ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ:ದಂಡಿಗಿಮಠ

ಸೈದಾಪುರ:ಅ.೨:ಬದಲಾದ ಜಾಗತೀಕರಣದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿಸೆಯಲ್ಲಿ ಪ್ರಾಯೋಗಿಕ ಕಲಿಕೆಗಾಗಿ ಉಪಯೋಗ ಮಾಡುವ ಉಪಕರಗಳ ಆಯುಧಗಳನ್ನು ಪೂಜೆ ಮಾಡುವ ಮೂಲಕ ಉತ್ತಮ ಕೌಶಲ್ಯವಂತರು ನೀವಾಗಿ ಎಂದು ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಅಭಿಪ್ರಾಯಪಟ್ಟರು.
ಸಮೀಪದ ಕಡೇಚೂರು ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಆಯುಧ ಪೂಜೆ ಕಾರ್ಯಕ್ರಮ ಹಾಗೂ ಹಬ್ಬದ ಅಂಗವಾಗಿ ನಡೆದ ವಿವಿಧ ಸ್ಪರ್ಧೇಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು. ಸುಖ ಶಾಂತಿ ನೆಮ್ಮದಿಯನ್ನು ಬೆಳೆಸಲು ಬೆಳೆದು ಬಂದ ಹಬ್ಬ ಇದಾಗಿದೆ. ವಿಜಯ ದಶಮಿ, ದಸರಾ, ಮಹಾನವಮಿ, ನಾಡಹಬ್ಬ ಎಂದು ಅನೇಕ ಹೆಸರುಗಳಿಂದ ಕರೆಯಲಾಗುತ್ತಿದೆ ಎಂದರು. ದೇಶದ ಅಭಿವೃದ್ಧಿಗೆ ಕೌಶಲ್ಯ ನೆರವಾಗಲಿದ್ದೂ ಇದನ್ನು ಯುವ ಪಿಳಿಗೆ ಈ ಕೇಂದ್ರದಲ್ಲಿ ಪಡೆಯುವುದರ ಮೂಲಕ ತಮ್ಮ ಕುಟುಂಬ, ನಾಡು, ದೇಶದ ಅಭಿವೃದ್ದಿಗೆ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ರವಿಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿ.ಟಿ.ಟಿ.ಸಿ.ಯಲ್ಲಿ ಪ್ರತಿ ವರ್ಷ ದಸರಾ ಹಬ್ಬದ ಆಯುಧ ಪೂಜೆಯನ್ನು ವಿಜೃಂಭಣೆಯಿAದ ಆಚರಿಸುತ್ತೇವೆ. ತಾಯಿ ಚಾಮುಂಡೇಶ್ವರಿ ನಿಮಗೆಲ್ಲ ಉತ್ತಮ ವಿದ್ಯಾ-ಬುದ್ಧಿ, ಸಕಾಲದಲ್ಲಿ ಐಶ್ವರ್ಯ ನೀಡಿ ಕಾಪಾಡಲಿ ಎಂದು ಹೇಳಿದರು.
ಇದಕ್ಕೂ ಮುಂಚೆ ತಾಯಿ ಚಾಮುಂಡೇಶ್ವರಿ ಪೂಜೆಯ ಮೂಲಕ ಚಾಲನೆ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಿದವು. ಈ ಸಂದರ್ಭದಲ್ಲಿ ಪ್ರಾಂಶುಪಾಲ ರವಿಚಂದ್ರ, ಉಪನ್ಯಾಸಕರಾದ ವೆಂಕಟರಾವ್ ಕುಲಕರ್ಣಿ, ಹನುಮಂತ, ಪ್ರಿಯಾಂಕಾ, ಸುಮ, ಶ್ರೀನಿವಾಸ, ಅಕ್ಷಯ್, ಅಂಕುಶ, ಹುಸೇನ್, ಸುಕುಮುನಿ, ಬಾಲಾಜಿ, ಮಂಜುನಾಥ್ ಹಾಗೂ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು. ಹಿರಿಯ ಉಪನ್ಯಾಸಕ