
ಕಲಬುರಗಿ:ಡಿ.13:ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನಡಿ ಕಾರ್ಯ ನಿರ್ವಹಿಸುವ Iಅಂಖ ಕೃಷಿ ವಿಜ್ಞಾನ ಕೇಂದ್ರ ರದ್ದೆವಾಡ್ಗಿಯಲ್ಲಿ ದಿನಾಂಕ 10-12-2025 ರಂದು ನಡೆದ ಹನ್ನೋಂದನೆ ವೈಜ್ಞಾನಿಕ ಸಲಾಹ ಸಮಿತಿ ಸಭೆಯನ್ನು ಡಾ|| ಎಮ್.ಜೆ. ಚಂದ್ರೆಗೌಡ ಪ್ರಧಾನ ವಿಜ್ಞಾನಿ ಹಾಗೂ ನೋಡಲ್ ಅಧಿಕಾರಿಗಳು ಅಟಾರಿ ಬೆಂಗಳೂರು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ಥಾವಿಕ ನುಡಿಯನ್ನು ಮಾತಾನಾಡುತ್ತಾ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರಿಗೆ ವಿಜ್ಞಾನದ ಸತ್ಯಗಳನ್ನು ಭೊದಿಸಬೇಕು ಹಾಗೂ ಕೃಷಿಯಲ್ಲಿ ಸಂಶೋದಿಸಿರುವ ತಂತ್ರಜ್ಞಾನಗಳನ್ನು ಮತ್ತು ಪ್ರಾತ್ಯಕ್ಷತೆಗಳನ್ನು ಹಾಗೂ ತರಬೇತಿಗಳ ಮುಖಾಂತರ ರೈತರಿಗೆ ಮನವರಿಕೆ ಮಾಡಿಕೊಡಬೇಕೆಂದು ಹಾಗೂ ಹವಮಾನ ವೈಪರಿತ್ಯಾ ಅನುಸಾರವಾಗಿ ಬೆಳೆಗಳ ಪ್ರಾತ್ಯಕ್ಷತೆಗಳನ್ನು ಕೃಷಿ ವಿಜ್ಞಾನ ಕೇಂದ್ರದ ಕ್ಷೇತ್ರದ ತಾಕುಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಲಬುರಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ. ಸಿದ್ರಾಮಪ್ಪ ದಂಗಾಪೂರ ರವರು ಮಾತಾನಾಡುತ್ತಾ ಕೃಷಿ ವಿಶ್ವವಿದ್ಯಾಲಯದ ಹಲವಾರು ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದ್ದನ್ನು ರೈತರು ತಮ್ಮ ಹೋಲಗಳಲ್ಲಿ ಅನುಸರಿಸಿ ಹೆಚ್ಚಿನ ಆದಾಯ ಪಡೆಯಬೇಕು ಹಾಗೂ ಜೇವರ್ಗಿ ತಾಲ್ಲೂಕಿನ ರೈತರು ತಮ್ಮ ಜಮೀನುಗಳನ್ನು ಆಂಧ್ರಾ ರೈತರಿಗೆ ಗುತ್ತಿಗೆ ಕೊಡುವುದನ್ನು ನಿಲ್ಲಿಸಬೇಕೆಂದು ವಿನಂತಿಸಿದರು. ಮುಖ್ಯಅಥಿಗಳಾಗಿ ಆಗಮಿಸಿದ ಕರ್ನಾಟಕ ಪಶು ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ|| ಬಸವರಾಜ ಅವಟಿ ಕಾರ್ಯಕ್ರಮದ ಕುರಿತು ಮಾತಾನಾಡಿ ರೈತರು ಕೃಷಿ ಜೊತೆಗೆ ಹೆನುಗಾರಿಕೆ, ಕೋಳಿ ಸಾಕಾಣಿಕೆ, ಹಾಗೂ ಮೀನುಗಾರಿಕೆ ಒಳಗೊಂಡ ಸಮಗ್ರ ಕೃಷಿಗೆ ಉತ್ತೇಜನ ನೀಡಬೇಕೆಂದು ಕರೆನೀಡಿದರು. ಶ್ರೀ. ತಿಪ್ಪಣ್ಣ ರೆಡ್ಡಿ, ಪ್ರಗತಿಪರ ರೈತರು ಹಾಗೂ ಹಾಪಕಾಮ ನಿರ್ದೇಶಕರು ಮಾತಾನಾಡುತ್ತ, ರೈತರು ಕೃಷಿ ವಿಜ್ಞಾನ ಕೇಂದ್ರದ ಸಲಹೆಗಳನ್ನು ಹಾಗೂ ಸವಲತ್ತುಗಳನ್ನು ಬಳಸಿಕೊಂಡು ಮುಂದೆಬರಬೇಕೆಂದು ತಿಳಿಸಿದರು. ಡಾ|| ಬಿ. ವಿ. ತಂಬುರ್ನೆ, ಸಹ ಸಂಶೋಧನ ನಿರ್ದೇಶಕರು ಮಾತನಾಡಿ, ಅಲ್ಪ ಅವದಿಯ ತೊಗರಿ ತಳಿಗಳನ್ನು ಹಾಗೂ ಮೇಣಸಿನಾಕಾಯಿ ಸಂಕರ್ಣ ತಳಿಗಳನ್ನು ಬೆಳೆಯಬೇಕೆಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಹಿಸಿರುವ ಡಾ|| ಎ. ಆರ್. ಕುರುಬರ್, ವಿಸ್ತರಣಾ ನಿರ್ದೇಶಕರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ರವರು ಮಾತನಾಡಿ ಹವಮಾನ ವ್ಯಪರಿತ್ಯಾ ಅನುಸಾರವಾಗಿ ವಿಜ್ಞಾನಿಗಳು ಮುಂಚುಣಿ ಪ್ರಾತ್ಯಕ್ಷೆತೆಗಳು, ತರೆಬೇತಿಗಳು ಹಾಗೂ ಮುಂದಿನ ವರ್ಷದ ದಿನಗಳಲ್ಲಿ ಕಾರ್ಯಕ್ರಮ ರೂಪಿಸಬೇಕು ಹಾಗೂ ಕಬ್ಬು ಮತ್ತು ಏಳ್ಳು ಬೆಳೆಗಳ ಸಂಪೂರ್ಣ ಬೇಸಾಯ ಕ್ರಮಗಳನ್ನು ರೈತರಿಗೆ ಮನದಟ್ಟ ಮಾಡಲು ಕೇಂದ್ರದಲ್ಲಿ ಬೆಳೆಗಳನ್ನು ಬೆಳೆಸಬೇಕು ಹಾಗೂ ತೋಟಾಗಾರಿಕ ಬೆಳೆಗಳ ನರ್ಸರಿಗಳನ್ನು ಪ್ರಾರಬಿಸಬೇಕೆಂದು ತಿಳಿಸಿದರು. ಡಾ|| ಪಿ. ವಾಸುದೇವ ನಾಯ್ಕ್, ಹಿರಿಯ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡ್ಗಿ ರವರು ಹತ್ತನೆ ವೈಜ್ಞಾನಿಕ ಸಲಹಾ ಸಮಿತಿಯ ಶಿಫಾರೆಸಿನ ಕೈಗೊಂಡ ಕಾರ್ಯಗಳನ್ನು ಹಾಗೂ ಕೇಂದ್ರದ ಪ್ರಗತಿ ವರದಿಯನ್ನು ಮಂಡಣೆ ಮಾಡಿದರು. ಈ ಸಭೆಯಲ್ಲಿ ಭಾಗವಹಿಸಿದ ಅಭಿವೃದ್ದಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ. ಚಂದ್ರಕಾಂತ ಜಿವಣಿಗಿ, ಹಿರಿಯ ಸಾಹಯಕ ತೋಟಗಾರಿಕೆ ನಿರ್ದೇಶಕರಾದ ಮೊಹಮ್ಮದ ಸಮಿಯೊದ್ದೀನ್, ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ|| ಶೋಭಾ ಸಜ್ಜನ ರವರು ಹಲವಾರು ಸಮಸ್ಯಗಳಿಗೆ ಪರಿಹಾರ ನೀಡಲು ಸಂಶೋಧನ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುಂದಿನ ದಿನಗಳಲ್ಲಿ ಪರಿಹಾರ ನೀಡಬೇಕೆಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ವಿವಿಧ ಗ್ರಾಮದಿಂದ ಬಂದ ರೈತರು ಉಪಸ್ಥಿತರಿದ್ದು ತಾವು ಬೆಳೆದ ಬೆಳೆಗಳ ಬಹಳಷ್ಟು ಸಮಸ್ಯಗಳನ್ನು ತಿಳಿಸಿದರು. ಅವುಗಳಿಗೆ ವಿಜ್ಞಾನಿಗಳು ಉತ್ತರಿಸಿದರು. ಸಭೆಗೆ ಮೊದಲು ಕೃಷಿ ಹೊಂಡ ಪ್ರಾತ್ಯಕ್ಷತೆ ಘಟಕ ಹಾಗೂ ಮಳೆನೀರು ಇಂಗಿಸಲು ಬೊರವೇಲ್ ರಿಚಾರ್ಜ ಮಾದರಿಯ ಪ್ರಾತ್ಯಕ್ಷತೆ ಘಟಕಗಳು ಮತ್ತು ವಿವಿಧ ತಂತ್ರಜ್ಞಾನಗಳ ಹಸ್ತಪ್ರತಿ ಹಾಗೂ ವಿವಿಧ ತಂತ್ರಜ್ಞಾನದ ಪೋಸ್ಟರಗಳನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ನಿರುಪಣೆಯನ್ನು ಡಾ|| ಮಲ್ಲಪ್ಪ ವಿಜ್ಞಾನಿ (ಬೇಸಾಯ ಶಾಶ್ತ್ರ) ನಡೆಸಿಕೊಟ್ಟರು. ಕೊನೆಯಯದಾಗಿ ಡಾ. ಜ್ಞಾನದೇವ್ ಬುಳ್ಳ ವಿಜ್ಞಾನಿ (ಬೀಜ ವಿಜ್ಞಾನ & ತಂತ್ರಜ್ಞಾನ) ರವರು ವಂದನಾರ್ಪಣೆ ಮಾಡಿದರು. ಈ ಸಭೆಯಲ್ಲಿ ಸುಮಾರು ಐವತ್ತು ಜನ ರೈತರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ಸಿಬಂದಿ ವರ್ಗದವರು ಉಪಸ್ಥತರಿದ್ದರು.

























