್ಷ ಎಚ್ ಬಿ ಪಾಟೀಲ ಮಾತನಾಡಿ ಕಳೆದ ಒಂದುವರೆ ವರ್ಷದಿಂದ ನಮ್ಮ ಬಳಗದವತಿಯಿಂದ ಐತಿಹಾಸಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಇತಿಹಾಸ ಅರಿವು ಮೂಡಿಸಲಾಗುತ್ತಿದೆ, ನಮ್ಮ ಸ್ಮಾರಕಗಳು ನಮ್ಮ ಹೆಮ್ಮೆ ಎಂಬ ಅಭಿಮಾನ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.

ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಹುಸೇನ ಜಮಾದಾರ, ಮಹಮ್ಮದ, ಜಹೀದ, ಫಜಲ, ಯಾಯಾ, ಹಮಾನ ಮುಂತಾದವರಿದ್ದರು.

ಗುಲಬುರ್ಗಾ ಗುಲ್ -ಹೂ, ಬರ್ಗ- ಎಲೆ ಎಲೆ ಹೂಗಳಿಂದ ಕೂಡಿದ ಊರೇ ಕಲಬುರಗಿ, ಪ್ರಾಚೀನ ಕಾಲದಲ್ಲಿ ಇದಕ್ಕೆ ಕಲಂಬುರಗಿ ಎಂದು ಕರೆಯಲಾಗುತ್ತಿತ್ತು. ಹುಣಸಿ ಹಡಗಿಲ್ ಶಾಸನ ಪ್ರಕಾರ ಕಲಂಬುರಗಿ ಎಂಬದು ಮೂಲ ಹೆಸರಾಗಿದೆ. ಭಾರತ ದೇಶಕ್ಕೆ ಮತ್ತು ಕನ್ನಡ ನಾಡಿಗೆ ಕಲಬುರಗಿ ಜಿಲ್ಲೆಯ ಇತಿಹಾಸ ಕೊಡುಗೆ ಅಪಾರವಾಗಿದೆ,
ಕಲಬುರಗಿ ನೆಲದಲ್ಲಿಯೇ ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಬಹಮನಿ ಅರಸು ಮನೆತನಗಳು ರಾಜಧಾನಿಯನ್ನಾಗಿ ಮಾಡಿಕೊಂಡು ದಕ್ಷ ಆಡಳಿತ ಮಾಡಿ ಇತಿಹಾಸದಲ್ಲಿ ದಾಖಲೆಯಾಗಿದ್ದಾರೆ, ಭವ್ಯ ಭಾರತದ ಇತಿಹಾಸಕ್ಕೆ ಅಮೋಘ ಕೊಡುಗೆ ನೀಡಿದೆ, ಸ್ಮಾರಗಳ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು.
ಮುಡುಬಿ ಗುಂಡೇರಾವ
ಸಂಶೋಧಕ ಸಾಹಿತಿಗಳು