ಶಿಕ್ಷಕ ರೈಸ್ ಶೇಖ್‍ನನ್ನು ಗಲ್ಲಿಗೇರಿಸಿ: ಬಲಾತ್ಕಾರ ಜಿಹಾದ್ ಬಗ್ಗೆ ಎಸ್.ಐ.ಟಿ ತನಿಖೆಯಾಗಲಿ: ಪಾಟೀಲ

ಬೀದರ್: ಸೆ.10:ಹುಮನಾಬಾದ ತಾಲೂಕಿನ ಶಾಲೆಯೊಂದರ ಶಿಕ್ಷಕ ರೈಸ್ ಶೇಖ್‍ನನ್ನು ಗಲ್ಲಿಗೇರಿಸಿ, ಈ ಬಲಾತ್ಕಾರ ಜಿಹಾದ್ ಬಗ್ಗೆ ಎಸ್.ಐ.ಟಿ ತನಿಖೆಯಾಗಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಈ ತಿಂಗಳ 28ರಂದು ಘಾಟಬೋರೊಳ ಗ್ರಾಮದ ಪ್ರಕಾಶ ವಿದ್ಯಾಲಯದಲ್ಲಿ ಈ ಹಿಂದೆಯೂ ಅಜ್ಮಿರ್‍ನಲ್ಲಿ ಶಾಲಾ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ ನಡೆದು ಜೀವಬೆದರಿಕೆ ಹಾಕಿರುವ ಘಟನೆ ಜರುಗಿತು. ಅದೇ ಮಾದರಿಯಲ್ಲಿ ಜಿಲ್ಲೆಯ ಹುಮನಾಬಾದನಲ್ಲಿಯೂ ಘನಘೋರ ಪ್ರಕರಣ ಜರುಗಿದೆ. ಈ ಕುರಿತು ಸರ್ಕಾರ ಆರೋಪಿಯ ರಕ್ಷಣೆ ಮಾಡದೆ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದೇ ರೀತಿ ನಿರಂತರವಾಗಿ ಹಿಂದೂ ಹೆಣ್ಣುಮ ಮಕ್ಕಳ ಮೇಲೆ, ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದು, ಶಿಕ್ಷಕ ರಯಿಸ್ ಶೇಖ್ ಹಿಂದೆ ಯಾರ್ಯಾರಿದ್ದಾರೆ? ಅವನಿಗೆ ಹಣ ಎಲ್ಲಿಂದ ಬರುತ್ತಿದೆ? ಅವನಲ್ಲಿ ಇಷ್ಟೊಂದು ಧೈರ್ಯ ಹೇಗೆ ಬಂತು ಎಂಬ ಕುರಿತು ತನಿಖೆಯಾಗಲಿ ಎಂದರು.
ಇದೊಂದು ಲವ್ ಜಿಹಾದ್ ಅಲ್ಲ. ಬದಲಾಗಿ ಇದು ಬಲಾತ್ಕಾರ ಜಿಹಾದ್ ಆಗಿದೆ. ರಾಜ್ಯದಲ್ಲಿ ಗಲಭೆಗಳು ನಡೆಯುತ್ತಿದ್ದರೂ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ. ಆರೋಪಿಗಳು ಕೂಡಾ ನಮ್ಮ ಹಿಂದೆ ಸಿಎಂ ಇದ್ದಾರೆ. ಏನಾದರೂ ಅಪರಾಧ ಮಾಡಿದರೆ ಕ್ಯಾಬಿನೇಟ್‍ನಲ್ಲಿ ನಮ್ಮ ಮೇಲಿನ ಕೇಸ್ ವಾಪಸ್ ಪಡೆಯುತ್ತಾರೆ ಎನ್ನುವ ಧೈರ್ಯ ಆರೋಪಿಗಳಲ್ಲಿದೆ ಎಂದು ಅಧ್ಯಕ್ಷ ಪಾಟೀಲ ಆರೋಪಿಸಿದರು.
ಹುಮನಾಬಾದ ಶಾಸಕ ಸಿದ್ದು ಪಾಟೀಲ ಮಾತನಾಡಿ, ನಮ್ಮ ತಾಲೂಕಿನಲ್ಲಿ ಇಂತಹ ಪ್ರಕರಣ ನಡೆದರೂ ತನಿಖೆ ಕುರಿತು ಪೊಲೀಸರು ನಮಗೆ ಏನೂ ತಿಳಿಸುತ್ತಿಲ್ಲ. ತಾಲೂಕಿನಲ್ಲಿ ಅಧಿಕಾರಿಗಳು ಸರಿಯಿಲ್ಲ. ಪೊಲೀಸ್ ಇಲಾಖೆ ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹಿಂದುಗಳೆಂದರೆ ಅಷ್ಟು ಶತ್ರುತ್ವ. ಅನ್ಯ ಧರ್ಮಿಯರು ಕಂಡರೆ ಗೌರವಿಸುವ ಸುದ್ಧರಾಮಯ್ಯ ಕೆಸರಿ ಟೋಪಿ ಎಂದರೆ ಅಷ್ಟು ಅಸಡ್ಡೆ ಇವರಿಗೆ. ಪೋಲಿಸ್‍ರು ಹಾಗೂ ಮಂತ್ರಿಗಳು ತಮ್ಮ ಅಧಿಕಾರ ಸ್ವೀಕರಿಸುವ ಮುನ್ನ ಪ್ರತಿಜ್ಞೆ ಮಾಡಿರುತ್ತಿರಿ. ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿರುತ್ತಿರಿ. ಹಿಂದು ದೇವಾಲಯಗಳ ರಕ್ಷಣೆ ಮಾಡಬೇಕು, ಮುಖ್ಯಮಂತ್ರಿಗಳು ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಘಟನೆ ನಡೆದಲ್ಲಿಗೆ ಬಂದು ತನಿಖೆ ಕೈಗೊಳ್ಳಬೇಕೆಂದು ಕರೆ ಕೊಟ್ಟರು.
ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, ಆರೋಪಿ ಮಾತನಾಡಿದ್ದಾನೆ ಎನ್ನುವ ಆಡಿಯೋ ಬಿಡುಗಡೆಯಾಗಿದೆ. ನಾನೇ ನಾಲ್ಕು ಜನ ಹುಡುಗಿಯರನ್ನು ಲಾಡ್ಜ್‍ಗೆ ಕರೆದುಕೊಂಡು ಹೋಗಿದ್ದೇನೆ ಎಂದು ಹೇಳಿದರೂ ತನಿಖೆಯಾಗುವುದಿಲ್ಲ. ಆದ್ದರಿಂದ ಸಿಎಂ ಮತ್ತು ಗೃಹ ಸಚಿವರು ಶಾಲೆಗೆ ಭೇಟಿ ನೀಡಿ ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿಕೊಡಿ. ಧರ್ಮಸ್ಥಳದಂತಹ ಸಣ್ಣ ವಿಷಯಕ್ಕೆ ಎಸ್‍ಐಟಿ ತನಿಖೆ ಮಾಡಿಸುವ ಸರ್ಕಾರ ಇಂತಹ ದೊಡ್ಡ ಬಲಾತ್ಕಾರ ಪ್ರಕರಣ ಜರುಗಿದೆ. ಇದನ್ನೂ ಎಸ್‍ಐಟಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಬೀದರ್ ಉತ್ತರ ಕ್ಷೇತ್ರದ ಮುಖಂಡರಾದ ಈಶ್ವರಸಿಂಗ್ ಠಾಕೂರ್, ಪ್ರಮುಖರಾದ ದಿಗಂಬರರಾವ ಮಾನಕಾರಿ, ರಾಜಶೇಖರ ನಾಗಮೂರ್ತಿ, ಬಸವರಾಜ ಪವಾರ್, ಶಿವು ಲೊಖಂಡೆ, ಮಾಧವ ಹಸೂರೆ, ಕಿರಣ ಪಾಟೀಲ, ಲುಂಬಿಣಿ ಗೌತಮ, ಶ್ರೀನಿವಾಸ ಚೌಧರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.