ಪ್ರತಿಯೊಬ್ಬರ ನೆಮ್ಮದಿಯ ಬದುಕಿಗೆ ಸಂವಿಧಾನವೇ ಕಾರಣ

filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0009,0.0000; brp_del_sen:0.3000,0.0000; motionR: null; delta:null; bokeh:0; module: photo;hw-remosaic: false;touch: (0.21404803, 0.23714274);sceneMode: 2621440;cct_value: 0;AI_Scene: (11, 2);aec_lux: 97.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 41;

ಮಧುಗಿರಿ, ನ. ೨೯- ಸಂವಿಧಾನ ಸಮರ್ಪಣಾ ದಿನವನ್ನು ಒಂದು ಪುಣ್ಯದ ದಿನವೆಂದು ಆಚರಣೆ ಮಾಡುತಿದ್ದೇವೆ ಎಂದು ಪ್ರಗತಿಪರ ಚಿಂತಕ ಡಾ ಕೆ ನರಸಿಂಹಪ್ಪ ತಿಳಿಸಿದರು.


ತಾಲ್ಲೂಕಿನ ಕೊಡಿಗೇನಹಳ್ಳಿ ಬಸ್ ನಿಲ್ದಾಣದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಬೋಧಿಸಿ ಅವರು ಮಾತನಾಡಿದರು.


ದೇಶದಲ್ಲಿ ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಲು ಇದೇ ಸಂವಿಧಾನ ಕಾರಣ.


ಯಾವ ದೇಶದಲ್ಲಿ ಸಂವಿಧಾನ ಇರುವುದಿಲ್ಲ. ಅಲ್ಲಿ ನಾಗಕರಿಕ ವ್ಯವಸ್ಥೆ ಮೂಲಭೂತ ಸೌಲಭ್ಯಗಳು ಇರುವುದಿಲ್ಲ. ಭಾರತ ಬಿಟ್ಟು ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದಿಲ್ಲ ಅಲ್ಲಿನ ಜನರ ಜೀವನದ ಸ್ಥಿತಿಗತಿ ಶೋಚನಿಯವಾಗಿರುತ್ತದೆ. ನಮ್ಮ ದೇಶದಲ್ಲಿ ಸ್ವಾಭಿಮಾನದಿಂದ ಬದುಕಲು ಎಲ್ಲ ರೀತಿಯ ರಕ್ಷಣೆಯನ್ನು ನಮ್ಮ ಸಂವಿಧಾನ ನೀಡಿದೆ ಎಂದರು.


ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಹಿನ್ನೆಲೆಯಲ್ಲಿ ಈ ಬಾರಿ ಗ್ರಾಮದ ಎಲ್ಲ ಶಾಲೆಯ ಮಕ್ಕಳು ಒಟ್ಟಾಗಿ ಡಾ ಅಂಬೇಡ್ಕರ್ ಪುತ್ಥಳಿ ಮುಂಭಾಗ ಸೇರಿಸಿ ಸಂವಿಧಾನ ಸಮರ್ಪಣಾ ದಿನವನ್ನು ಆಚರಣೆ ಮಾಡಲಾಗಿದೆ. ಕೇವಲಸಂವಿಧಾನ ಪೀಠಿಕೆ ಒಂದು ದಿನ ಓದಿದರೆ ಸಾಲದು, ಅದರ ಒಳಗಿರುವ ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನಾತ್ಮಕ ಸಂಸ್ಥೆಗಳನ್ನು ದುಬರ್ಳಕೆ ಮಾಡಿಕೊಂಡು ಸಂವಿಧಾನ ವಿರೋಧಿಸುವ ಕೊಳಕು ಮನಸ್ಸುಗಳನ್ನು ತೊಳೆಯವು ಸಾಮರ್ಥ್ಯವನ್ನು ಬೆಳಸಿಕೊಳ್ಳಬೇಕು ಎಂದರು.


ದೇಶದವೇ ಹಬ್ಬದ ರೀತಿಯಲ್ಲಿ ಆಚರಿಸುವ ಈ ಕಾರ್ಯಕ್ರಮಕ್ಕೆ ಬಹುತೇಕ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಾಗದಿರುವುದು ಬೇಸರದ ಸಂಗತಿ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗುವುದು ಎಂದರು.


ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ವಿ ವೆಂಕಟೇಶ್, ಮುಖಂಡರಾದ ಬಾಲಾಜಿ, ಪರ್ವೀಜ್ ಅಹಮದ್, ರಾಮದಾಸ್, ಏಜೆಂಟ್ ಕೃಷ್ಣ, ಮೈಲಾರಪ್ಪ, ಮನೋಹರ ಮತ್ತಿತರರು ಉಪಸ್ಥಿತರಿದ್ದರು.