ಶಿಕ್ಷಕ ವೃತ್ತಿ ಅಂತ್ಯAತ ಪವಿತ್ರವಾದದ್ದು:ವಾಮನರಾವ ದೇಶಪಾಂಡೆ

ಸಂಜೆವಾಣಿ ವಾರ್ತೆ
ಕೆಂಭಾವಿ :ಅ.೧೪: ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾಗಿದ್ದು ಹಿರಿಯ ಶಿಕ್ಷಕರು ಕಲಿಸಿದ ಪಾಠ ಇಂದಿಗೂ ನಮ್ಮಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ ಹೇಳಿದರು.
ಪಟ್ಟಣದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಿವೃತ್ತ ಶಿಕ್ಷಕ ದಿ. ಚಂದ್ರಭಟ್ಟ ಜೋಷಿ ಅವರ ಸ್ಮರಣಾರ್ಥ ಜೋಷಿ ಸಾಹಿತ್ಯ ವೇದಿಕೆ ವತಿಯಿಂದ ನೀಡುವ ಜ್ನಾನಚಂದ್ರ ಪ್ರಶಸ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ಶತಮಾನ ಕಂಡ ಸರ್ಕಾರಿ ಶಾಲೆಯಲ್ಲಿ ಹಲವು ಮೇಧಾವಿ ಶಿಕ್ಷಕರು ಪಾಠ ಮಾಡಿದ್ದು ಅಂಥವರಲ್ಲಿ ಕಲಿತ ಹಲವರು ಇಂದು ಉನ್ನತ ಹುದೆಯಲ್ಲಿದ್ದಾರೆ, ಶಿಕ್ಷಣ, ಕ್ಷಮತೆ, ಕಲಿಕೆ ಈ ಮಾರು ವಿಧಾನಗಳನ್ನು ಚಾಚೂ ತಪ್ಪದೆ ಪಾಲಿಸುವವರೆ ನಿಜವಾದ ಶಿಕ್ಷಕರಾಗಿದ್ದಾರೆ ಎಂದ ಅವರು ಈ ಸಾಲಿನಿಲ್ಲಿ ನಿವೃತ್ತ ಶಿಕ್ಷಕ ಚಂದ್ರಭಟ್ಟ ಜೋಷಿ ಅವರೂ ಸೇರುತ್ತಾರೆ ಅಂಥವರ ಹೆಸರಿನಲ್ಲಿ ಅವರ ಕುಟುಂಬ ಪ್ರತಿವರ್ಷ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಗಲಕೋಟೆಯ ನಿವೃತ್ತ ಶಿಕ್ಷಕಿ ಶೈಲಜಾ ಬಳೂರಗಿ, ನಾನು ಕಲಿತ ಗುರುಗಳ ಹೆಸರಿನಲ್ಲಿ ನನಗೆ ಈ ಪ್ರಶಸ್ತಿ ದೊರೆತಿರುವುದು ಅತ್ಯಂತ ಖುಷಿ ತಂದಿದೆ. ಜ್ನಾನ ಎನ್ನುವ ಚಂದ್ರನೆ ನಮ್ಮ ಗುರುಗಳಾದ ದಿ. ಚಂದ್ರಭಟ್ಟ ಜೋಷಿ ಅವರು ಆಗಿದ್ದರು ಅಂಥವರಲ್ಲಿ ವಿದ್ಯೆ ಕಲಿತ ನಾವೆ ಧನ್ಯರು ಎಂದು ಭಾವುಕರಾಗಿ ನುಡಿದರು. ಸಾಹಿತ್ಯ ವೇದಿಕೆ ಅಧ್ಯಕ್ಷ ಶ್ರೀಪಾದ ಭಟ್ಟ ಜೋಷಿ ಪ್ರಾಸ್ತಾವಿಕ ಮಾತನಾಡಿದರು.
ಹಿರೇಮಠದ ಶ್ರೀ ಚೆನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಆದಿತ್ಯ ಪೊಲೀಸ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಪ್ರಹ್ಲಾದಾಚಾರ್ಯ ಜೋಷಿ, ಅಶೋಕ ಸೊನ್ನದ, ಸಂಜೀವರಾವ ಕುಲಕರ್ಣಿ, ಮಹಿಪಾಲರೆಡ್ಡಿ ಡಿಗ್ಗಾವಿ, ಚಂದ್ರಚೂಡ ಮಾಲಿಪಾಟೀಲ, ನಿಂಗನಗೌಡ ದೇಸಾಯಿ, ವಲ್ಲಭ ಭಟ್ಟ ಜೋಷಿ, ನಾರಾಯಣಭಟ್ಟ ಪೂಜಾರ, ಶಾರದಾ ಪೂಜಾರ, ರೂಪಾ ಜೋಷಿ, ಮಂಜುಳಾ ಜೋಷಿ, ವೇದಾ ಜೋಷಿ, ವೆಂಕೂಬಾಯಿ ಜೋಷಿ, ಗಾಯತ್ರಿ ಗಂವಾರ ಸೇರಿದಂತೆ ಹಲವರು ಇದ್ದರು. ಗುರುರಾಜ ಕುಲಕರ್ಣಿ ನಿರೂಪಣೆ ಮಾಡಿದರು, ಗುಂಡಭಟ್ಟ ಜೋಷಿ ಸ್ವಾಗತಿಸಿದರು, ಗಿರೀಶ ಜೋಷಿ ವಂದಿಸಿದರು.