ಕಲಬುರಗಿ:ಅ.4:ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದು ಸಾರಿ ಬ್ರಿಟಿಷರ ವಿರುದ್ಧ ಹೋರಾಡಿದ ಬಾಲ ಗಂಗಾಧರತಿಲಕರುಪ್ರಖರರಾಷ್ಟ್ರವಾದಿ, ಅಧ್ಯಾತ್ಮವಾದಿ, ಜನನಾಯಕ, ಆಧುನಿಕ ಭಾರತದರೂಪುರೇಷೆಯತಯಾರಕ, ಲೇಖಕರಾಗಿ ಬಹುಮುಖ ವ್ಯಕಿತ್ವವನ್ನು ಹೊಂದಿದ್ದಅಪ್ರತಿಮದೇಶಭಕ್ತರೆಂದುಉಪನ್ಯಾಸಕಎಚ್.ಬಿ.ಪಾಟೀಲ ಹೇಳಿದರು.
ನಗರದಆಳಂದ ರಸ್ತೆಯಜರ.ಆರ್ ನಗರದಲ್ಲಿರುವ ‘ಸಕ್ಸಸ್‍ಕಂಪ್ಯೂಟರತರಬೇತಿಕೇಂದ್ರ’ದಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಜರುಗಿದ’ಬಾಲ ಗಂಗಾಧರತಿಲಕ್’ರಸ್ಮರಣೋತ್ಸವದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರುಮಾತನಾಡುತ್ತಿದ್ದರು.
ತಿಲಕರು’ಕೇಸರಿ’, ‘ಮರಾಠಾ’ ಪತ್ರಿಕೆಗಳ ಮೂಲಕ ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದರು. ಜನತೆಯಲ್ಲಿಒಗ್ಗಟ್ಟುಉಂಟುಮಾಡಲು ಸಾರ್ವಜನಿಕವಾಗಿಗಣೇಶ, ಶಿವಾಜಿ ಜಯಂತಿಗಳನ್ನು ಆಚರಿಸಲು ಪ್ರಾರಂಭಿಸಿದರು.ಅವರ ಹೋರಾಟದಪರಿಶ್ರಮ ವ್ಯರ್ಥವಾಗದಂತೆ, ಸ್ವಾತಂತ್ರ್ಯದ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆಎಂದರು.
ಕಾರ್ಯಕ್ರಮದಲ್ಲಿಪ್ರಮುಖರಾದಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಓಂಕಾರ ವಠಾರ, ಭಾಗ್ಯಶ್ರೀ ಕಾರಬಾರಿ ಹಾಗೂ ವಿದ್ಯಾರ್ಥಿಗಳಿದ್ದರು.























