
ಸಂಜೆವಾಣಿ ವಾರ್ತೆ,
ವಿಜಯಪುರ, ಫೆ. ೧೬:ಪ್ರಶಸ್ತಿ ಪುರಸ್ಕಾರಗಳು ಸುಮ್ಮನೆ ಬರುವುದಿಲ್ಲ. ಅವು ಸಮಾಜದ ಹಿತಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಶ್ರಮ ವಹಿಸುವ, ತ್ಯಾಗ ಮಾಡುವ ಹಾಗೂ ಸೇವೆಗೈಯುವ ವ್ಯಕ್ತಿಯ ಸಾಧನೆಯನ್ನು ಹುಡುಕಿಕೊಂಡು ಬಂದು ಕೊರಳನ್ನಲಂಕರಿಸಬೇಕು. ಅಂದಾಗ ಮಾತ್ರ ಆತ್ಮ ತೃಪ್ತಿ ಸಿಗುತ್ತದೆ. ಕಾಡಿ ಪಡೆದ ಪ್ರಶಸ್ತಿಗಳಿಗೆ ಬೆಲೆಯಿಲ್ಲವೆಂದು ಗಡಿನಾಡ ಪ್ರಾಧಿಕಾರ ಪ್ರಶಸ್ತಿ ಪುರಸ್ಕೃತ ನಾಗೇಶ ಆರ್.ಕುಲಕರ್ಣಿ ಅವರು ಹೇಳಿದರು.
ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪ್ರೊ.ಅರವಿಂದ ಕಂಚ್ಯಾಣಿಯವರ “ವ್ಯಕ್ತಿ ಚಿತ್ರಗಳು” ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಡಾ. ಮಲ್ಲಿಕಾರ್ಜುನ ಮೇತ್ರಿ ಅವರು ಗ್ರಂಥ ಪರಿಚಯ ಮಾಡಿ, ಒಬ್ಬ ಸಾಧಕನು ಮಾಡಿದ ಉತ್ತಮ ಕೆಲಸಗಳು ವ್ಯಕ್ತಿಚಿತ್ರಗಳಿಂದ ಗುರುತಿಸಲ್ಪಡುತ್ತವೆ. ವ್ಯಕ್ತಿ ಚಿತ್ರವೆಂಬುವುದು ಒಂದು ಘಟನೆ ಇಲ್ಲವೆ ಅನಿಸಿಕೆಗಳನ್ನು ಅಭವ್ಯಕ್ತಗೊಳಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು.
ಡಾ. ಮಹಾಲಿಂಗಪ್ಪ ಎಸ್.ಮದಭಾವಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು.
ಡಾ. ವಿ.ಡಿ.ಐಹೊಳ್ಳಿ ಸ್ವಾಗತಿಸಿದರು. ಡಾ.ಸುಭಾಸ ಕನ್ನೂರ ನಿರೂಪಿಸಿ ವಂದಿಸಿದರು. ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಆರ್.ಕೆ. ಕುಲಕರ್ಣಿ, ಸುರೇಶ ಚೋಳಕೆ, ಜಿ.ಬಿ.ಜೋಶಿ, ಬಿ. ಎಂ. ಪಾಟೀಲ, ಬಿ.ಆರ್.ಬನಸೋಡೆ, ಜ್ಯೋತಿ ಬಾಗಲಕೋಟ, ಬಿ.ಎಸ್.ಬಿರಾದಾರ, ವಿ. ಎನ್. ಬಾಗಾಯತ, ಜಂಬುನಾಥ ಕಂಚ್ಯಾಣಿ, ಬಸಮ್ಮ ಕಂಚ್ಯಾಣಿ, ರಾಚಣ್ಣ ಕೊಳ್ಳಿ, ನಾಗರತ್ನಾ , ಭುವನೇಶ್ವರಿ, ಗಿರಿಜಾ, ಚನ್ನಕುಮಾರ , ವಿ. ಎಸ್. ಖಾಡೆ, ವಾಯ್.ಬಿ. ಪಟ್ಟಣಶೆಟ್ಟಿ, ಬಸವರಾಜ ಮನಗೊಂಡ, ಸುಖದೇವಿ ಅಲಬಾಳಮಠ, ಸಂಗಣ್ಣ ಕಂಚ್ಯಾಣಿ, ಕಮಲಾ ಮುರಾಳ, ಬನಶ್ರೀ ಹತ್ತಿ ಮುಂತಾದವರು ಉಪಸ್ಥಿತರಿದ್ದರು.



























