ಅದ್ದೂರಿಯಾಗಿ ನಡೆದ 38ನೇ ದತ್ತಾತ್ರೇಯ ಜಾತ್ರಾ ಮಹೋತ್ಸವ

ಔರಾದ :ಡಿ.6: ಪಟ್ಟಣದ ದತ್ತ ಸಾಯಿ ಶನೇಶ್ವರ ಮಂದಿರದಲ್ಲಿ ಗುರುವಾರ ದತ್ತ ಜಯಂತಿಯ ಅಂಗವಾಗಿ ನಡೆಯುವ ದತ್ತ ಜಾತ್ರಾ ಮಹೋತ್ಸವ ಶ್ರೀ ದತ್ತ ಸಾಯಿ ಶನೇಶ್ವರ ಮಂದಿರದ ಅಧ್ಯಕ್ಷರಾದ ಪೂಜ್ಯ ಷ.ಬೃ.ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಅತಿ ವಿಜೃಂಭಣೆಯಿಂದ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.

ಸತತ ಒಂದು ವಾರಗಳ ಕಾಲ ನಡೆದ ಅಖಂಡ ಹರಿನಾಮ ಸಪ್ತಾಹ ಗಾತಾ ಪೂಜೆಯೊಂದಿಗೆ ಸಮಾರೋಪಗೊಂಡಿತು. ಪ್ರತಿ ದಿನ ಒಂದೊಂದು ಭಜನಾ ಮಂಡಳಿಯಿಂದ ಭಜನೆ ಕೀರ್ತನೆ ಜರುಗಿದವು. ಪ್ರತಿ ವರ್ಷ ನಡೆದುಕೊಂಡು ಬರುವ ದತ್ತಾತ್ರೇಯ ದೇವರ ಜಾತ್ರಾ ಮಹೋತ್ಸವ ವಿಶೇಷ ಪೂಜೆ, ಭಜನೆ ಕಿರ್ತನೆಗಳು, ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಂದ ಸಂಪನ್ನವಾಗಿದೆ.

ಜಾತ್ರಾ ಮಹೋತ್ಸವ ದಲ್ಲಿ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಜನೆ ಕಿರ್ತನೆಗಳು ಜರುಗಿದವು. ಶ್ರೀ ದತ್ತಾತ್ರೇಯ ದೇವರಿಗೆ ಮಾತೆಯರು ಪೂಜೆ ಸಲ್ಲಿಸಿ ತೊಟ್ಟಿಲು ತೂಗಿದರು ಗಾತಾ ಪೂಜಾ ನಂತರ ಸಾಧುಘಾಟ ಮಹಾರಾಜರಿಂದ ಚಕ್ರಿ ಭಜನೆ ನಡೆಯಿತು. ಎಲ್ಲೆಂದರಲ್ಲಿ ಭಕ್ತರು ತಮ್ಮ ಮಕ್ಕಳಿಗೆ ಜಾತ್ರೆಯಲ್ಲಿ ಆಟೋಪಕರಣ ಖರೀದಿಯಲ್ಲಿ ಕಂಡು ಬಂದರು.

ಶ್ರೀ ದತ್ತ ಸಾಯಿ ಶನೇಶ್ವರ ಸೇವಾ ಸಮಿತಿಯ ಸರ್ವ ಸದಸ್ಯರು ದತ್ತ ಜಯಂತಿ ಅಂಗವಾಗಿ ಸೇವೆಯಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುವರು. ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಕಮಿಟಿ ಸದಸ್ಯರಾದ ಸಂಗಯ್ಯ ಸ್ವಾಮಿ, ಕಿರಣ ಉಪ್ಪೆ, ಚಂದ್ರಕಾಂತ ಪಾಟೀಲ, ಬಸವರಾಜ ಶೆಟಕಾರ, ಕಲ್ಯಾಣರಾವ ದೇಶಮುಖ, ಗೌರವ ದೇಶಮುಖ, ಶರಣಪ್ಪ ಪಾಟೀಲ, ರಾಜಕುಮಾರ ಎಡವೆ, ಸಂಜುಕುಮಾರ ಶೆಟಕಾರ, ವೀರೇಶ ಅಲ್ಮಾಜೆ, ಆನಂದ ದ್ಯಾಡೆ, ಅಮರಸ್ವಾಮಿ ಸ್ಥಾವರಮಠ ಹಾಗೂ ಪಟ್ಟಣದ ಗಣ್ಯರು ಸೇರಿದಂತೆ ಇನ್ನಿತರರು ತಮ್ಮ ತನು ಮನ ಧನದಿಂದ ಸೇವೆಯಲ್ಲಿ ಪಾಲ್ಗೊಂಡಿದ್ದರು.


ಪಂಚ ದೇವರ ದರ್ಶನ :

ಪಟ್ಟಣದ ಬೆಟ್ಟದ ಮೇಲಿರುವ ದತ್ತಾತ್ರೇಯ ದೇವಸ್ಥಾನ ಪಂಚ ಪಾಂಡವರು ಪಂಚಭೂತಗಳ ಸಮಾಗಮ ಎಂಬತಿದೆ. ಶ್ರೀ ದತ್ತಾತ್ರೇಯ, ಸಾಯಿಬಾಬಾ ಮಂದಿರ, ಶ್ರೀ ಶನೀಶ್ವರ ಮಂದಿರ, ಆಂಜನೇಯ ದೇವಸ್ಥಾನ, ನಾಗದೇವತೆ ಮಂದಿರ ಹೀಗೆ ಒಟ್ಟು ಐದು ದೇವರ ದರ್ಶನ ಭಾಗ್ಯ ಇಲ್ಲಿದೆ.


ಹುಗ್ಗಿ ಸವಿದ ಭಕ್ತರು:

ಶ್ರೀ ದತ್ತಾತ್ರೇಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಹುಗ್ಗಿ ಅನ್ನ ಸಾಂಬಾರ ಪ್ರಸಾದ ಸವಿದರು. ಭಕ್ತರು ಕಾಣಿಕೆಯಾಗಿ ನೀಡಿದ ದವಸ ಧಾನ್ಯಗಳನ್ನು ಪಡೆದು ಬಂದ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ಸರಿಸುಮಾರು 30-35 ಸಾವಿರ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.