
ಕೊಲ್ಹಾರ: ಯಾವ ಕಾಲದಲ್ಲಿಯೇ ಆಗಲಿ ನಿಮ್ಮನ್ನು ಕಾಪಾಡುವ ಏಕೈಕ ಶಕ್ತಿ ಎಂದರೆ ಅದು ಕಠಿಣ ಪರಿಶ್ರಮ ಮಾತ್ರ, ಗುರಿ ಮುಟ್ಟಲು ಕೆಲವೇ ಕೆಲವು ಹೆಜ್ಜೆಗಳು ಇರುವ ಸಮಯವಿದು ಹೇಗೂ ಅದೆಷ್ಟೋ ಹೆಜ್ಜೆಗಳನ್ನು ದಾಟಿ ಬಂದಿದ್ದೀರಿ ಮತ್ತೆ ಆ ಹಲವು ಹೆಜ್ಜೆಗಳತ್ತ ಹಿಂದಕ್ಕೆ ಮರಳವುದಕ್ಕಿಂತ ಕೆಲವೇ ಹೆಜ್ಜೆಗಳ ಹಾಕಿ ಮುನ್ನಡೆದರೆ ನಿಮ್ಮ ಗುರಿ ಮುಟ್ಟುತ್ತೀರಿ ಎಂದು ರಾಜ್ಯ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪುರಷ್ಕøತರಾದ ಪೆÇ್ರ; ಬಸವರಾಜ ಜಾಲವಾದಿ ಹೇಳಿದರು.
ಅವರು ತಾಲೂಕಿನ ಕೂಡಗಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ಪರೀಕ್ಷಾ ಭಯದಿಂದ ತೊಳಲಾಡುತ್ತಿರುವ, ಓದಿನಲ್ಲಿ ಆಸಕ್ತಿ ಇರದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುತ್ತಿದ್ದರು.
ಓದಿನಲ್ಲಿ ಆಸಕ್ತಿಯನ್ನು ಕೆರಳಿಸುವ ರೀತಿಯಲ್ಲಿ ಪಾಠ ಮಾಡುವುದು ನಮ್ಮ ಕರ್ತವ್ಯ ಏಕಾಗ್ರಚಿತ್ತದಿಂದ ಪರೀಕ್ಷೆಯಲ್ಲಿ ಅದನ್ನು ಬರೆಯುವುದು ನಿಮ್ಮ ಕರ್ತವ್ಯ ವೆಂಬುದನ್ನು ತಿಳಿಯಬೇಕು
ಪರೀಕ್ಷಾ ಸಮಯದಲ್ಲಿ ನಿಮ್ಮಲ್ಲಿ ಕೀಳರಿಮೆ ಬಿತ್ತುವವರ, ಮೂದಲಿಸುವವರ ಹಾಗೂ ನಿಂದಿಸುವವರ ಕಡೆಗೆ ಗಮನಹರಿಸಬೇಡಿ ಹಿಂದೆ ನಿಂದಿಪರನ್ನೂ ಸಹ ಕೊಂಡಾಡುತ ಮುಂದೆ ಸಾಗಿ ಎಂದು ಕರೆಕೊಟ್ಟ ಅವರು,
ನೀವೆಲ್ಲ ಅರ್ಜುನನ ಸ್ಥಾನದಲ್ಲಿ ಇದ್ದೀರಿ ನಾನು ಕೃಷ್ಣನ ಸ್ಥಾನದಲ್ಲಿದ್ದೇನೆ ಈಗ ನನ್ನ ಮಾತನ್ನಷ್ಟೇ ನೀವು ಕೇಳಬೇಕು ರಣರಂಗಕ್ಕೆ ಪ್ರವೇಶ ಮಾಡುವವರಿದ್ದೀರಿ , ಅಲ್ಲಿ ನೀವು ಇಟ್ಟುಕೊಂಡ ಗುರಿಯನ್ನು ಮುಟ್ಟಬೇಕೆಂದರೆ ಅನಿವಾರ್ಯವಾಗಿ ನೀವು ಸ್ವಾರ್ಥಿಗಳಾಗಲೇಬೇಕು ಗುರುಗಳು ಹೇಳುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ , ಮಾತು ಕಡಿಮೆ ಮಾಡಿ, ಪ್ರಶ್ನೆ ಪತ್ರಿಕೆಯನ್ನು ಕೈಗೆ ತೆಗೆದುಕೊಂಡು ಒಮ್ಮೆ ಧೀರ್ಘ ಉಸಿರಾಡಿ, ಈ ಹಿಂದೆ ಓದಿದ್ದೆಲ್ಲ ನಿಮ್ಮ ತಲೆ ಎಂಬ ಕಂಪ್ಯೂಟರ್ನಲ್ಲಿ ಸ್ಟಾಕ್ ಆಗಿರುತ್ತದೆ ನೆನಪಿಡಿ, ಮೊಬೈಲ್ ಬಿಡಿ,ಟಿವಿ ನೋಡಬೇಡಿ, ಓದು ಓದು ಓದು ಮಾತ್ರ ಈಗ ನಿಮಗಿರುವ ಏಕೈಕ ದಾರಿ ಸಂಶಯ ಬಂದಾಗ ನಮ್ಮನ್ನ ಸಂಪರ್ಕಿಸಿ. ಯಾವಾಗ ವಿದ್ಯಾರ್ಥಿಗಳು ಪ್ರಶ್ನೆ ಕೇಳಲು ಶುರು ಹಚ್ಚಿಕೊಳ್ಳುತ್ತಾರೋ ಆವಾಗ ಅವರು ಓದಲು ಶುರು ಮಾಡಿರುತ್ತಾರೆಂದು ನಾವು ಅರ್ಥೈಸಿಕೊಳ್ಳುತ್ತೇವೆ.
ಸಾಧಾರಣ, ಅಸಾಧಾರಣ ಹಾಗೂ ಮಧ್ಯಮ ಮಟ್ಟದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೆ ಪ್ರಶ್ನೆ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದ ಅವರು ಕಟ್ಟ ಕಡೆಯ ಬೆಂಚಿನ ವಿದ್ಯಾರ್ಥಿಗಳನ್ನೂ ಸಹ ಅತ್ಯಂತ ಸರಳ ಪ್ರಶ್ನೆಗಳನ್ನು ಕೇಳಿ ಉತ್ತರ ಹೇಳಲು ಪ್ರಚೋದಿಸುತ್ತಿರುವುದು ಕಂಡು ಬಂತು.
ಪರಿಹಾರ ಬೋಧನೆಯ ಕಟ್ಟ ಕಡೆಗೆ ಯಾರು ಧೈರ್ಯದಿಂದ ಮುನ್ನುಗ್ಗುತ್ತಾರೋ ಅವರಿಗೆ ಯಶಸ್ಸು ತಾನಾಗಿಯೇ ಬೆನ್ನು ಹತ್ತಿ ಬರುತ್ತದೆಂದರು. ಯಾರು ಎಂದು ಸೋತಿಲ್ಲವೋ ಎಂದೂ ಕಷ್ಟವನ್ನು ಅನುಭವಿಸಿಲ್ಲವೋ ಅವರನ್ನು ನಂಬಬೇಡಿ ಅವರ ಭಾಗ್ಯವನ್ನು ಅನುಸರಿಸಬೇಡಿ ಅವರ ಬಾವುಟದ ಕೆಳಗೆ ಹೋರಾಡಲು ಎಂದೂ ಹೋಗಬೇಡಿ ಎಂದು ಕರೆ ಕೊಟ್ಟರು. ಪರೀಕ್ಷೆಗೆ ಅಂಜಿ ಓಡಿ ಹೋಗುವುದು ತರವಲ್ಲ ಧೈರ್ಯದಿಂದ ಅದನ್ನು ಎದುರಿಸಿ ನಿಲ್ಲುವುದು ಸೂಕ್ತ ಆ ಸಮಸ್ಯೆಯ ಜುಟ್ಟನ್ನೆ ಗಟ್ಟಿಯಾಗಿ ಹಿಡಿದು ಬಿಡಬೇಕು ಆ ಸಮಸ್ಯೆ ಗುಟ್ಟನ್ನು ಸರಿಯಾಗಿ ಗ್ರಹಿಸಬೇಕು ಆಗ ಆ ಸಮಸ್ಯೆಗೆ ನಮಗೆ ಶರಣಾಗುತ್ತದೆ ಆಗ ನಮ್ಮನ್ನು ಅದು ಎದುರಿಸಲು ಮುಂದಾಗದೆ ತಾನೇ ಭೀತಿಗೊಂಡು ನಮ್ಮ ಕಾಲಿಗೆ ಬೀಳುತ್ತದೆ . ಮೂಗು ಹಿಡಿದರೆ ಬಾಯಿ ತೆರೆದುಕೊಳ್ಳಲೇ ಬೇಕಲ್ಲವೇ ಎಂಬ ಹಲವಾರು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಪರಿಹಾರ ಒದಗಿಸುತ್ತಿರುವುದು ಕಂಡು ಬಂದಿತು.



























