Home ಜಿಲ್ಲೆ ಕಲಬುರಗಿ ಶಿಕ್ಷಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ : 20 ಸಾವಿರ ರೂ. ದೋಚಿ ಪರಾರಿ

ಶಿಕ್ಷಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ : 20 ಸಾವಿರ ರೂ. ದೋಚಿ ಪರಾರಿ

ಅಫಜಲಪೂರ :ಮಾ.31: ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಮುಖ್ಯ ಶಿಕ್ಷಕನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ 20 ಸಾವಿರ ರೂಪಾಯಿ ನಗದು ದೋಚಿಕೊಂಡು ಪರಾರಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಹಲ್ಲೆಗೆ ಒಳಗಾದ ಶಿಕ್ಷಕ ಲಕ್ಷ್ಮಣ ಜೋಗುರ ಅವರ ಪ್ರಕಾರ, ಭಾನುವಾರ ರಾತ್ರಿ ಸುಮಾರು 9:30 ಗಂಟೆ ಸುಮಾರಿಗೆ ಕೆಲವು ಯುವಕರು ಬರ್ತ್‍ಡೇ ಪಾರ್ಟಿ ನಡೆಸಿ ಉಳಿದ ಕೇಕ್ ಅನ್ನು ಅವರ ಫ್ಯಾಮಿಲಿ ರೆಸ್ಟೋರೆಂಟ್ ಮುಂದೆ ತಂದು ಎಸೆಯಲು ಮುಂದಾಗಿದ್ದಾರೆ. ಈ ವೇಳೆ ಶಿಕ್ಷಕರ ಮಗ “ಇಲ್ಲಿ ಕಸ ಎಸೆಯಬೇಡಿ” ಎಂದು ತಡೆದಿದ್ದರಿಂದ ಆರೋಪಿಗಳು ಕೋಪಗೊಂಡಿದ್ದಾರೆ.
ಇದರಿಂದ ಉದ್ವಿಗ್ನಗೊಂಡ ದುಷ್ಕರ್ಮಿಗಳು ಮಾರಕಾಸ್ತ್ರಗಳು, ಕಲ್ಲುಗಳು ಹಾಗೂ ದೊಣ್ಣೆಗಳಿಂದ ಶಿಕ್ಷಕ ಲಕ್ಷ್ಮಣ ಜೋಗುರ ಮತ್ತು ಅವರ ಮಗನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೇಳೆ ಆರೋಪಿಗಳು ಜೀವ ಬೆದರಿಕೆ ಹಾಕಿ, ಅವರ ಬಳಿ ಇದ್ದ ಸುಮಾರು 20 ಸಾವಿರ ರೂ. ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ, ಹಲ್ಲೆ ವೇಳೆ ಆರೋಪಿಗಳು ತಳವಾರರೂ ನೀವು ಮುಸರಿ ತೊಳೆಯುವದು ಬಿಟ್ಟು ಇಲ್ಲೇಕೆ ಬಂದು ಕೆಲಸ ಮಾಡ್ತಿದೀರಿ ಜೊತೆಗೆ ಇನ್ನಷ್ಟು ಅಸ್ಲಿಲ ಶಬ್ದಗಳು ಬಳಸಿ ಅವಾಚ್ಯವಾಗಿ ತಳವಾರ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಗಂಭೀರವಾಗಿ ಗಾಯಗೊಂಡಿರುವ ಶಿಕ್ಷಕ ಮತ್ತು ಅವರ ಮಗನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಬಂಧ ಪೆÇಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ದೂರು ನೀಡಿದ ನಂತರ ಪೆÇಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.ನಂತರ ಮಾತನಾಡಿದ ರಮೇಶ್ ಜಮಾದಾರ ಚೌಡಾಪುರದಲ್ಲಿ ಸಾಕಷ್ಟು ರಾಬರಿ ಹಾಗೂ ಹಪ್ತಾ ವಸೂಲಿ ದಂದೆ ಬಹಳಷ್ಟು ನಡೆಯುತ್ತಿದೆ,ರಾತ್ರಿಯಾದರೆ ಸಾಕು ಯಾರಿಗೂ ಪೆÇಲೀಸರ ಭಯ ಇಲ್ಲದಂತಾಗಿದೆ, ರಾತ್ರಿ ಹೊತ್ತು ಗಸ್ತು ತಿರುಗುವದನ್ನು ಪೆÇಲೀಸರು ಕೈಬಿಟ್ಟಿದ್ದಾರೆ ಇದರಿಂದ ಸಾರ್ವಜನಿಕರ ಮೇಲೆ ಹಲ್ಲೆ, ಜೀವಬೆದರಿಕೆ, ಕಳ್ಳತನದಂತ ಪ್ರಕರಣಗಳು ಜಾಸ್ತಿಯಾಗುತ್ತಿವೆ, ಪೆÇಲೀಸ್ ಇಲಾಖೆಯ ನಿರ್ಲಕ್ಷತನ ಇಲ್ಲಿ ಸಾಕಷ್ಟು ಎದ್ದು ಕಾಣುತ್ತಿದೆ ಕೂಡಲೇ ಪೆÇಲೀಸ್ ಇಲಾಖೆ ರಾತ್ರಿ ಗಸ್ತು ಕಾರ್ಯ ಹೆಚ್ಚಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಹಾಗೂ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಭಂದಿಸಬೇಕು ಎಂದು ಆಗ್ರಹಿಸಿದರು.
ಗ್ರಾಮದಲ್ಲಿ ಈ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.