Home ಜಿಲ್ಲೆ ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ ಸಮಾಜ ನಿರ್ಮಾಣದ ಹೊಣೆಗಾರಿಕೆ :ಡಾ.ಪ್ರಶಾಂತ ಮಗದುಮ್

ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ ಸಮಾಜ ನಿರ್ಮಾಣದ ಹೊಣೆಗಾರಿಕೆ :ಡಾ.ಪ್ರಶಾಂತ ಮಗದುಮ್

ಅಥಣಿ : ಫೆ.26:ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ, ಉತ್ತಮ ಸಮಾಜ ನಿರ್ಮಾಣದ ಮಹತ್ವದ ಹೊಣೆಗಾರಿಕೆಯಾಗಿದೆ. ಆಧುನಿಕ ಜಗತ್ತಿನಲ್ಲಿ ಶಿಕ್ಷಣವು ಕೇವಲ ವ್ಯಾಪಾರವಾಗದೆ, ಪ್ರತಿಯೊಬ್ಬರ ಬದುಕನ್ನು ಸುಂದರವಾಗಿ ನಿರ್ಮಿಸುವ ದಾರಿಯಾಗಬೇಕು,”ಎಂದು ಪ್ರಾಚಾರ್ಯರಾದ ಡಾ.ಪ್ರಶಾಂತ ಮಗದುಮ್ ಹೇಳಿದರು
ಅವರು ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಶ್ರೀಮತಿ ಯಶೋದಾದೇವಿ ಗಂಗಾಧರ ಕುಲಗುಡೆ (ವಾಯ್.ಜಿ.ಕೆ) ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ 2025-26ನೇ ಸಾಲಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಒಕ್ಕೂಟ ಉದ್ಘಾಟನೆ ಹಾಗೂ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬಿ.ಇಡಿ ವಿದ್ಯಾರ್ಥಿಗಳು ಶಿಸ್ತು, ಸೇವಾಭಾವ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಕರಾಗಬೇಕು ಎಂದು ಕರೆ ನೀಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಹೊಸ ಬೋಧನಾ ವಿಧಾನಗಳು, ತಂತ್ರಜ್ಞಾನ ಬಳಕೆ ಮತ್ತು ವಿದ್ಯಾರ್ಥಿಗಳಿಗೆ ಮನೋವೈಜ್ಞಾನಿಕ ಅರಿವು ಅಗತ್ಯವಿದೆ ಎಂದು ಹೇಳಿದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಶಿಕಾಂತ ಗುರೂಜಿ ಮಾತನಾಡಿ, “ಶಿಕ್ಷಣದಲ್ಲಿ ಜಾತಿ, ಮತ, ಧರ್ಮದ ಭೇದವಿರಬಾರದು. ಭಾರತದ ಪುಣ್ಯಭೂಮಿ ಅನೇಕ ದಾರ್ಶನಿಕರನ್ನು ನೀಡಿದೆ. ಅವರ ಹಾದಿಯಲ್ಲಿ ಸಾಗುತ್ತಾ ನಶ್ವರ ಬದುಕಿನಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್ ಜಿ ವಂಟಗುಡಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ರಾದ ಡಿ ಎಸ್ ಪಾಟೀಲ, ಡಾ.ಆರ್ ಪಿ ಸಾಳವೆ, ಎಮ್ ಎಮ್ ಚೌಗುಲಾ, ಎಮ್ ಎ ಮಠಪತಿ, ಡಿ ಎಸ್ ಕಾತೆವಾಡಿ, ಎಮ್ ಎ ನದಾಫ್, ವಿ ಎಮ್ ಕಾಮಗೌಡರ, ವಿ ಎಮ್ ಮಾಲಗಾವಿ, ವಿನಾಯಕ ಚಿಗರೆ, ಮಹಿಳಾ ಪ್ರತಿನಿಧಿ ಪೃಥ್ವಿ ತಕತರಾವ ಸೇರಿದಂತೆ ಹಲವು ಉಪಸ್ಥಿತರಿದ್ದರು.