ಕೆಕೆಆರ್ಟಿಸಿ ಅದ್ಯಕ್ಷ ಅರುಣಕುಮಾರ ಪಾಟೀಲ ಅಧ್ಯಕ್ಷತೆಯಲ್ಲಿ ನಿರ್ದೇಶಕರ ಮಂಡಳಿ ಸಭೆ ಯಶಸ್ವಿ

ಅಫಜಲಪುರ ;ಜ.7: ಬೆಂಗಳೂರಿನ ಕೆಕೆ ಆರ್‍ಟಿಸಿ ಕೇಂದ್ರ ಕಚೇರಿಯಲ್ಲಿ ಸರ್ಕಾರದ ಸಾರಿಗೆ ಕಾರ್ಯದರ್ಶಿಗಳು ಹಾಗೂ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಉಪಸ್ಥಿತಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 76ನೇ ಮಂಡಳಿ ನಿರ್ದೇಶಕರ ಸಭೆಯನ್ನು ಕೆಕೆಆರ್ಟಿಸಿ ಅದ್ಯಕ್ಷ ಅರುಣಕುಮಾರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು.

ಸಭೆಯಲ್ಲಿ ನಿಗಮದ ಸಮಗ್ರ ಅಭಿವೃದ್ಧಿ, ಪ್ರಯಾಣಿಕರ ಮೂಲಸೌಲಭ್ಯ ಹಾಗೂ ಸಿಬ್ಬಂದಿ-ಪ್ರಯಾಣಿಕರ ಹಿತದೃಷ್ಟಿಯಿಂದ ಹೊಸ ಬಸ್‍ಗಳ ಖರೀದಿ, ವಿವಿಧ ಕಾಮಗಾರಿ ಕಾರ್ಯಗಳು, ವೈದ್ಯಾಧಿಕಾರಿಗಳ ಹಾಗೂ ಗೋಲ್ಡ್-ಸಿಲ್ವರ್ ಮೆಡಲ್ ಪಡೆದ ಚಾಲಕರ ಮಾಸಿಕ ಗೌರವಧನ ಹೆಚ್ಚಳ, ನೇಮಕಾತಿ-ವರ್ಗಾವಣೆ ನಿಯಮಗಳು, ಅನುಕಂಪ ಆಧಾರಿತ ನೇಮಕಾತಿ, ಸಿಬ್ಬಂದಿ ಮಂಜೂರಾತಿ, ಟಿಕೆಟ್ ದರ ಪರಿಷ್ಕರಣೆ ಮತ್ತು 2025-26 ಹಾಗೂ 2026-27 ಸಾಲಿನ ಅಂದಾಜು ಆಯವ್ಯಯದ ಕುರಿತು ಹಾಗೂ ಇನ್ನಿತರೆ ಮಹತ್ವದ ವಿಷಯಗಳ ಮೇಲೂ ಚರ್ಚಿಸಲಾಯಿತು.

ಎಲ್ಲಾ ವಿಷಯಗಳಲ್ಲೂ ಶೀಘ್ರ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಇಲಾಖಾ ಮುಖ್ಯಸ್ಥರುಗಳು ಹಾಜರಿದ್ದರು. ಕಲ್ಯಾಣ ಕರ್ನಾಟಕ ಪ್ರದೇಶದ ಸಾರಿಗೆ ಸೇವೆಗಳನ್ನು ಇನ್ನಷ್ಟು ಸದೃಢ, ಸುರಕ್ಷಿತ ಮತ್ತು ಜನಪರವಾಗಿಸಲು ನಿಗಮ ಬದ್ಧವಾಗಿದೆ.

ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ಸಾರಿಗೆ ಇಲಾಖೆ ಎನ್. ವಿ. ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರು ಅಕ್ರಂ ಪಾಷಾ, ಶಿವಕುಮಾರ ಕೆ. ಬಿ., ಶ್ರೀಮತಿ ಸುಶೀಲಾ ಬಿ., ಶ್ರೀಮತಿ ಪ್ರಿಯಾಂಗ ಎಂ. ಹಾಗೂ ಕಕರಸಾ ನಿಗಮದ ಇಲಾಖಾ ಮುಖ್ಯಸ್ಥರು ಉಪಸ್ಥಿತರಿದ್ದರು.