ಚಿಕ್ಕಬಳ್ಳಾಪುರ:೭- ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ ೧೦೦ರಷ್ಟು ಉತ್ತಮ ಗುಣಮಟ್ಟದ ಚಿಕಿತ್ಸೆಗಳನ್ನು ನೀಡಿದರೂ ಶೇ ೧೦ ರಷ್ಟುನ್ಯೂನ್ಯತೆಗಳನ್ನು ಜನತೆ ಹೇಳುತ್ತಾರೆ ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನಿರ್ಧೇಶಕ ಹಾಗೂ ಡೀನ್ ಡಾ.ಎಂ.ಎಲ್.ಮಂಜುನಾಥ್ ಹೇಳಿದರು.
ನಗರದ ಜಿಲ್ಲಾಸ್ಪತೆಯಲ್ಲಿ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಶಸ್ತ್ರಚಿಕಿತ್ಸಾ ವಿಭಾಗವು ಮತ್ತು ಅಸೋಷಿಯೇಶನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದ ಚಿಕ್ಕಬಳ್ಳಾಪುರ ಘಟಕ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ನಾಳೀಯ ರೋಗ ಜಾಗೃತಿ ವಾರದ ಭಾಗವಾಗಿ ನಾಳೀಯ( ವಸ್ಕಲರ್) ಕಾಯಿಲೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿ, ಉತ್ತಮ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವುದುಬುದಕ್ಕೆ ಬೆಂಗಳೂರು ಸೇರಿದಂತೆ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಮಾಡುವ ನಾಳೀಯ( ವಸ್ಕಲರ್) ಕಾಯಿಲೆಗಳ ಶಸ್ತ್ರ ಚಿಕಿತ್ಸೆಗಳನ್ನು ಸಾಕಷ್ಟು ರೋಗಿಗಳಿಗೆ ನಮ್ಮ ಜಿಲ್ಲಾಸ್ಪತ್ರೆಯ ಮುಖ್ಯ ಶಸ್ತ್ರ ಚಿಕಿತ್ಸ ಡಾ.ಸುನೀಲ್ ಜೋಷಿ ನೇತೃತ್ವದ ಶಸ್ತ್ರ ಚಿಕಿತ್ಸಕರ ತಂಡ ಯಶಸ್ವಿಯಾಗಿ ಪೋರೈಸಿರುವುದೇ ಉದಾಹರಣೆಯಾಗಿದೆ ಎಂದರು.
ನಾಳೀಯ( ವಸ್ಕಲರ್) ಕಾಯಿಲೆಯಿಂದ ಹೃದಯ ಕಾಯಿಲೆಯ ಬಗ್ಗೆ ಮತ್ತು ಹೃದಯಕ್ಕೆ ಮತ್ತು ಹೃದಯದಿಂದ ರಕ್ತವನ್ನು ಸಾಗಿಸುವ ನಾಳಗಳಲ್ಲಿನ ಅಡಚಣೆಗಳ ಪರಿಣಾಮಗಳ ಬಗ್ಗೆ ತಿಳಿಸುತ್ತದೆ. ಆದರೆ ಪ್ಲೇಕ್ ಮತ್ತು ಕೊಲೆಸ್ಟ್ರಾಲ್ ಶೇಖರಣೆಯಿಂದ ಉಂಟಾಗುವ ಅಡಚಣೆಗಳು ಪರಿಧಮನಿಯ ಅಪಧಮನಿಗಳಿಗಿಂತ ಹೆಚ್ಚಿನದನ್ನು ಪರಿಣಾಮ ಬೀರುತ್ತವೆ ಎಂದು ಕೆಲವೇ ಜನರಿಗೆ ತಿಳಿದಿದೆ. ದೇಹದಾದ್ಯಂತದ ಅಪಧಮನಿಗಳು ಆಮ್ಲಜನಕ-ಸಮೃದ್ಧ ರಕ್ತವನ್ನು ಹೃದಯದಿಂದ ದೂರ ಸಾಗಿಸುತ್ತವೆ, ಆದ್ದರಿಂದ ಗಂಭೀರ ಪರಿಣಾಮಗಳೊಂದಿಗೆ ಎಲ್ಲಾ ಅಪಧಮನಿಗಳಲ್ಲಿ ಅಡಚಣೆಗಳು ಸಂಭವಿಸಬಹುದು.
ಈ ಕಾಯಿಲೆಗಳಿಂದ ದೂರವಿರಲು ಹೆಚ್ಚು ಕೊಬ್ಬಿನಾಂಶದ ಆಹಾರ, ದೂಮಪಾನ, ಮದ್ಯಪಾನಗಳಿಂದ ದೂರವಿದ್ದು, ಉತ್ತಮ ಆಹಾರ ಸೇವನೆ, ಸಾಕಷ್ಟು ವ್ಯಾಯಾಮ,ಮಾಡುವುದು ಒಳಿತು ಎಂದು ತಿಳಿಸಿದರು.
ಇದೇ ವೇಳೆ ನಾಳೀಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಆರೋಗ್ಯಕರ ಜೀವನ ನಡೆಸುತ್ತಿರುವ ಹಲವಾರು ಮಂದಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ರಕ್ತನಾಳ ಶಸ್ತ್ರ ಚಿಕಿತ್ಸೆಕ ಡಾ.ಎಂ.ವಿಷ್ಣು,ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಮಂಜುಳಾ ದೇವಿ,ನಿವಾಸಿ ವೈದ್ಯಾಧಿಕಾರಿ ಡಾ.ಪಿ.ವಿ.ರಮೇಶ್, ಅಭಯ ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಡಾ. ಪ್ರಶಾಂತ ಎಸ್ ಮೂರ್ತಿ, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸುನಿಲ್ ಸುಭಾಷ್ ಜೋಶಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಎಸ್.ಎಲ್.ಅರುಣ್ ಕುಮಾರ್, ಡಾ.ಸಿ.ಎಂ.ಅರುಣ, ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.

































