ಪಂಚಮುಖಿ ಹನುಮಾನ್ ಮಂದಿರದಲ್ಲಿ ಶಾಸ್ವಾರ್ಥ ಸಭೆ ಯಶಸ್ವಿ

ಕಲಬುರಗಿ,ಜ.24: ವಸಂತ ಪಂಚಮಿ ನಿಮಿತ್ತ ಶುಕ್ರವಾರ ನಗರದ ಸಂಗಮೇಶ್ವರ ಕಾಲೋನಿ ಯ ಶ್ರೀ ಪಂಚಮುಖಿ ಹನುಮಾನ್ ಮಂದಿರದಲ್ಲಿ ಶಾಸ್ವಾರ್ಥ ಸಭೆ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಅನೇಕ ಗಣ್ಯ ವಿದ್ವಾಂಸರು ಹಾಗೂ ಶಾಸ್ತ್ರಾಭ್ಯಾಸಿಗಳು ಭಾಗವಹಿಸಿದ್ದರು.
ಸಭೆಗೆ ಮಣ್ಣೂರಿನ ವೇದೇಶ ತೀರ್ಥ ವಿದ್ಯಾಪೀಠದ ಕುಲಪತಿ, ಪಂಡಿತ ಅನಂತಾಚಾರ್ಯ ಅಕ್ಕಂಚಿ, ಪಂಡಿತ
ಗುರುಮಾಧ್ವಾಚಾರ್ಯ ನಾವಲಿ, ಪಂಡಿತ ಪ್ರಸನ್ನಾಚಾರ್ಯ ಜೋಷಿ, ಪಂಡಿತ ವಿನೋದಾಚಾರ್ಯ ಗಲಗಲಿ ಉಪಸ್ಥಿತರಿದ್ದು ಸಭೆಗೆ ಶೋಭೆ ತಂದರು.
ಸಭೆಯ ಅಂಗವಾಗಿ ನಡೆದ ಶಾಸ್ವಾರ್ಥ ಅನುವಾದ ಕಾರ್ಯಕ್ರಮದಲ್ಲಿ ವೇದೇಶ ತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳು ವೇದಾಂತ ಶಾಸ್ತ್ರದ ಅನುವಾದ ಮಂಡಿಸಿದರು. ಇದೇ ಸಂದರ್ಭದಲ್ಲಿ ಕಲಬುರಗಿಯ ಸತ್ಯನಾಥ ಮಠದ ನ್ಯಾಯ ಶಾಸ್ತ್ರದ ವಿಧ್ಯರ್ಥ’ ವಿಷಯದ ಕುರಿತು ಅನುವಾದ ನಡೆಸಿದರು.ವಿದ್ವಾಂಸರು, ವಿದ್ಯಾರ್ಥಿಗಳು ಹಾಗೂ ಪೆÇ್ರೀತೃಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.