
ಗಣಿ ಹಗರಣ
ಹೈದ್ರಾಬಾದ್, ಜೂ.೧೧- ಓಬಳಾಪುರಂ ಮೈನಿಂಗ್ ಕಂಪನಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ವಿರುದ್ದ ಸಿಬಿಐ ಕೋರ್ಟ್ ವಿಧಿಸಿದ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್ ಇದೀಗ ರದ್ದುಗೊಳಿಸಿದೆ. ಇದರಿಂದಾಗಿ ಜನಾರ್ದನ ರೆಡ್ಡಿ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.
ಪ್ರಕರಣ ರದ್ದು ಮಾಡುವ ಜೊತೆಗೆ ಹಲವು ಷರತ್ತು ವಿಧಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ.ಇದರಿಂದಾಗಿ ಶಾಸಕ ಸ್ಥಾನದಿಂದ ಅನರ್ಹರಾಗುವುದರಿಂದ ಬಚಾವಾಗಿದ್ಧಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಜಾಮೀನಿಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸದ ಸಿಬಿಐ, ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವುದನ್ನು ವಿರೋಧಿಸಿತು. ಇದೀಗ ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ಕೆ. ಲಕ್ಷ್ಮಣ್ ನೇತೃತ್ವದ ಪೀಠ ಜನಾರ್ದನ ರೆಡ್ಡಿಗೆ ಹಲವು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಜೊತೆಗೆ ೧೦ ಲಕ್ಷ ರೂಪಾಯಿ ಎರಡು ಕೋಟಿ ಹಾಗೂ ಪಾಸ್ ಪೋರ್ಟ್ ವಶಕ್ಕೆ ನೀಡಲು ಸೂಚನೆ ನೀಡಿದೆ. ಅಲ್ಲದೆ ದೇಶ ಬಿಟ್ಟು ಹೋಗದಂತೆ ಜನಾರ್ದನ ರೆಡ್ಡಿಗೆ ಹೈಕೋರ್ಟ್ ಸೂಚನೆ ನೀಡಿ ಜಾಮೀನು ಮಂಜೂರು ಮಾಡಿದೆ, ಇದರಿಂದ ಜನಾರ್ದನ ರೆಡ್ಡಿ ಬೀಸುವ ಕತ್ತಿಯಿಂದ ಪಾರಾಗಿದ್ಧಾರೆ
ಓಬಳಾಪುರಂ ಮೈನಿಂಗ್ ಕಂಪನಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳ ಕುರಿತು ತೆಲಂಗಾಣ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಇದರಿಂದ ಜನಾರ್ಧನ ರೆಡ್ಡಿ ನಿರಾಳರಾಗಿದ್ಧಾರೆ..
ಪ್ರಕರಣದ ಆರೋಪಿಗಳಾದ ಗಾಲಿ ಜನಾರ್ದನ ರೆಡ್ಡಿ, ಬಿ.ವಿ. ಶ್ರೀನಿವಾಸ ರೆಡ್ಡಿ, ವಿ.ಡಿ. ರಾಜಗೋಪಾಲ್ ಮತ್ತು ಅಲಿ ಖಾನ್ ಸಲ್ಲಿಸಿರುವ ಜಾಮೀನು ಅರ್ಜಿಗಳ ಜೊತೆಗೆ ಗಾಲಿ ಜನಾರ್ದನ ರೆಡ್ಡಿ ಪ್ರತ್ಯೇಕವಾಗಿ ಸಲ್ಲಿಸಿರುವ ಜೈಲು ಶಿಕ್ಷೆಯ ಅರ್ಜಿಗಳ ಮೇಲಿನ ಶಿಕ್ಷೆಯನ್ನು ರದ್ದುಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ.
ಜನಾರ್ದನ ರೆಡ್ಡಿ ಪರವಾಗಿ ಹಿರಿಯ ವಕೀಲರಾದ ನಳಿನ್ ಕುಮಾರ್ ಮತ್ತು ನಾಗಮುತ್ತು ವಾದ ಮಂಡಿಸಿದರು. ಅರ್ಜಿದಾರರು ಈಗಾಗಲೇ ತಮ್ಮ ಜೈಲು ಶಿಕ್ಷೆಯ ಶೇಕಡಾ ೫೦ ಕ್ಕಿಂತ ಹೆಚ್ಚು ಅಂದರೆ ಮೂರುವರೆ ವರ್ಷಗಳನ್ನು ಅನುಭವಿಸಿದ್ದಾರೆ ಎನ್ನುವ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು
ಕೇವಲ ಮೂರುವರೆ ವರ್ಷ ಜೈಲು ಶಿಕ್ಷೆ ಉಳಿದಿದೆ ಈ ಹಂತದಲ್ಲಿ, ಅವರು ಶಾಸಕಾಂಗ ಸದಸ್ಯತ್ವವನ್ನು ಕಳೆದುಕೊಳ್ಳದಂತೆ ಸಿಬಿಐ ನ್ಯಾಯಾಲಯದ ತೀರ್ಪನ್ನು ಅಮಾನತುಗೊಳಿಸುವಂತೆ ಅವರು ವಿನಂತಿಸಿದ್ದರು, ವಾದ ಪ್ರತಿವಾದ ಆಲಿಸಿದ ಸಿಬಿಐ ನ್ಯಾಯಾಲಯ ಪ್ರಕರಣ ರದ್ದು ಮಾಡಿ ಜಾಮೀನು ಮಂಜೂರು ಮಾಡಿದೆ