
ಕಲಬುರ್ಗಿ , ಸೆ,28:ಭಾರತ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಗುರುಗಳಿಗೆ ಅಪಾರವಾದ ಗೌರವ ಆದರಗಳನ್ನು ನೀಡುವ ಸಾಂಪ್ರದಾಯ ರೂಢಿಯಲ್ಲಿದೆ ಜಗತ್ತಿನಲ್ಲಿ ಅತಿ ಪವಿತ್ರವಾದ ವೃತ್ತಿ ಯಾವುದಾದರೂ ಇದೆ ಎಂದರೆ ಶಿಕ್ಷಕ ವೃತ್ತಿ ಮಾತ್ರ, ಪ್ರತಿ ಯಶಸ್ವಿ ವ್ಯಕ್ತಿ ಹಿಂದೆ ಗುರುವಿನ ಆಶೀರ್ವಾದ ಇದ್ದೆ’ ಇರುತ್ತದೆ.ಮುಂದೆ ಗುರಿ, ಹಿಂದೆ ಗುರು ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್ ಹೇಳಿದರು.ಕಮಲಾಪುರ ತಾಲೂಕಿನ ಮಹಾಗಾಂವ್ ಕ್ರಾಸ್ನಲ್ಲಿರುವ ಮೌಂಟ್ವೇವ್ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ನಿಂದ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕರು ಉತ್ತಮ ಸಮಾಜದ ‘ನಿರ್ಮಾಪಕರಾಗಿದ್ದು, ಮಕ್ಕಳಲ್ಲಿನ ಅಜ್ಞಾನವೆಂಬ ಅಂಧಕಾರ ಅಳಿಸಿ ಜ್ಞಾನವೆಂಬ ಬೆಳಕನ್ನು ನೀಡಬೇಕು. ಶಿಕ್ಷಕರನ್ನು ಗೌರವಿಸುವ ಶ್ರೇಷ್ಠ ಕಾರ್ಯ ಪರಿಷತ್ ನಡೆಸುತ್ತದೆ. ಪ್ರಸ್ತುತ ಸಮಾಜದಲ್ಲಿ ಕೇವಲ ಅಂಕಗಳಿಕೆಗೆ ಪ್ರಾಧಾನ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಮಕ್ಕಳನ್ನು ಹಣಗಳಿಸುವ ಯಂತ್ರಗಳನ್ನಾಗಿಸುವುದನ್ನು ಬಿಟ್ಟು ಉತ್ತಮ ಸಂಸ್ಕಾರ ನೀಡುವುದು ಅತ್ಯವಶ್ಯಕವಾಗಿದೆ ಎಂದು ಶ್ಲಾಘಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್ ಮಾತನಾಡಿ, ಗುರುಗಳ ಮಾರ್ಗದರ್ಶನವಿಲ್ಲದೆ ಯಾರೊಬ್ಬರೂ ಯಶಸ್ವಿಯಾಗಲು ಸಾಧ್ಯವಿಲ್ಲ. ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಶಿಕ್ಷಕರ ಹಾಗೂ ಕನ್ನಡ ಸಾಹಿತ್ಯ ಪರಿಷತ್ನ ಕೊಡುಗೆ ಅಪಾರವಾಗಿದೆ. ನಿರಂತರ ಕಾರ್ಯಕ್ರಮಗಳ ಮೂಲಕ ಸಾಂಸ್ಕøತಿಕ ಜಿಲ್ಲೆಯನ್ನಾಗಿಸಲು ಕಸಾಪ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಪರಿಷತ್ತಿನಿಂದ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿಯೂ ಶಿಕ್ಷಕರನ್ನು ಗೌರವಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದ್ದೇವೆ. ಕನ್ನಡ ಭಾಷೆ ಎಂದರೆ ಮೂಗು ಮುರಿಯುವ ವಾತಾವರಣದಲ್ಲಿ ನಾವಿದ್ದೇವೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಗಡಿ ಭಾಗಗಳಿಗೆ ಹೋಗಿ ಕನ್ನಡದ ಜಾಗೃತಿ ಕೆಲಸ ಪರಿಷತ್ ಮಾಡುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಶಿವಶೆಟ್ಟಿ ಪಾಟೀಲ್ ಮಾತನಾಡಿ ಕೆಂಬಾಳೆ ಖ್ಯಾತಿಯ ಕಮಲಾಪುರದಲ್ಲಿ ನಿರಂತರ ಸಾಹಿತ್ತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸುರೇಶ್ ಲೆಂಗಟಿ ಅವರು ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಶ್ರಮಿಸುತ್ತಿದ್ದಾರೆ, bಕನ್ನಡದ ಬಗ್ಗೆ ಅಪಾರ ಕಾಳಜಿ ಪ್ರೇಮವನ್ನು ಹೊಂದಿರುವ ಅವರ ನಿರಂತರ ಶ್ರಮ ಲಾಭನೀಯವಾಗಿದೆ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ಸಂಸ್ಕಾರಗಳನ್ನು ಕಲಿಯಬೇಕು ಎಂದರು.ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ್ ಅವರು ಮಾತನಾಡಿ ಕನ್ನಡಕ್ಕೆ ಮೊಟ್ಟಮೊದಲ ಕೃತಿಯನ್ನು ಕೃತಿಯನ್ನು ನೀಡಿದ ಹೆಮ್ಮೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಇದೆ ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗರು ಈ ನೆಲದಲ್ಲಿ ರಾಜ್ಯಭಾರ ಮಾಡಿ ನಿಸ್ವಾರ್ಥ ಸೇವೆ ಸಾಮಾಜಿಕ ಕಳಕಳಿ ವಿಶ್ವ ಮಾನವ ಸಂದೇಶವನ್ನು ಸಾರಿದ್ದಾರೆ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ನೀಡಿದಂತ ಕೀರ್ತಿ ನಮ್ಮ ಭಾಗಕ್ಕೆ ಸಲ್ಲುತ್ತದೆ, ತೇಗಲ ತಿಪ್ಪಿ ಅವರ ನೇತೃತ್ವದಲ್ಲಿ ಜಿಲ್ಲೆಯ ಅದ್ಯಂತ ನಿರಂತರ ಕಾರ್ಯಕ್ರಮಗಳು ಹಮ್ಮಿಕೊಂಡು ಸಾಹಿತಿಕ ವಾತಾವರಣ ನಿರ್ಮಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪ್ರಕಾಶ ನರೋಣಾ ಮಾತನಾಡಿ ಕನ್ನಡ ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಆಂಗ್ಲ ಭಾಷೆಯ ಪ್ರಭಾವದಿಂದ ದೂರವಿದ್ದು ನಮ್ಮೆಲ್ಲಾ ಕನ್ನಡಿಗರ ಅನ್ನದ ಭಾಷೆಯಾದ ಕನ್ನಡ ಭಾಷೆಯನ್ನು ಉಳಿಸು ಬೆಳೆಸಲು ಶ್ರಮಿಸೋಣ ಎಂದರು.ಕಮಲಾಪುರ ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಪ್ರಮುಖರಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ರಾಜೇಂದ್ರ, ಮಿಟ್ಟೆಸಾಬ್ ಮುಲ್ಲಾ, ಸೋಮನಗೌಡ ವಿಟ್ಲಾಪುರ, ಮಹೇಶ ಚಿತ್ತಾಪಳ್ಳಿ, ರೋಹಿದಾಸ್, ಅನ್ನಪೂರ್ಣ ಉಳ್ಳಾಗಡ್ಡಿ, ರವೀಂದ್ರ ಬಿ.ಕೆ., ಸಂಜಯ ಕುಮಾರ ನಾಟೀಕರ್, ಅನಂತಕುಮಾರ ಪಾಟೀಲ್, ಪ್ರೇಮಾ ಅಂತಪನಾಳ, ಕಾವೇರಿ ಇತರರಿದ್ದರು.ಕೀರ್ತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೀತಿ ಹಾಗೂ ಸಂಗಡಿಗರು ಸ್ವಾಗತಿಸಿದರು. ಮೌಂಟ್ವೇವ್ ಪಿಯು ಕಾಲೇಜಿನ ಪ್ರಾಂಶುಪಾಲ ಮಹಾದೇವ ಬಡ ನಿರೂಪಣೆ ಮಾಡಿದರು. ಅನಂತಕುಮಾರ ಪಾಟೀಲ್ ಸ್ವಾಗತಿಸಿದರು. ಸಂಜಯಕುಮಾರ ನಾಟಿಕಾರ್ ವಂದಿಸಿದರು. ಹಲವರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.























