
ಲಕ್ಷೆ÷್ಮÃಶ್ವರ,ಮೇ.೨೬: ೨೦೨೫ ೨೬ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಶಿಕ್ಷಣ ಇಲಾಖೆಯಿಂದ ಬರದಿಂದ ಸಿದ್ಧತೆಗಳು ಸಾಗಿದ್ದು ಪೂರ್ವ ತಯಾರಿಗಾಗಿ ಶಿರಹಟ್ಟಿ ತಾಲೂಕಿನ ಎಲ್ಲಾ ಅನುದಾನ ರಹಿತ ಅನುದಾನ ಸಹಿತ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಸಭೆಯನ್ನು ಈಗಾಗಲೇ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕರೆದು ಶಾಲಾ ಮೈದಾನ ಕುಡಿಯುವ ನೀರು ಕ್ಷೀರ ಭಾಗ್ಯ ಬಿಸಿ ಊಟ ದಾಖಲಾತಿ ಆಂದೋಲನ ಪಠ್ಯಪುಸ್ತಕ ವಿತರಣೆ ಒಂದನೇ ತರಗತಿಗೆ ಪ್ರವೇಶ ಪ್ರಾರಂಭ ಇನ್ನಿತರ ಎಲ್ಲಾ ಶಾಲಾ ಚಟುವಟಿಕೆಗಳ ಪೂರ್ವ ಸಿದ್ಧತೆಯ ಕುರಿತು ಸಭೆಯಲ್ಲಿ ಮಾರ್ಗದರ್ಶನ ನೀಡಲಾಗಿರುತ್ತದೆ.
ಅದರಂತೆ ಈ ಬಾರಿ ತಾಲೂಕಿನಿಂದ ಕ್ಲಸ್ಟರ್ ಕೇಂದ್ರಕ್ಕೆ ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು, ಈಗಾಗಲೇ ಎಲ್ಲ ಶಾಲೆಯ ಪ್ರಧಾನ ಗುರುಗಳನ್ನು ಕರೆದು ಪಠ್ಯಪುಸ್ತಕ ವಿತರಿಸುವ ಕಾರ್ಯಭರದಿಂದ ಸಾಗಿದೆ.
ಅದರಂತೆ ಈಗಾಗಲೇ ಒಂದನೇ ತರಗತಿಯಿಂದ ೭ನೇ ತರಗತಿಯವರೆಗೆ ಸುಮಾರು ೬೦ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು ಇಂದು ಸಮೂಹ ಸಂಪನ್ಮೂಲ ಕೇಂದ್ರ ಲಕ್ಷೆ÷್ಮÃಶ್ವರ ದಕ್ಷಿಣದಲ್ಲಿ ಪಠ್ಯಪುಸ್ತಕ ವಿತರಿಸುವ ಕಾರ್ಯ ಪ್ರಾರಂಭವಾಗಿದೆಯೆAದು ಸಿ ಆರ್ ಪಿ ಯ ಸಂಪನ್ಮೂಲ ವ್ಯಕ್ತಿ ಸತೀಶ ಬೋಮಲೆ ಹೇಳಿದರು.
ಶಾಲೆಯ ಪ್ರಧಾನ ಗುರುಗಳಾದ ಬಸವರಾಜ ಕುಂಬಾರ, ಎನ್ ಎಸ್ ಬಂಕಾಪುರ, ಎಸ್ ಎನ್ ಕ್ಷತ್ರಿಯ, ಶ್ರೀನಿವಾಸ ಮತ್ತೂರ, ಎಸ್ ಎಸ್ ಜಿರಂಕಳ್ಳಿ, ಜೆ ಎಫ್ ಹಬೀಬ, ಎಲ್ ಆರ್ ಮಲಸಮುದ್ರ, ಹೂಗಾರ, ಪಿ ಎಚ್ ಕೊಂಡಾಬಿAಗಿ ಶಿಕ್ಷಕರು ಪಠ್ಯಪುಸ್ತಕಗಳ ವಿತರಣೆ ನಡೆಸಿದರು.
ಪಠ್ಯಪುಸ್ತಕ ವಿತರಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಾಲೂಕ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳಾದ ಹರೀಶ್ ಸೇಂದ್ರ ಗಯಾ ಹೇಳಿದರು.