ಕಲಬುರಗಿ:ಸೆ.11:ನಿಸ್ವಾರ್ಥ ಸೇವೆಯೇ ರೋಟರಿ ಕ್ಲಬ್ಬಿನ ಮುಖ್ಯ ಉದ್ದೇಶ. ರೋಟರಿಯು ಮಿತ್ರರನ್ನು ಗಳಿಸುವಲ್ಲಿ ಸಹಾಯ ಮಾಡುವ ಏಕೈಕ ಸಂಸ್ಥೆ. ಜಗತ್ತಿನಲ್ಲಿ ಇಂದು ಪೆÇೀಲಿಯೋ ರೋಗ ಮುಕ್ತವಾಗಿರುವುದಕ್ಕೆ ರೋಟರಿಯೇ ಕಾರಣ ಎಂದು ರೋಟರಿ 3160ಜಿಲ್ಲೆಯ ಪಾಸ್ಟ್ ಗವರ್ನರ್ ಆದ ಶ್ರೀ ಮಣಿಲಾಲ್ ಶಹ ಅವರು ಕಲಬುರಗಿಯ ಪಬ್ಲಿಕ್ ಗಾರ್ಡನ್ ನಲ್ಲಿರುವ ರೋಟರಿ ಕ್ಲಬ್ ಶಾಲೆ ಆವರಣದಲ್ಲಿನ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ 10 ಸಪ್ಟೆಂಬರ್ 2025 ರಂದು ಸಾಯಂಕಾಲ 6:30ಕ್ಕೆ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು .
ಇದೇ ಸಂದರ್ಭದಲ್ಲಿ ಭಾರತ ಸರ್ಕಾರದಿಂದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಡೆದ ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಪ್ರಾಧ್ಯಾಪಕಿ ಡಾ. ಶ್ರೀದೇವಿ ಕಲ್ಯಾಣ ಯವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಕಲಬುರ್ಗಿಯ ನೂತನ ಕನ್ಯಾ ಮಹಾವಿದ್ಯಾಲಯದ ಶಿಕ್ಷಕರಾದ ಶ್ರೀ ಸುಭಾಷ್ ಮಹಾಗವ್ಕಾರ್, ನಗರೇಶ್ವರ ಬಾಲ ವಿಕಾಸ್ ಮಂದಿರ ಶಾಲೆಯ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಶ್ವೇತಾ ಡಿ ಸಗ್ಗನ್, ಎನ್ ಪಿ ಎಸ್ ಎಸ್ ಸ್ಕೂಲ್ ಶ್ರೀಮತಿ ರೋಜಾ ರೇವಣ್ಣ, ಚೇತನ್ ಸ್ಕೂಲಿನ ಸಹಾಯಕ ಶಿಕ್ಷಕರಾದ ಶ್ರೀಮತಿ ನಾಗವೇಣಿ ಹರಸೂರ್, ಕೇಂಬ್ರಿಡ್ಜ್ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಸುಮಾ ಕುಲಕರ್ಣಿ, ಸರ್ಕಾರಿ ಪ್ರಾಥಮಿಕ ಶಾಲೆ ಸೇಡಂನ ಶಿಕ್ಷಕಿಯಾದ ಶ್ರೀಮತಿ ಪದ್ಮಾವತಿ, ಹಿಂಗುಲಾಂಬಿಕ ಆಯುರ್ವೇದಿಕ್ ಕಾಲೇಜಿನ ಡಾ. ಅಲ್ಲಂಪ್ರಭು ಗುಡ್ಡ, ಸರ್ಕಾರಿ ಮಾಡಲ್ ಪ್ರೈಮರಿ ಸ್ಕೂಲ್ ಸಹಾಯಕ ಶಿಕ್ಷಕಿ ಶ್ರೀಮತಿ ಅಂಬುಬಾಯಿ ಕಲ್ಶೆಟ್ಟಿ, ಸರ್ಕಾರಿ ಪ್ರೌಢಶಾಲೆ ರಾಜಾಪುರ್ ಶಿಕ್ಷಕರಾದ ಶ್ರೀ ಬಸವಂತರಾಯ ಪೆದ್ದಿ ಅವರಿಗೆ ನೇಶನ್ ಬಿಲ್ಡರ್ಸ್ ಅವಾರ್ಡ್ ಪ್ರದಾನ ಮಾಡಿ ಸನ್ಮಾನಿಸಲಾಯಿತು. ದಿನೇಶ್ ಪಾಟೀಲ್ ನಿರೂಪಿಸಿದರು.
ಕಲಬುರ್ಗಿಯ ರೋಟರಿ ಕ್ಲಬ್ ಆಫ್ ಗುಲ್ಬರ್ಗ ನಾರ್ತ್ ಸಂಸ್ಥೆಯ ಅಧ್ಯಕ್ಷರಾದ
ಶ್ರೀ ಆನಂದ್ ದಂಡೋತಿ ಸ್ವಾಗತಿಸಿದರು. ಇನ್ನರ್ ವೀಲ್ ಕ್ಲಬ್ ಆಫ್ ನಾರ್ಥ್ ಅಧ್ಯಕ್ಷರಾದ ಶ್ರೀಮತಿ ನಮೃತಾ ಪತಾಟೆ ವಂದಿಸಿದರು. ಕಾರ್ಯದರ್ಶಿ ಶ್ರೀ ಶಿವಾನಂದ ಬೇಲೂರೆ ಕಾರ್ಯಕ್ರಮವನ್ನು ಸಂಘಟಿಸಿದರು.
ಪಿಡಿಜಿ ಶ್ರೀ ಮಾಣಿಕ್ ಪವರ್,
ಸಂಪತ ತಪಾಡಿಯ, ವಾಸ್ತುಶಿಲ್ಪಿ ಬಸವರಾಜ ಖಂಡೆ ರಾವ್ , ಡಾ.ನಾಗನಾಥ್ ಗಚ್ಚಿನಮನಿ, ಪ್ರಶಾಂತ್ ಮಾನಕರ್, ಸುಹಾಸ ಕಣಗೆ, ರಾಮಚಂದ್ರ ಶಾನಭೋಗ್, ಪ್ರಶಾಂತ ಚಿಟುಗುಪ್ಪ್ಕಾರ್ , ಲಿಂಗರಾಜ್ ಬಾವಿಕಟ್ಟಿ , ದೇವೇಂದ್ರ ಸಿಂಗ್ ಚೌಹಾಣ್ , ನೌಶಾದ್ ಇರಾನಿ , ಶರಣು ಪಪ್ಪಾ , ರಾಜೇಶ್ ಲಾಹೋಟಿ, ಅಜಿತ್ ಘಾಟ್ಗೆ ,ತನ್ಮೈಶಹ, ಶ್ರೀಶೈಲ್ ಪತಾಟೆ, ಅಭಿಜಿತ್ ಪಡಶೆಟ್ಟಿ, ವೈಜನಾಥ್ ಪಾಟೀಲ್, ಅನಿಲ್ ಮುಗಳಿ ಇನ್ನರ್ ವೀಲ್ ಕ್ಲಬ್ ಅಫ್ ಗುಲ್ಬರ್ಗ ನಾರ್ತ್ ಕಾರ್ಯದರ್ಶಿ ಶ್ರೀಮತಿ ಸವಿತಾ ಹಾಲಳ್ಳಿ ಮತ್ತು ರೋಟರಿ ಕ್ಲಬ್ ಆಫ್ ಗುಲ್ಬರ್ಗ ನಾರ್ತ್ ಮತ್ತು ಇನ್ನರ್ವಿಲ್ ಕ್ಲಬ್ ಆಫ್ ಗುಲ್ಬರ್ಗ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
























