ರೈತರ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಹಮ್ಮಿಕೊಂಡ ಹೋರಾಟದ ಬಿತ್ತಿ ಪತ್ರ ಬಿಡುಗಡೆ : ಸೊನ್ನದ ಶ್ರೀಗಳು

ಜೇವರ್ಗಿ:ಫೆ.೧: ಇದೆ ಪೆ.೯ ರಂದು ಆಲಮಟ್ಟಿ ಜಲಾಶಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಹಮ್ಮಿಕೊಂಡ ರೈತರ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ರೈತರ ನಡೆ ಆಲಮಟ್ಟಿ ಜಲಾಶಯದ ಕಡೆ ಎನ್ನುವ ಭಿತ್ತಿಪತ್ರವನ್ನು ಸೊನ್ನದ ವಿರಕ್ತ ಮಠದ ಡಾ|| ಶಿವಾನಂದ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.

ನಮ್ಮ ಉತ್ತರ ಕರ್ನಾಟಕದ ಜೀವನಾಡಿಯಾದ ನಾರಾಯಣಪೂರ ಜಲಾಶಯ ಮತ್ತು ಆಲಮಟ್ಟಿ ಜಲಯಾಶ ಕೃಷ್ಣಾ ಮೇಲ್ದಂಡೆ ಹಂತ ೩ ಅನುಷ್ಠಾನ ೧೪ ಅಡಿ ಗೇಟ ಎತ್ತರದ ಸಲುವಾಗಿ, ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೆ ೧೪ ಅಡಿ ಗೇಟ ಎತ್ತರದ ಕಾಮಗಾರಿ ಆಗುವದರಿಂದ ಈ ಭಾಗದ ಸುಮಾರು ೫ಲಕ್ಷಕ್ಕೂ ಅಧೀಕ ರೈತರಿಗೆ ನಿರಾವರಿ ಸೌಲಭ್ಯ ಕಲ್ಪಿಸಿಕೊಟ್ಟಂತೆ ಆಗುತ್ತದೆ. ಈಗಾಗಲೇ ಮಳೆಗಾಲವು ಸಕಾಲಕ್ಕೆ ಬಾರದೆ ಕೈಕೊಡುತ್ತಿದೆ, ಅಲ್ಲದೆ ಅತಿಹೆಚ್ಚು ಮಳೆಯಾಗಿ ಬೆಳೆಗಳು ಹಾನಿಯಾಗುತ್ತಿವೆ ಹೀಗೆ ಒಂದಿಲ್ಲ ಒಂದು ಪ್ರಕರಣ ನಡೆಯುತ್ತಿರುವದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಒಂದು ಆಲಮಟ್ಟಿ ಜಲಾಯಶದ ೧೪ಅಡಿಗೇಟ ಎತ್ತರದ ಕಾಮಗಾರಿ ಪೂರ್ಣವಾದರೆ ಈ ಭಾಗದ ರೈತರಿಗೆ ಸಕಾಲಕ್ಕೆ ನೀರು ಬಳಸಿಕೊಂಡು ಜಮೀನಿನಲ್ಲಿ ಬೆಳೆ ಬೆಳಯಲು ಅನುಕೂಲವಾಗುತ್ತದೆ. ರೈತ ನಿದ್ದರೆ ದೇಶ ಎಂದು ರೈತರ ಹೆಸರಿನ ಮೆಲೆ ಪ್ರಮಾಣ ವಚನ ಸ್ವಿಕರಿಸುವ ಶಾಸಕರು, ಮಂತ್ರಿಗಳು ರೈತರ ಬಗ್ಗೆ ತೀವೃವಾಗಿ ಗಮನಹರಿಸಿ, ರೈತರ ಹಿತದೃಷ್ಠಿಯಿಂದ ಈ ಒಂದು ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕೆಂದು ಮತ್ತು ಇದೆ ಫೆ.೯ ರಂದು ನಡೆಯುವ ಹೋರಾಟದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ರೈತರು, ಪದಾಧಿಕಾರಿಗಳು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಕಾರ್ಯಾಧ್ಯಕ್ಷರಾದ ಸಂತೋಷಗೌಡ ಜಿ ಮಾಲಿ ಪಾಟೀಲ ಹಂಗರಗಾ ಬಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಂಚಾಲಕರಾದ ರಾಜು ನಾಯಕ, ಜಿಲ್ಲಾ ಉಪಾಧ್ಯಕ್ಷರಾದ ರಮೇಶ ಹವಲ್ದಾರ ಹಾಲಗಡ್ಲಾ, ಜಿಲ್ಲಾ ಉಪಾಧ್ಯಕ್ಷರು ಮಲ್ಲಿನಾಥ ಬಿರಾದಾರ, , ಜಿಲ್ಲಾ ಸಹ ಸಂಚಾಲಕರಾದ ವಿಶ್ವನಾಥ ದೊರೆ, ಯಡ್ರಾಮಿ ತಾಲೂಕ ಅಧ್ಯಕ್ಷರು ಮಾಳು ಕಾರಗೊಂಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.