
ಸಂಜೆವಾಣಿ ವಾರ್ತೆ,
ವಿಜಯಪುರ, ಫೆ. ೧೭ : ಸಾವಿನಲ್ಲಿಯೂ ಸಾರ್ಥಕತೆ ಮೆರೆದ ದಿ.ಬಲರಾಮ ಬಾಗಲಕೋಟ ಅವರಿಂದ ಪ್ರೇರಣೆ ಪಡೆದು ಈ ವಿಷಯದ ಬಗ್ಗೆ ಅತ್ಯಂತ ಭಾವುಕರಾದ ಸಚಿವ ಡಾ. ಎಂ.ಬಿ. ಪಾಟೀಲ ಅವರು ಸ್ವತ: ಅಂಗಾAಗ ದಾನ ಮಾಡುವ ಘೋಷಣೆ ಮಾಡುವ ಮೂಲಕ ಬಸವ ನಾಡಿನಲ್ಲಿ ಅಂಗಾAಗ ದಾನದ ಅಭಿಯಾನ ಆರಂಭಕ್ಕೆ ಹೊಸ ಸ್ವರೂಪ ನೀಡಿದ್ದಾರೆ.
ಬಲರಾಮ ಬಾಗಲಕೋಟ ಅವರ ಕುಟುಂಬಕ್ಕೆ ಗೌರವ ಸಮರ್ಪಣೆ ನೆರವೇರಿಸಿದ ನಂತರ ಈ ಕುರಿತು ಸ್ಥಳದಲ್ಲಿಯೇ ಘೋಷಣೆ ಮಾಡಿದ ಸಚಿವ ಎಂ.ಬಿ. ಪಾಟೀಲ, ದಿ.ಬಲರಾಮ ಅವರ ತ್ಯಾಗ ಅನುಪಮ, ಅವರಿಂದಲೇ ಬಸವ ನಾಡಿನಲ್ಲಿ ಅಂಗಾAಗ ದಾನದ ಅಭಿಯಾನ ಆರಂಭವಾಗಿದೆ. ಇದಕ್ಕೆ ವಿಜಯಪುರ ಜಿಲ್ಲೆಯಿಂದ ನಾವೇ ನೇತೃತ್ವ ವಹಿಸಿಕೊಳ್ಳಲಿದ್ದು, ನಾನೇ ಸ್ವತ: ಪ್ರಥಮ ಹೆಜ್ಜೆಯಾಗಿ ಮಿಷನ್ ಬಲರಾಮ್ ಎನ್ನುವ ಅಭಿಯಾನವನ್ನೇ ನಡೆಸಿ ಇದಕ್ಕೆ ನಾನೇ ಪ್ರಥಮವಾಗಿ ಅಂಗಾAಗ ದಾನದ ವಾಗ್ದಾನ ಮಾಡಿದರು.
ಅಂಗಾAಗ ದಾನ ಎಂಬುದು ಒಂದು ಆಂದೋಲನವಾಗಬೇಕು. ಜೀವ ಹೋದ ಮೇಲೆಯೂ ನಾವು ಬದುಕಿದ್ದೇವೆ. ಇನ್ನೊಬ್ಬರ ಜೀವಕ್ಕೆ ಆಸರೆ ಕೊಟ್ಟಿದ್ದೇವೆ ಎಂಬ ಸಂದೇಶ ಬಲರಾಮ ಬಾಗಲಕೋಟ ರವಾನಿಸಿದ್ದಾರೆ. ಇದೊಂದು ಮಾನವೀಯತೆಯ ದೊಡ್ಡ ಸಂದೇಶವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಅಂಗಾAಗ ದಾನದ ಮಹತ್ವ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಯಬೇಕಿದೆ.
ಅಂಗಾAಗ ದಾನ ಒಂದು ಪವಿತ್ರ ಕಾರ್ಯ, ಅಭಿಯಾನ ಆಗಿ ಇನ್ನೂ ಕಾರ್ಯಗತವಾಗಿಲ್ಲ. ಈ ಬಾಗಲಕೋಟ ಕುಟುಂಬದ ಸೇವಾ ಹೆಜ್ಜೆಯಿಂದ, ತ್ಯಾಗದಿಂದ ಈ ಅಭಿಯಾನ ಬಸವನಾಡಿನಿಂದ ಆರಂಭವಾಗಲಿ, ಆಸ್ಟ್ರೇಲಿಯಾ, ರಷ್ಯಾ, ಸ್ಪೇನ್, ಬೆಲ್ಜಿಯಂ, ಸಿಂಗಾಪೂರ, ಫ್ರಾನ್ಸ್, ಸಿಪ್ರಸ್, ಫಿನ್‌ಲ್ಯಾಂಡ್, ಪೋಲೆಂಡ್, ಪೋರ್ಚುಗಲ್, ಸ್ವೀಡನ್‌ನಲ್ಲಿ ಅಂಗಾAಗ ದಾನ ಮಹತ್ವ ಪಡೆದಿದ್ದು, ಈ ತೆರನಾದ ನೀತಿಗಳು ನಮ್ಮ ದೇಶದಲ್ಲಿಯೂ ಜಾರಿಯಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿ ನಡೆಯುತ್ತದೆ ಎಂದರು.
ಪ್ರಧಾನಮAತ್ರಿಗಳಿಗೆ ಪತ್ರ:
ಕೇಂದ್ರ ಕಾನೂನು, ಕೇಂದ್ರ ಆರೋಗ್ಯ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಅಂಗಾAಗ ದಾನಕ್ಕೆ ಸಂಬAಧಿಸಿದAತೆ ಸ್ಪಷ್ಟವಾದ ನೀತಿ ಅಗತ್ಯವಾಗಿದ್ದು, ಎರಡು ಸರ್ಕಾರಗಳು ಸಮನ್ವಯ ಸಾಧಿಸಿ ಅದರಲ್ಲೂ ಪ್ರಧಾನಮಂತ್ರಿಗಳು ಈ ವಿಷಯದಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿದರೆ ಕೋಟ್ಯಂತರ ಜೀವಗಳಿಗೆ ಆಸರೆಯಾಗಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಘೋಷಿಸಿದರು.
ದಿ.ಬಲರಾಮ ಬಾಗಲಕೋಟ ಅವರ ತ್ಯಾಗ ಅನನ್ಯ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಲರಾಮ ಅವರ ಕುಟುಂಬದಿAದ ಈ ಒಂದು ಪ್ರೇರಣೆ ದೊಡ್ಡದು, ಸಂಘ-ಸAಸ್ಥೆಗಳು ಈ ನಿಟ್ಟಿನಲ್ಲಿ ಕೈ ಜೋಡಬೇಕು.
ವಿಮಾನ ನಿಲ್ದಾಣದ ಸೌಲಭ್ಯವಿದ್ದರೆ ಶ್ವಾಸಕೋಶ, ಹೃದಯವನ್ನು ಸಹ ರವಾನೆ ಮಾಡಬಹುದಿತ್ತು, ಎರಡು ಕಾರ್ನಿಯಾ, ಎರಡು ಕಿಡ್ನಿ, ಬಿಎಲ್‌ಡಿಇ ವಿವಿ ಸಮ ಕುಲಪತಿ ಡಾ.ಅರುಣ ಇನಾಮದಾರ ಮಾತನಾಡಿ, ಅಂಗಾAಗ ದಾನ ಎಂಬುದು ಜನಾಂದೋಲನದ ರೂಪ ಪಡೆಯಬೇಕಿದೆ. ಅನೇಕ ದೇಶಗಳಲ್ಲಿ ಅಂಗಾAಗ ದಾನದ ಬಗ್ಗೆ ಸ್ಪಷ್ಟವಾದ ಮಹತ್ವ ಹಾಗೂ ನೀತಿ ಇದೆ. ಈ ನಿಟ್ಟಿನಲ್ಲಿ ಈ ತೆರನಾದ ನೀತಿಗಳು ರೂಪುಗೊಂಡರೆ ಕೋಟ್ಯಂತರ ಜೀವಿಗಳಿಗೆ ನೆರವಾಗಬಹುದು ಎಂದರು.


























