
ಮುದ್ದೇಬಿಹಾಳ: ಪಟ್ಟಣದ ವಿದ್ಯಾಸ್ಪೂರ್ತಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಸೆ.೫ ರಂದು ಶಿಕ್ಷಕರ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸಂಭ್ರಮದಿAದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಬಸಮ್ಮ ಸಿದರಡ್ಡಿ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ಶಿಕ್ಷಕರ ಮಾರ್ಗದರ್ಶನ ಹಾಗೂ ಸಂಸ್ಕಾರದಿAದ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯವೆಂದರು. ಶ್ರೀಕೃಷ್ಣ ಜನ್ಮಾಷ್ಟಮಿ ಕೇವಲ ಧಾರ್ಮಿಕ ಹಬ್ಬವಲ್ಲ, ಮಕ್ಕಳಿಗೆ ಶ್ರೀಕೃಷ್ಣನ ಜೀವನದ ಆದರ್ಶಗಳು ಹಾಗೂ ಭಗವದ್ಗೀತೆಯ ಸಂದೇಶವನ್ನು ತಿಳಿಸಿಕೊಡುವ ಮಹತ್ವದ ದಿನವಾಗಿದೆ. ಶ್ರೀಕೃಷ್ಣನು ಧರ್ಮ, ಸತ್ಯ, ಕರ್ತವ್ಯ ಮತ್ತು ನೀತಿಯ ಮಾರ್ಗದಲ್ಲಿ ನಡೆಯುವಂತೆ ಸಮಾಜಕ್ಕೆ ಸಂದೇಶ ನೀಡಿದ್ದಾನೆ. ವಿದ್ಯಾರ್ಥಿಗಳು ಶ್ರೀಕೃಷ್ಣನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿದ್ಯಾರ್ಥಿಗಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು.
ಈ ಸಮಯದಲ್ಲ್ಲಿ ರಾಮನಗೌಡ ಸಿದರಡ್ಡಿ, ಮಹಾಂತೇಶ ಸಿದರಡ್ಡಿ, ದೈಹಿಕ ಶಿಕ್ಷಕರಾದ ಚನ್ನಬಸು ಬಳವಾಟ, ಚಂದ್ರಶೇಖರ ತಬಸಿ, ರವಿಕುಮಾರ್ ಪತ್ತಾರ, ಅಭಿಷೇಕ ರಾಠೋಡ ಹಾಗೂ ಶಿಕ್ಷಕಿಯರಾದ ಶ್ರೀದೇವಿ ಹೀರೆಮಠ, ಅರ್ಷಿಯಾ ಮೋಮಿನ್, ಸುಮತಿ ಓಸ್ವಾಲ, ಸಂಗೀತಾ ಪಾಟೀಲ, ಜಯಶ್ರೀ ಪಾಟೀಲ, ಪವಿತ್ರಾ ಗುಡದಿನ್ನಿ, ಶೃತಿ ಹುಗಾರ, ವಿಜಯಲಕ್ಷಿ÷್ಮ ಗುಂಡಕರ್ಚಗಿ, ಶ್ರೀದೇವಿ ಪೂಜಾರಿ, ಶೈಲಾ ಹೀರೆಮಠ, ಜ್ಯೋತಿ ಚಿಗರಿ, ದಂಡಮ್ಮ ಮಡಿವಾಳರ, ರೇಣುಕಾ ಬಿರಾದಾರ ಹಾಗೂ ಜ್ಯೋತಿ ಸುಮ್ಮದ ಮೊದಲಾದವರು ಉಪಸ್ಥಿತರಿದ್ದರು.























